Karnataka Times
Trending Stories, Viral News, Gossips & Everything in Kannada

Money Transfer: ಒಂದೇ ಬ್ಯಾಂಕ್ ಖಾತೆಯಿಂದ ಬೇರೆ ಬೇರೆಯವರಿಗೆ ಹಣ ಕಳುಹಿಸುವವರಿಗೆ ಹೊಸ ರೂಲ್ಸ್

advertisement

ಲೋಕಸಭಾ ಎಲೆಕ್ಷನ್ ಕಾವು ಜೋರಾಗಿದೆ. ಪ್ರತಿಯೊಂದು ಪಕ್ಷವು ಕೂಡ ಅಧಿಕಾರದ ಚುಕ್ಕಾಣಿ ಹಿಡಿಯುವುದಕ್ಕೆ ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ಅಷ್ಟೇ ಅಲ್ಲ ತಾವು ಅಧಿಕಾರಕ್ಕೆ ಬಂದರೆ ಜನರಿಗೆ ಯಾವೆಲ್ಲಾ ಪ್ರಯೋಜನಗಳನ್ನು ಮಾಡಿಕೊಡಲಿದ್ದೇವೆ ಎನ್ನುವುದನ್ನು ಘೋಷಣೆ ಮಾಡಿದ್ದಾರೆ.

ಚುನಾವಣಾ ಅಕ್ರಮ ತಡೆಯಲು ಕ್ರಮ:

ಯಾವುದೇ ಚುನಾವಣೆ ಇದ್ದರೂ ಅಂದ್ರೆ ವಿಧಾನಸಭಾ ಎಲೆಕ್ಷನ್ ಇರಬಹುದು ಅಥವಾ ಲೋಕಸಭಾ ಎಲೆಕ್ಷನ್ ಇರಬಹುದು ಎಲ್ಲದರಲ್ಲೂ ಒಂದಲ್ಲ ಒಂದು ರೀತಿಯ ವಂಚನೆ ನಡೆದೇ ನಡೆಯುತ್ತೆ. ಜನರಿಗೆ ಹಣದ ಆಮಿಷ ತೋರಿಸಿ ಮತ ಪಡೆದುಕೊಳ್ಳುವ ತಂತ್ರವನ್ನು ಪಕ್ಷಗಳು ಮಾಡುತ್ತವೆ. ಚುನಾವಣಾ ಆಯೋಗ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದ್ದು ಅಷ್ಟು ಸುಲಭವಾಗಿ ಹಣ ವಿತರಣೆ ಮಾಡಲು ಸಾಧ್ಯವಿಲ್ಲ. ಆದರೂ ಚುನಾವಣಾ ಆಯೋಗದ ಕಣ್ಣು ತಪ್ಪಿಸಿ ಸಾಕಷ್ಟು ವಂಚನೆ ಚಟುವಟಿಕೆಗಳು ನಡೆಯಬಹುದು. ಇದಕ್ಕೆಲ್ಲಾ ಕಡಿವಾಣ ಹಾಕಲು ಮುಂದಾಗಿರುವ ಚುನಾವಣಾ ಆಯೋಗ ಈಗ ಮತ್ತೊಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

ಅನುಮಾನಾಸ್ಪದ ವಹಿವಾಟು ನಡೆದರೆ ಮಾಹಿತಿ ನೀಡಿ:

 

advertisement

Image Source: Mint

 

ಚುನಾವಣಾ ವಿಭಾಗದ ವಿಶೇಷ ಆಯುಕ್ತರು, ಸೆಲ್ವಮಣಿ ಬ್ಯಾಂಕ್ ನೋಡಲ್ ಅಧಿಕಾರಿಗಳ ಜೊತೆಗೆ ಈಗಾಗಲೇ ಮೀಟಿಂಗ್ ನಡೆಸಿದ್ದು, ಒಂದೇ ಖಾತೆ (Bank Account) ಯಿಂದ ಬೇರೆ ಬೇರೆ ಜನರ ಖಾತೆಗೆ ಹಣ ವರ್ಗಾವಣೆ (Money Transfer) ಆದರೆ ಅಂತಹ ಅನುಮಾನಾಸ್ಪದ ಹಣಕಾಸಿನ ವಹಿವಾಟು ನಡೆದರೆ ತಕ್ಷಣ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಲಾಗಿದೆ.

 

Image Source: Paytm

 

ಒಂದೇ ಖಾತೆ (Bank Account) ಯಿಂದ ಬೇರೆ ಬೇರೆ ಖಾತೆಗೆ ಹಣ ವರ್ಗಾವಣೆ (Money Transfer) ಆದರೆ ತಕ್ಷಣ ಆ ಮಾಹಿತಿಯನ್ನು ನಮಗೆ ನೀಡಬೇಕು. ಒಂದು ವೇಳೆ ಇದನ್ನ ಹೇಳದೆ ನೀವು ಸುಮ್ಮನೆ ಇದ್ದರೆ ಮುಂದಿನ ದಿನಗಳಲ್ಲಿ ನೀವು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಸೆಲ್ವಮಣಿ ಅವರು ಕಟ್ಟುನಿಟ್ಟಾಗಿ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಯಾವುದೇ ಅಕ್ರಮ ನಡೆಯಬಾರದು ಎನ್ನುವ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ.

advertisement

Leave A Reply

Your email address will not be published.