Karnataka Times
Trending Stories, Viral News, Gossips & Everything in Kannada

Money Transfer: ಇನ್ಮುಂದೆ ಹಣ ವರ್ಗಾಯಿಸಲು UPI ಅಗತ್ಯವಿಲ್ಲ, ಹೊಸ ವ್ಯವಸ್ಥೆ ಪರಿಚಿಯಿಸಿದ RBI

advertisement

ಇಂದು ಸಾಮಾನ್ಯವಾಗಿ ಪ್ರತಿಯೊಬ್ಬರು ಕ್ಯಾಶ್ ಲೆಸ್ ವ್ಯವಹಾರವನ್ನೇ ಹೆಚ್ಚಾಗಿ ಮಾಡುತ್ತಾರೆ. ನಮ್ಮ ಬಳಿ ನಗದು ಹಣ ಇಲ್ಲದೆ ಇದ್ದರೂ ಬ್ಯಾಂಕ್ ಖಾತೆಯಲ್ಲಿ ಹಣ ಇದ್ರೆ ಸಾಕು ಯಾವುದೇ ಪ್ರದೇಶದಲ್ಲಿಯೂ ಯಾವುದೇ ವಸ್ತು ಖರೀದಿ ಮಾಡಿದರು ಕೂಡ ಹಣ ಪಾವತಿ ಮಾಡಬಹುದು. ಅಷ್ಟೇ ಅಲ್ಲ ಒಬ್ಬರಿಂದ ಇನ್ನೊಬ್ಬರ ಖಾತೆಗೆ ಹಣ ವರ್ಗಾವಣೆ (Money Transfer) ಮಾಡಲು UPI, RTGS, NEFT ಮೊದಲದ ಬೇರೆ ಬೇರೆ ವಿಭಿನ್ನ ರೂಪದ ಪಾವತಿ ವ್ಯವಸ್ಥೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಪರಿಚಯಿಸಿದೆ.

RBI ಪ್ರಕಾರ ಈ ಮೇಲಿನ ಪೇಮೆಂಟ್ ವ್ಯವಸ್ಥೆಗಳು ಯಾವುದೇ ಸಂದರ್ಭದಲ್ಲಿ ಯಾವುದೇ ಸ್ಥಳದಲ್ಲಿ ಹಣ ಪಾವತಿ ಮಾಡಲು ಸಹಾಯ ಮಾಡುತ್ತದೆ. ಇವು ಸಾಂಪ್ರದಾಯಿಕ ತಂತ್ರಜ್ಞಾನಗಳಿಗಿಂತಲೂ ಭಿನ್ನವಾಗಿರುವ ಲೈಟ್ವೈಟ್ ಮತ್ತು ಪೋರ್ಟಬಲ್ ಪಾವತಿ ವ್ಯವಸ್ಥೆ (lightweight and Portable Payment System) ಆಗಿದೆ. ಕಡಿಮೆ ಆದಾಯ ಹೊಂದಿರುವವರು ಕೂಡ ಈ ಪಾವತಿ ವ್ಯವಸ್ಥೆಯನ್ನು ಸುಲಭವಾಗಿ ಬಳಸಿಕೊಳ್ಳಬಹುದು.

RBI ಪರಿಚಯಿಸಿರುವ ಹೊಸ ಪಾವತಿ ವ್ಯವಸ್ಥೆ:

 

advertisement

 

ಪ್ರಸ್ತುತ ಅಸ್ತಿತ್ವದಲ್ಲಿ ಇರುವ RTGS (Real Time Gross Settlement), NEFT (National Electronic Fund Transfer), ಮತ್ತು UPI (Unified Payment Interface) ಪಾವತಿಗಾಗಿ ವಿನ್ಯಾಸಗೊಳಿಸಲಾಗಿರುವ ವ್ಯವಸ್ಥೆ ಆಗಿದೆ. ಈ ವ್ಯವಸ್ಥೆಗಳು ಸುಧಾರಿತ IT ಮತ್ತು ಸಂಕೀರ್ಣ ವೈರಿಂಗ್ ನೆಟ್ವರ್ಕ್ ಗಳನ್ನು ಅವಲಂಬಿಸಿದ್ದು ಯಾವುದೇ ನೈಸರ್ಗಿಕ ವಿಕೋಪಗಳು ಅಥವಾ ಯುದ್ಧದಂತಹ ವಿನಾಶಕಾರಿ ಘಟನೆ ನಡೆಯುವ ಸಂದರ್ಭದಲ್ಲಿ ಈ ವ್ಯವಸ್ಥೆಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಬಹುದು ಎಂದು RBI ತನ್ನ ವಾರ್ಷಿಕ ವರದಿಯಲ್ಲಿ ಪ್ರಕಟಿಸಿದೆ.

ಕಡಿಮೆ ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆ ನಡೆಸಬಹುದಾದ LPSS:

ಹಾಗಾಗಿ ಇಂತಹ ಪರಿಸ್ಥಿತಿಗಳನ್ನು ಎದುರಿಸಲು ನಾವು ಸದಾ ಸಿದ್ಧರಿರುವುದು ಒಳ್ಳೆಯದು ಎಂದು ರಿಪೋರ್ಟ್ ಕೂಡ ತಿಳಿಸುತ್ತದೆ. ಇಂತಹ ಸಂದರ್ಭದಲ್ಲಿ ಆರ್ ಬಿ ಐ LPSS ಅನು ಸೂಚಿಸುತ್ತದೆ ಅಂದರೆ ಸಾಂಪ್ರದಾಯಿಕ ತಂತ್ರಜ್ಞಾನಗಳಿಂದ ಸ್ವತಂತ್ರವಾಗಿರುವ ಹಾಗೂ ಕಡಿಮೆ ವೆಚ್ಚವನ್ನು ಹೊಂದಿರುವ ಪಾವತಿ ವ್ಯವಸ್ಥೆ ಆಗಿರುತ್ತದೆ ಹಾಗೂ ಇದು ಅತ್ಯಂತ ಕಡಿಮೆ ಉದ್ಯೋಗಿಗಳನ್ನು ಹೊಂದಿದ್ದು, ಎಲ್ಲಿ ಬೇಕಾದರೂ ಎಲ್ಲಿಂದ ಬೇಕಾದರೂ ಕಾರ್ಯ ನಿರ್ವಹಿಸುವಂತಹ ವ್ಯವಸ್ಥೆ ಆಗಿದೆ. RBI ತನ್ನ ವಾರ್ಷಿಕ ವರದಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ.

advertisement

Leave A Reply

Your email address will not be published.