Karnataka Times
Trending Stories, Viral News, Gossips & Everything in Kannada

Property Tax: ಆಸ್ತಿ ತೆರಿಗೆಯಲ್ಲಿ ಮಹತ್ವದ ಬದಲಾವಣೆ, ಏಪ್ರಿಲ್ ನಿಂದ ಹೊಸ ನಿಯಮ ಜಾರಿಗೆ!

advertisement

ತೆರಿಗೆಯಲ್ಲಿ ಬದಲಾವಣೆ ಹೌದು ಆದರೆ ಇದು ಬೆಂಗಳೂರಿಗರಿಗೆ ಮಾತ್ರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ವಸತಿ ಹಾಗೂ ವಾಣಿಜ್ಯ ಉದ್ದೇಶಕ್ಕೆ ಬಾಡಿಗೆ ಪಡೆದವರಿಗೆ ಹೊಸ ತೆರಿಗೆ ಪದ್ಧತಿಯು ಸಂಕಷ್ಟಕ್ಕೆ ದೂಡುವ ಸಾಧ್ಯತೆ ಇದೆ.

ಈ ಆಸ್ತಿ ತೆರಿಗೆ (Property Tax) ಪದ್ಧತಿಯಲ್ಲಿ ಬಾಡಿಗೆಗೆ ಪಡೆದ ಆಸ್ತಿಗಳು ಸ್ವಯಂ-ಆಕ್ರಮಿತ ವಸತಿ ಆಸ್ತಿಗಳು ಹಾಲಿ ಪಾವತಿಸುವ ತೆರಿಗೆ ಮೊತ್ತಕ್ಕಿಂತ ಎರಡು ಪಟ್ಟು ಹೆಚ್ಚು ನೀಡಬೇಕಾಗುತ್ತದೆ. ಏಕೆಂದರೆ ಘಟಕವಾರು ಮೌಲ್ಯಾಧಾರಿತ ತೆರಿಗೆ ಪದ್ಧತಿಯಿಂದ ಮಾಲೀಕರು ಹೆಚ್ಚಿನ ತೆರಿಗೆ ಪಾವತಿಸಿದರೆ, ಬಾಡಿಗೆ ಪಡೆದವರಿಗೂ ಅದರ ಹೊರೆ ಬೀಳುತ್ತದೆ. ಈಗಾಗಲೇ ವಿವಿಧ ವರ್ಗದ ವಾಣಿಜ್ಯ ಕಟ್ಟಡಗಳಿಗೆ ಸುಂಕ ಮೂರರಿಂದ ಐದು ಪಟ್ಟು ಏರಿಕೆ ಮಾಡಲಾಗಿದೆ.

ಬೆಂಗಳೂರಿನ ಸ್ಥಳೀಯರು ಹೇಳೋದೇನು?

ಪ್ರಸ್ತುತದಲ್ಲಿ ಅತಿಥಿ ವಸತಿ, ಕನ್ವೆನ್ಷನ್ ಹಾಲ್‌ಗಳು ಇಲ್ಲವೇ ಮಾಲ್‌ಗಳಂತಹ ದೊಡ್ಡ ಕಟ್ಟಡಗಳು ಬಾಡಿಗೆ ಆಸ್ತಿಗಳಿಗೆ ಏಳು ವಿಭಿನ್ನ ಸುಂಕಗಳನ್ನು ಪಟ್ಟಿಮಾಡಲಾಗಿದೆ. ಈ ಮೌಲ್ಯವನ್ನು ಶೇ. 33 ರಷ್ಟು ಏರಿಕೆ ಮಾಡುವುದರಿಂದ ಬಿಬಿಎಂಪಿಯು ವಾರ್ಷಿಕವಾಗಿ ತೆರಿಗೆಯನ್ನು ಕನಿಷ್ಠ ಶೇ.40 ಏರಿಕೆ ಮಾಡಬಹುದು ಎಂದು ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.

 

advertisement

 

ಆಸ್ತಿ ತೆರಿಗೆ (Property Tax) ಹೆಚ್ಚಳವನ್ನು ಶೇಕಡಾ 20ಕ್ಕೆ ಸೀಮಿತಗೊಳಿಸಿರುವುದಾಗಿ ಬಿಬಿಎಂಪಿ ತನ್ನ ಹೊಸ ಅಧಿಸೂಚನೆಯಲ್ಲಿ ಉಲ್ಲೇಖಿಸಿದೆ. ಆದರೆ ಮುಂದಿನ ಆರ್ಥಿಕ ವರ್ಷದಿಂದ ಈ ತೆರಿಗೆ ಹೆಚ್ಚಳದಲ್ಲಿ ಆಸ್ತಿ ಮಾಲೀಕರು ವ್ಯತ್ಯಾಸ ಗಮನಿಸಲಿದ್ದಾರೆ.

ಆಸ್ತಿ ತೆರಿಗೆ (Property Tax) ಯಲ್ಲಿ 9 ಪಟ್ಟು ಏರಿಕೆ:

BBMP ವ್ಯಾಪ್ತಿಯಲ್ಲಿ ಬಾಡಿಗೆ ಕಟ್ಟಡಗಳ ಆಸ್ತಿ ತೆರಿಗೆ (Property Tax) ಸುಮಾರು 9 ಪಟ್ಟು ಹೆಚ್ಚಾಗಿದೆ ಎಂದು ವಿವರಿಸಿದ ಮಹದೇವಪುರ ನಿವಾಸಿ ಕ್ಲೆಮೆಂಟ್ ಜಯಕುಮಾರ್ ಅವರು, ಬಾಡಿಗೆ ಮನೆ ಅಥವಾ ಫ್ಲ್ಯಾಟ್‌ಗಳ ಮೇಲಿನ ತೆರಿಗೆ ಏನೋ ಹೆಚ್ಚಾಗಿದೆ. ಪಾಲಿಕೆ ಮಾತ್ರ ಯಾವುದೇ ಹೆಚ್ಚುವರಿ ಸೇವೆ ನೀಡುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು 10 ಅಥವಾ 20 ಬಾರಿ ತೆರಿಗೆ ಹೆಚ್ಚಳವನ್ನು ಒಪ್ಪಿಲ್ಲ ಎನ್ನಲಾಗಿದೆ. ಇದು ಅಳವಡಿಸಿರುತ್ತಿರುವ ಹೊಸ ತೆರಿಗೆ ಪದ್ಧತಿ ಅಲ್ಲ. ರಾಜ್ಯದ ಬಹುತೇಕ ಎಲ್ಲ ನಗರಗಳು ಈ ಮಾರ್ಗದರ್ಶಿ ಮೌಲ್ಯ ಆಧಾರಿತ ಆಸ್ತಿ ತೆರಿಗೆ ವ್ಯವಸ್ಥೆ ಜಾರಿಗೆ ತಂದಿವೆ. ಇನ್ನು ಆಸ್ತಿ ತೆರಿಗೆ ಸಂಗ್ರಹವು ಶೇ. 5 ಕ್ಕಿಂತ ಹೆಚ್ಚಾಗುವುದಿಲ್ಲ ಎಂದು ನಾವು ಭಾವಿಸಿದ್ದು, ಯಾರೂ ಆತಂಕ ಪಡುವ ಅಗತ್ಯ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

advertisement

Leave A Reply

Your email address will not be published.