Karnataka Times
Trending Stories, Viral News, Gossips & Everything in Kannada

Money Transfer: ಒಂದು ಬ್ಯಾಂಕ್‌ನಿಂದ ಇನ್ನೊಂದು ಬ್ಯಾಂಕ್ ಗೆ ಆನ್‌ಲೈನ್ ಹಣ ವರ್ಗಾವಣೆಯ ನಿಯಮ ಬದಲಾವಣೆ!

advertisement

ಇಂದು ಡಿಜಿಟಲ್ ಪಾವತಿಗೆ ಜನರು ಹೆಚ್ಚಿನ ಬೆಂಬಲ ನೀಡುತ್ತಾರೆ. ಯಾಕಂದ್ರೆ ತಕ್ಷಣಕ್ಕೆ ಹಣ ಬೇಕು, ಹಣ ಕಳುಹಿಸಬೇಕು ಎಂದಾಗ ಬ್ಯಾಂಕ್ ಗೆ ಹೋಗುವ ಅವಶ್ಯಕತೆ ಇರುವುದಿಲ್ಲ.ಹಾಗಾಗಿ ಡಿಜಿಟಲ್ ಪಾವತಿಗೆ ಜನರು ಹೆಚ್ಚಿನ ಆದ್ಯತೆ ನೀಡುತ್ತಾರೆ.ಅದರಲ್ಲೂ ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಡಿಜಿಟಲ್ ಪಾವತಿಗಳ ನಗದು ರಹಿತ ವ್ಯವಹಾರಗಳು ಮುಖ್ಯ ಪಾತ್ರವಹಿಸುತ್ತದೆ.

What is IMPS?

 

 

ಇದರಲ್ಲಿ ಮೊಬೈಲ್ ಬ್ಯಾಂಕಿಂಗ್ ಮೂಲಕ ಯಾವುದೇ ಸ್ಥಳದಿಂದ, ಯಾವ ಸಮಯದಲ್ಲಾದರೂ ಬ್ಯಾಂಕಿಂಗ್ ವ್ಯವಹಾರ ಮಾಡಬಹುದು. ಎಲ್ಲಿಂದಲೂ ಬೇಕಾದರೂ ಸುಲಭವಾಗಿ ಹಣಕಾಸು ವ್ಯವಹಾರ ಮಾಡಬಹುದಾಗಿದೆ.

Immediate Payment:

advertisement

IMPS ನಿಯಮದಲ್ಲಿ ಬದಲಾವಣೆ ಆಗಿದ್ದು ತಕ್ಷಣದ ಪಾವತಿ ಸೇವೆ (IMPS) ಹಣ ವರ್ಗಾವಣೆಗೆ ಬಳಸುವ ತಂತ್ರ ಇದಾಗಿದ್ದು Internet Banking, Mobile Banking Applications, ATMs, SMS ಮತ್ತು IVRS ನಂತಹ ವಿವಿಧ ತಂತ್ರಗಳ ಮೂಲಕ ಹಣವನ್ನು ಬೇಕಾದ ಸಮಯದಲ್ಲಿ ತಕ್ಷಣ ಪಾವತಿ ಮಾಡಬಹುದು.

ನಿಯಮ‌ ಬದಲಾವಣೆ

ಇದೀಗ IMPS ನಲ್ಲಿ ಪ್ರಸ್ತುತ ಹಣ ಕಳುಹಿಸಲಾಗುವ ನಿಯಮ‌ ಬದಲಾವಣೆ ಮಾಡಿದ್ದು Person’s Name, Bank Account No, IFSC Code ಇತ್ಯಾದಿ ನೀಡಬೇಕಾಗುತ್ತದೆ. ಆದರೆ ಹೊಸ ನಿಯಮದ ಪ್ರಕಾರ ಬ್ಯಾಂಕ್ ಅಕೌಂಟ್ ನಂಬರ್ ಮತ್ತು IFSC Code ಹಾಕುವ ಅವಶ್ಯಕತೆ ಇಲ್ಲ. ಬೆನಿಫಿಶಿಯರಿಯ ಹೆಸರು ಸೇರಿಸುವ ಅಗತ್ಯವೂ ಇಲ್ಲ. ಹಣ ಪಡೆಯುವ ವ್ಯಕ್ತಿ ಯ ಮೊಬೈಲ್ ನಂಬರ್ ಮತ್ತು ಬ್ಯಾಂಕ್ ಹೆಸರನ್ನು ಹಾಕಿದರೆ ಸಾಕು ಹಣ ವರ್ಗಾವಣೆ (Money Transfer) ಮಾಡಬಹುದು ಎಂದಿದೆ.

How to Transfer Funds Through IMPS?

ಮೊದಲಿಗೆ ನಿಮ್ಮ Mobile Banking Application ನಲ್ಲಿ ನಿಧಿ ವರ್ಗಾವಣೆ ಆಯ್ದುಕೊಳ್ಳಿ,ನಂತರದಲ್ಲಿ IMPS ಆಯ್ಕೆಮಾಡಿ. ಮೊಬೈಲ್ ವೈಯಕ್ತಿಕ ಗುರುತಿನ ಸಂಖ್ಯೆ ನಮೂದಿಸಿ, ನೀವು ವರ್ಗಾಯಿಸಲು ಬಯಸುವ ಮೊತ್ತವನ್ನು ನಮೂದಿಸಿ.ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ OTP ಬರಲಿದ್ದು OTP ಅನ್ನು ನಮೂದಿಸಿ ಮತ್ತು ವಹಿವಾಟನ್ನು ಪೂರ್ಣಗೊಳಿಸಿ.

advertisement

Leave A Reply

Your email address will not be published.