Karnataka Times
Trending Stories, Viral News, Gossips & Everything in Kannada

RBI: ಪೆಟಿಎಂ ನಿಂದ ಹಣ ಪಾವತಿ ಮಾಡುವವರಿಗೆ ಮಹತ್ವದ ಸೂಚನೆ ಕೊಟ್ಟ RBI!

advertisement

ಇಂದು ಸಣ್ಣ ಪುಟ್ಟ ಪೇಮೆಂಟ್ ನಿಂದ ಹಿಡಿದು ದೊಡ್ಡ ದೊಡ್ಡ ವ್ಯಾಪಾರದವರೆಗೆ ಡಿಜಿಟಲ್ ಪೇಮೆಂಟ್ ಸಂಚಲನ ಮೂಡಿಸುತ್ತಿದೆ. ಡಿಜಿಟಲ್ ಪೇಮೆಂಟ್ ಮೂಲಕ ಸುಲಭಕ್ಕೆ ಹಣ ವರ್ಗಾಯಿಸುವ ಜೊತೆಗೆ ಚಿಲ್ಲರೆ ಸಮಸ್ಯೆ ಕೂಡ ನಿವಾರಣೆ ಆಗುತ್ತಿದೆ. ಇಂತಹ ಡಿಜಿಟಲ್ ಪೇಮೆಂಟ್ ಬಗ್ಗೆ RBI ನಿಗಾ ವಹಿಸಿದ್ದು ದೇಶದ ಪ್ರತಿಷ್ಠಿತ ಆನ್ಲೈನ್ ಪೇಮೆಂಟ್ ಆ್ಯಪ್ ಆದ ಪೇಟಿಎಂ ಈಗ ಸಂಕಷ್ಟಕ್ಕೆ ಸಿಲುಕಿದೆ. ಹಾಗಾಗಿ ಪೇಟಿಎಂ ಬಳಸಬಹುದಾ ಎಂಬ ಗುಮಾನಿ ಶುರುವಾಗಿದ್ದು ಆರ್ ಬಿಐ ನಿಲುವಿನ ಬಗ್ಗೆ ನಾವಿಂದು ನಿಮಗೆ ಮನದಟ್ಟು ಮಾಡಲಿದ್ದೇವೆ.

RBI ನಿರ್ಣಯ

ಪೇಟಿಎಂ ಪೇಮೆಂಟ್ ಆ್ಯಪ್ ಕೆಲ ಅಗತ್ಯ ನಿಯಮವನ್ನು ಪಾಲಿಸಿಲ್ಲ ಎಂಬ ಕಾರಣಕ್ಕೆ RBI ಈ ಬಗ್ಗೆ ಕೆಲ ಕಠಿಣ ನಿಯಮ ಜಾರಿಗೆ ತರಲು ಮುಂದಾಗಿದೆ. ಪೇಟಿಎಂ ನಲ್ಲಿ KYCನಿಯಮ ಪಾಲನೆ ಮಾಡಿಲ್ಲ ಹಾಗೂ ಅಕ್ರಮ ಹಣ ವರ್ಗಾವಣೆ ಆಗಿದ್ದ ಕಾರಣಕ್ಕಾಗಿ RBI ಪೇಟಿಎಂ ಮೇಲೆ ನಿರ್ಬಂಧ ವಿಧಿಸುತ್ತಿದೆ. ಹಾಗಾಗಿ ಪೇಟಿಎಂ ಸೇವೆಗಳಲ್ಲಿ ನಿರ್ಬಂಧ ವಿಧಿಸಲಾಗುತ್ತಿದೆ. ಫಾಸ್ಟ್ಯಾಗ್ ಇಂಡಿಯಾ ಮ್ಯಾನೇಜ್ಮೆಂಟ್ ಕಂಪೆನಿ ಲಿಮಿಟೆಡ್ ಫಾಸ್ಟ್ಯಾಗ್ ನಲ್ಲಿ ಪೇಟಿಎಂ ಮೇಲೆ ನಿರ್ಬಂಧ ತಂದಿದ್ದು ಅನೇಕ ಕಡೆ ಇದರ ಬಳಕೆ ಸಾಧ್ಯವಾಗುತ್ತಿಲ್ಲ.

ಮನವಿ

advertisement

ಮಾರ್ಚ್ 15ರಬಳಿಕ ಪೇಟಿಎಂ ಬಳಕೆಯಲ್ಲಿ ಕೆಲ ಅಂಶ ಬದಲಾಗುವ ಜೊತೆಗೆ ಕೆಲ ಸೇವೆ ಸ್ಥಗಿತ ಸಹ ಆಗಲಿದೆ. ಹಾಗಾಗಿ ಇದರ ಬಳಕೆದಾರರಿಗೆ ಮುಂದೇನು ಎಂಬ ಸಂಕಷ್ಟ ಎದುರಾಗಿದೆ. ಎನ್ ಪಿಸಿಐ ಕೆಲ ನಿರ್ಬಂಧ ಹೇರಿದ್ದ ಕಾರಣ. RBI ಬಳಕೆದಾರರ ಪರವಾಗಿ NPCI ಗೆ ಮನವಿ ಮಾಡಿದೆ. ಹಾಗಾಗಿ ಪೇಮೆಂಟ್ ಆ್ಯಪ್ ಪೇಟಿಎಂ ನಲ್ಲಿ ಅನೇಕ ಸಂಗತಿಗಳು ಬದಲಾಗುವ ಸಾಧ್ಯತೆ ಇದೆ. ಮಾರ್ಚ್ 15ರ ಬಳಿಕ ಪೇಮೆಂಟ್, ಫಾಸ್ಟ್ ಟ್ಯಾಗ್,ಹೊಸ ಖಾತೆ ಬಳಕೆ ಮೇಲೆ ನಿರ್ಬಂಧ ಇರಲಿದೆ.

ಅಗತ್ಯ ಸೂಚನೆ

ನ್ಯಾಶನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಯು RBI ನ ಮನವಿಯನ್ನು ಸ್ವೀಕಾರ ಮಾಡಿ ಕೆಲ ಅಗತ್ಯ ಸೂಚನೆಯನ್ನು ನೀಡಿದೆ. ಅದರ ಪ್ರಕಾರ ಮಾರ್ಚ್ 15ರ ಬಳಿಕ ಗ್ರಾಹಕರ ಖಾತೆ, ವ್ಯಾಲೆಟ್ ಗೆ ಪೇಟಿಎಂ ಹಣ ಸ್ವೀಕರಿಸದಂತೆ ಆರ್ ಬಿಐ ನಿರ್ಬಂಧ ವಿಧಿಸಿದೆ. ಅದೆ ರೀತಿ ಪೇಟಿಎಂ ಸೇವೆ ಈ ಹಿಂದಿನಂತೆ ಯುಪಿಐನಲ್ಲೇ ಮುಂದುವರಿಯಲಿದೆ ಆದರೂ ಕೆಲ ನಿರ್ಬಂಧ ಇರಲಿದೆ.ಹಾಗಾಗಿ ಮುಂದಿನ ದಿನಗಳಲ್ಲಿ ಇದರ ಬಳಕೆದಾರರು ಕಡಿಮೆ ಆಗುವ ಸಾಧ್ಯತೆ ಇದೆ.

ಯುಪಿಐ ಗ್ರಾಹಕರ ಹಿತದೃಷ್ಟಿಯಿಂದ ತಡೆರಹಿತ ಸೇವೆ ನೀಡಬೇಕು ಎಂಬ ಉದ್ದೇಶಕ್ಕೆ ಥರ್ಡ್ ಪಾರ್ಟಿ ಅಪ್ಲಿಕೇಶನ್ ಪ್ರವೈಡರ್ ಬೇಡಿಕೆ ಮುಂದಿಡಲಾಗಿದ್ದು ಇದೇ ವಿಚಾರಕ್ಕೆ ಪೇಟಿಎಂ ಅನೇಕ ಗ್ರಾಹಕರನ್ನು ಸೆಳೆದಿತ್ತು. ಈ ಮೂಲಕ ಇನ್ನು ಮುಂದಿನ ದಿನಗಳಲ್ಲಿ RBI ನಿರ್ದೇಶನ ದನ್ವಯ ಪೇಟಿಎಂ ಸೇವೆಗಳು ಸಿಗಲಿದ್ದು ಬಳಕೆದಾರರಿಗೆ ರಿಲ್ಯಾಕ್ಸ್ ಆದಂತಾಗಿದೆ. ಈಗಾಗಲೇ ಇರುವ ಹಣದಲ್ಲಿ ವಹಿವಾಟು ಮಾಡಲು ನಿರ್ಬಂಧ ಇರದು ಬದಲಾಗಿ ಹೊಸ ಖಾತೆ ಆರಂಭ ಮಾಡಿದರೆ ಎಲ್ಲ ನಿಯಮ ಇರಲಿದೆ.

advertisement

Leave A Reply

Your email address will not be published.