Karnataka Times
Trending Stories, Viral News, Gossips & Everything in Kannada

Electric Car Loan: ಈ ಬ್ಯಾಂಕ್ ಕೊಡುತ್ತಿದೆ ಎಲೆಕ್ಟ್ರಿಕ್ ಕಾರು ಖರೀದಿಗೆ 100% ಸಾಲ ಸೌಲಭ್ಯ, ನಿಮಗೆ ಈ ಆಫರ್ ಲಭ್ಯ ಇದೆಯೇ ನೋಡಿ!

advertisement

ದ್ವಿಚಕ್ರ ಪ್ರವಾಹನ ಅಥವಾ ನಾಲ್ಕು ಚಕ್ರದ ವಾಹನ ಈಗ ಪ್ರತಿಯೊಂದು ಮನೆಯ ಅಗತ್ಯವಾಗಿದೆ. ಈಗ ಕಾರುಗಳು ಮೊದಲಿನಂತೆ ಲಕ್ಸುರಿ ಆಗಿರದೆ ಬೇಸಿಕ್ ಎನ್ನುವಂತೆ ಆಗಿ ಹೋಗಿದೆ. ಜನರ ಜೀವನ ಮುಟ್ಟ ಸುಧಾರಣೆ ಆಗುತ್ತಾ ಇದ್ದಂತೆ ಎಲ್ಲರ ಮನೆಗಳಲ್ಲೂ ಕಾರುಗಳು ಕಾಣುತ್ತಿವೆ.

ಈಗ ನಿಮ್ಮ Credit Score ಅಥವಾ CIBIL Score ಉತ್ತಮವಾಗಿದ್ದಲ್ಲಿ ಸುಲಭವಾಗಿ ಸಾಲ ಸಿಗುವ ಕಾರಣ ಕಾರುಗಳನ್ನು ಖರೀದಿಸುವುದು ಅಷ್ಟೊಂದು ಕಷ್ಟದ ಕೆಲಸವೇನಲ್ಲ. ಅದರಲ್ಲೂ ಈಗ ಎಲೆಕ್ಟ್ರಿಕ್ ಕಾರುಗಳು ಬಂದಮೇಲೆ ಬಹಳ ಬಗೆಯ ಸ್ಕೀಮ್ ಗಳು ಕೂಡ ಇವೆ.

SBI Car Loan:

 

 

advertisement

ನಾವು ಕಾರುಗಳು ಬೇಕು ಎಂದಾಗ ಮೊದಲನೆಯದಾಗಿ ಸಾಲ (Loan) ಮಾಡಲು ಹೊರಡುವುದು ಬ್ಯಾಂಕುಗಳ ಬಳಿ. ಬ್ಯಾಂಕ್ ಗಳು ಸಾಲ (Loan) ನೀಡದೇ ಇದ್ದಾಗ ಮಾತ್ರ ಹೆಚ್ಚಿನ ಬಡ್ಡಿ ದರ ಕೊಟ್ಟು ಫೈನಾನ್ಸ್ ಕಂಪನಿಗಳ ಮೊರೆ ಹೋಗುತ್ತೇವೆ. ಈಗ ದೇಶದ ಅತಿ ದೊಡ್ಡ ಬ್ಯಾಂಕ್ SBI ನಿಮ್ಮ ಎಲೆಕ್ಟ್ರಿಕ್ ವಾಹನ ಖರೀದಿಯ ಕನಸನ್ನು ನನಸು ಮಾಡಲು ಕಾರಿನ ಮೌಲ್ಯದ ನೂರು ಶೇಕಡಾ ಸಾಲವನ್ನು ನಿಮಗೆ ನೀಡಲು ಸಿದ್ಧವಿದೆ. ಅಂದರೆ ನಿಮ್ಮ ಬಳಿ ಯಾವುದೇ ಡೌನ್ ಪೇಮೆಂಟ್ ನ ಸಿದ್ಧತೆ ಇಲ್ಲದೆ ಇದ್ದರೂ ಕೂಡ ನೀವು ತ್ವರಿತವಾಗಿ ಕಾರನ್ನು ಖರೀದಿಸಬಹುದು.

ಯಾರಿಗೆ ಸಿಗುತ್ತದೆ ಈ ಸಾಲ:

SBI ನ Loan ಸೌಲಭ್ಯ ಯಾರಿಗೆಲ್ಲ ಲಭ್ಯವಿದೆ ಎನ್ನುವುದನ್ನು ನೋಡುವುದಾದರೆ 21 ರಿಂದ 70 ವರ್ಷಗಳ ಒಳಗಿನ ಭಾರತೀಯ ನಾಗರಿಕರು ಈ ಸಾಲವನ್ನು ಪಡೆಯಲು ಅರ್ಹರು. ಎಲೆಕ್ಟ್ರಿಕ್ ಕಾರು ಖರೀದಿಸಬೇಕು ಎಂದು ಆಸೆಪಡುವ ಎಲ್ಲರೂ ಕೂಡ ಈ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಈ ಸಾಲವನ್ನು ಮೂರು ವರ್ಷಗಳಿಂದ ಎಂಟು ವರ್ಷಗಳ ತನಕದ ಸುಲಭ ಮರುಪಾವತಿ ಕಂತುಗಳಲ್ಲಿ ಪಾವತಿ ಮಾಡಬಹುದು. ಈ ಸಾಲದ ಇನ್ನೊಂದು ವಿಶೇಷತೆ ಎಂದರೆ ಎಲೆಕ್ಟ್ರಿಕ್ ವಾಹನ ಖರೀದಿಗೆ ಸಾಮಾನ್ಯ ಸಾಲದ ದರಗಳಿಗಿಂತ ನಿಮಗೆ 0.25% ಕಡಿಮೆ ಬಡ್ಡಿ ದರ ನಿಗದಿ ಆಗಲಿದೆ. ಹೆಚ್ಚಿನ ವಾಹನಗಳಲ್ಲಿ ವಾಹನದ ಆನ್ ರೋಡ್ ಬೆಲೆಯ 90% ಸಾಲ ಸಿಕ್ಕರೆ ಇನ್ನೂ ಕೆಲವು ವಾಹನಗಳ ಮಾದರಿಗಳ ಮೇಲೆ 100% ಸಾಲ ಸೌಲಭ್ಯ ಸಿಗಲಿದೆ.

ಎಷ್ಟು ಸಾಲ ಸಿಗುತ್ತದೆ ಹಾಗೂ ಬಡ್ಡಿದರ ಎಷ್ಟು:

SBI ನ ಈ ಸಾಲ ಸೌಲಭ್ಯದ ಮೇಲೆ 8.85% ನಿಂದ 9.80% ತನಕದ ಬಡ್ಡಿ ದರಗಳನ್ನು ನಿಗದಿ ಮಾಡಲಾಗಿದೆ. ಇನ್ನು ಎಲೆಕ್ಟ್ರಿಕ್ ವಾಹನ ಆದಲ್ಲಿ ಈ ಸಾಲದ ಬಡ್ಡಿದರ 8.75% ನಿಂದ 9.45% ಆಗಿದೆ. ಸರಕಾರಿ ಉದ್ಯೋಗಿಯಾಗಿದ್ದು ವೇತನವು 3 ಲಕ್ಷದ ಒಳಗಿದ್ದರೆ ನಿಮ್ಮ ನಿವ್ವಳ ಮಾಸಿಕ ಆದಾಯದ 48 ಪಟ್ಟು ಸಾಲ ಸಿಗಲಿದೆ. ಕೃಷಿ ಆದಾಯ ಇರುವವರು 4 ಲಕ್ಷಕ್ಕಿಂತ ಹೆಚ್ಚಿನ ಆದಾಯ ಗಳಿಸುತ್ತಿದ್ದರೆ ಒಟ್ಟು ಆದಾಯದ ಮೂರುಪಟ್ಟು ಸಾಲ ಸಿಗಲಿದೆ. ಉದ್ಯಮಿಗಳು ಮತ್ತು ಖಾಸಗಿ ವಲಯದಲ್ಲಿ ಕೆಲಸ ಮಾಡುವವರು ಐ ಟಿ ಆರ್ ನಲ್ಲಿ ದಾಖಲಿಸಿದ ನಿವ್ವಳ ಲಾಭದ ನಾಲ್ಕು ಪಟ್ಟು ಸಾಲವನ್ನು ಪಡೆಯುತ್ತಾರೆ.

advertisement

Leave A Reply

Your email address will not be published.