Karnataka Times
Trending Stories, Viral News, Gossips & Everything in Kannada

Money Transfer: ತಪ್ಪಾಗಿ ಬೇರೆಯವರ ಖಾತೆಗೆ ಹಣ ವರ್ಗಾವಣೆ ಆದರೆ ಹಿಂಪಡೆಯಲು ಈ ಸುಲಭ ವಿಧಾನ ಅನುಸರಿಸಿ!

advertisement

ಯೂನಿಫೈಡ್ ಇಂಟರ್ಫೇಸ್ ಲಿಂಕ್ (UPI) ಜನರ ಹಣಕಾಸಿನ ವಹಿವಾಟನ್ನು ಸುಲಭವಾಗಿಸಿದೆ. ಇಂದು Online Shopping, Ticket Booking, Mobile Recharge, ಯಾವುದೇ ರೀತಿಯ ಪೇಮೆಂಟ್ ಗಳನ್ನು ಮಾಡಲು ಕೂಡ ಯುಪಿಐ ಅನ್ನು ಬಳಸುತ್ತೇವೆ. UPI ನಲ್ಲಿ ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ರಿಜಿಸ್ಟರ್ ಮಾಡಿಕೊಂಡು ಆ ಮೂಲಕ ಬೇರೆಯವರ ಖಾತೆಗೆ ಹಣ ವರ್ಗಾವಣೆ ಮಾಡಲು ಸಾಧ್ಯವಿದೆ.

ಈಗ ಮೊದಲಿನಂತೆ ಹಣ ವರ್ಗಾವಣೆ ಮಾಡಲು ಅಥವಾ ಬೇರೆಯವರಿಗೆ ಹಣವನ್ನು ವರ್ಗಾಯಿಸಲು ಬ್ಯಾಂಕಿಗೆ ಹೋಗಿ ಚೆಕ್ ಬರೆದು ವರ್ಗಾವಣೆ ಮಾಡುವ ಅಗತ್ಯ ಇಲ್ಲ. ಕುಳಿತ ಜಾಗದಲ್ಲಿಯೇ ಡಿಜಿಟಲ್ ಆಗಿ ಒಬ್ಬರ ಖಾತೆಯಿಂದ ಇನ್ನೊಬ್ಬರ ಖಾತೆಗೆ ಹಣವನ್ನು ವರ್ಗಾಯಿಸಬಹುದು ಇದಕ್ಕೆ ಕೇವಲ ಒಂದು ಮೊಬೈಲ್ ಸಂಖ್ಯೆ ಇದ್ರೆ ಸಾಕು.

ತಪ್ಪಾಗಿ ಬೇರೆಯವರ ಖಾತೆಗೆ ಹಣ ಹೋಗಬಹುದು:

ಆದರೆ ಡಿಜಿಟಲ್ ಆಗಿ ಹಣ ವರ್ಗಾವಣೆ (Money Transfer) ಮಾಡುವ ಸಂದರ್ಭದಲ್ಲಿ ನಾವು ಕೆಲವು ತಪ್ಪುಗಳನ್ನು ಕೂಡ ಮಾಡುತ್ತೇವೆ. ಉದಾಹರಣೆಗೆ 10 ಅಂಕೆಗಳಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸುವಾಗ ಒಂದು ಸಂಖ್ಯೆ ತಪ್ಪಾಗಿ ನಮೂದಿತಾವಾಗಿಬಹುದು ಅಂತಹ ಸಂದರ್ಭದಲ್ಲಿ ನೀವು ಯಾರ ಖಾತೆಗೆ ಹಣ ವರ್ಗಾವಣೆ ಮಾಡಲು ಬಯಸಿದ್ದೀರೋ ಅವರನ್ನು ಹೊರತುಪಡಿಸಿ ಬೇರೆ ಇನ್ಯಾರದೋ ಖಾತೆಗೆ ಹಣ ವರ್ಗಾವಣೆ ಆಗಬಹುದು. ಈ ರೀತಿ ಆದಾಗ ಹಣವನ್ನು ಪಡೆಯುವುದು ಹೇಗೆ ಎನ್ನುವ ಗೊಂದಲ ಉಂಟಾಗುತ್ತದೆ. ನಮ್ಮ ಹಣವನ್ನು ನಾವು ಕಳೆದುಕೊಂಡುಬಿಟ್ಟವೇನೋ ಎಂದು ಅನಿಸುತ್ತದೆ. ಆದರೆ ಚಿಂತೆ ಬೇಡ ನೀವು ತಪ್ಪಾಗಿ ಮಾಡಿರುವ ಪೇಮೆಂಟ್ ಅನ್ನು ಹಿಂಪಡೆಯಲು ಸಾಧ್ಯವಿದೆ.

advertisement

ತಪ್ಪಾಗಿ ಬೇರೆಯವರ ಖಾತೆಗೆ ಹಣ ಹೋಗಿದ್ದರೆ ಹಿಂಪಡೆಯುವುದು ಹೇಗೆ?

 

 

ಡಿಜಿಟಲ್ ಹಣ ಪಾವತಿ ಮಾಡುವ ಸಮಯದಲ್ಲಿ ನೀವು ಮೊಬೈಲ್ ಸಂಖ್ಯೆ ಅಥವಾ ಅಕೌಂಟ್ ನಂಬರ್ ಅನ್ನು ಹಿಂದೆ ಮುಂದೆ ಮಾಡುವ ಮೂಲಕ ಬೇರೆಯವರ ಖಾತೆಗೆ ಹಣ ವರ್ಗಾವಣೆ ಆಗಿದ್ದರೆ ಅದನ್ನು ಹಿಂಪಡೆಯಲು ಸಾಧ್ಯವಿದೆ. ಆದರೆ ನಿಗದಿತ ಅವಧಿಯ ಒಳಗೆ ನೀವು ಈ ಕೆಲವು ಪ್ರಮುಖ ಕೆಲಸಗಳನ್ನು ಮಾಡಿದರೆ ಮಾತ್ರ ನಿಮ್ಮ ಖಾತೆಗೆ ಹಣ ವಾಪಸ್ ಬರಬಹುದು. ಹಾಗಾದ್ರೆ ಹಣ ಹಿಂಪಡೆಯುವುದಕ್ಕೆ ಏನು ಮಾಡಬೇಕು ಎನ್ನುವುದನ್ನು ನೋಡೋಣ.

  • ಬೇರೆಯವರ ಖಾತೆಗೆ ತಪ್ಪಾಗಿ ಹಣ ವರ್ಗಾವಣೆ ಆಗಿದ್ದರೆ ಮೊದಲು ನಿಮ್ಮ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ.
  • ನೇರವಾಗಿ ಬ್ಯಾಂಕಿಗೆ ಹೋಗಲು ಸಾಧ್ಯವಾಗದೇ ಇದ್ದಲ್ಲಿ ಬ್ಯಾಂಕ್ ನ ಗ್ರಾಹಕ ಸಹಾಯಕ ಸಂಖ್ಯೆಗೆ ಕರೆ ಮಾಡಿ, ಬೇರೆಯವರ ಖಾತೆಗೆ ವರ್ಗಾವಣೆ ಆಗಿರುವ ಹಣದ ಬಗ್ಗೆ ಮಾಹಿತಿ ನೀಡಿ.
  • ನಂತರ ಬ್ಯಾಂಕ್ ಮ್ಯಾನೇಜರ್ ನಿಮ್ಮ ಹಣಕಾಸಿನ ವ್ಯವಹಾರದ ಬಗ್ಗೆ ಮಾಹಿತಿ ಪಡೆದುಕೊಂಡು ಯಾರ ಖಾತೆಗೆ ಹಣ ಹೋಗಿದೆ ಎಂಬುದನ್ನು ಪರಿಶೀಲಿಸುತ್ತಾರೆ ಹಾಗೂ ಅದನ್ನು ಹಿಡಿಯಲು ಪ್ರಯತ್ನಿಸುತ್ತಾರೆ.
  • ಇನ್ನು ಬ್ಯಾಂಕ್ ನಲ್ಲಿ ನಿಮ್ಮ ಕೆಲಸ ಆಗದೇ ಇದ್ದರೆ ನೀವು ಆರ್ ಬಿ ಐ ನ bankingombudsman.rbi.org.in ವೆಬ್ ಸೈಟ್ ಗೆ ಹೋಗಿ ದೂರು ದಾಖಲಿಸಬಹುದು.

ಬೇರೆಯವರ ಖಾತೆಗೆ ತಪ್ಪಾಗಿ ಹಣ ವರ್ಗಾವಣೆ ಆದ ಕೆಲವೇ ಗಂಟೆಗಳಲ್ಲಿ ಈ ಕೆಲಸ ಮಾಡಬೇಕು ಇಲ್ಲವಾದರೆ, ಯಾರ ಖಾತೆಗೆ ಹಣ ಹೋಗಿದೆಯೋ ಅವರು ತಮ್ಮ ಖಾತೆಯಿಂದ ಹಣ ಮಾಡಿದರೆ ಅದನ್ನು ಪುನಃ ಪಡೆಯುವುದು ಇನ್ನೂ ಕಷ್ಟದ ಕೆಲಸ.

advertisement

Leave A Reply

Your email address will not be published.