Karnataka Times
Trending Stories, Viral News, Gossips & Everything in Kannada

Hero Optima EV: ಕೊನೆಗೂ ಕಡಿಮೆ ಬೆಲೆಗೆ 125 ರೇಂಜ್ ಕೊಡುವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಹೀರೋ ಕಂಪನಿ, ಸೂಪರ್ ಲುಕ್!

advertisement

ಇಂದು ಪ್ರತಿಯೊಂದು ಮನೆಯಲ್ಲೂ ಒಂದೊಂದು ವಾಹನ ಇದ್ದೆ ಇರುತ್ತದೆ. ಅದರಲ್ಲೂ ಯುವಕರಿಗಂತೂ ಕಾರು, ಬೈಕ್, ಸ್ಕೂಟರ್ ಮೇಲೆ ಆಸಕ್ತಿ ಹೆಚ್ಚು. ಇಂದು ಎಲೆಕ್ಟ್ರಿಕ್ ವಾಹನಗಳ ಹವಾ ಕೂಡ ಜೋರಾಗಿದ್ದು ಈ ವಾಹನಗಳನ್ನೆ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಬೆಲೆ ಕಡಿಮೆ ಅಲ್ಲದೆ ಪರಿಸರ ಜಾಗೃತಿಯ ಅರಿವು ಸಹ ಮೂಡಿಸಲಿದೆ. ಇದೀಗ ದಿನ‌ನಿತ್ಯ ವಾಗಿ ಪ್ರಯಾಣ ಮಾಡಲು ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಆಯ್ಕೆ ಯನ್ನು ಮಾಡಬೇಕಾದ್ರೆ ಉತ್ತಮ ವೈಶಿಷ್ಟ್ಯ ದ ಸ್ಕೂಟರ್ ಒಂದು ಮಾರುಕಟ್ಟೆ ಗೆ ಲಗ್ಗೆ ಇಟ್ಟಿದೆ.

ಆಧುನಿಕ ಸ್ಪರ್ಶ

ಹೀರೋ ಆಪ್ಟಿಮಾ ಎಲೆಕ್ಟ್ರಿಕ್ ಸ್ಕೂಟರ್ (Hero Optima EV) ಇದೀಗ ಯುವಕರಲ್ಲಿ ಬಹಳ ಕ್ರೇಜ್ ಹುಟ್ಟಿಸಿದ್ದು ನೋಡಲು ಕೂಡ ಬಹಳ ಆಕರ್ಷಿತ ವಾಗಿದೆ.‌ ದಿನ ನಿತ್ಯದ ಪ್ರಯಾಣಕ್ಕೆ ಸರಳ ಮತ್ತು ಉಪಯುಕ್ತ ಆಯ್ಕೆ ಈ ಸ್ಕೂಟರ್ ಆಗಿದ್ದು ದೀರ್ಘಕಾಲದ ಚಾರ್ಜಿಂಗ್ ಸೌಲಭ್ಯದೊಂದಿಗೆ ಈ ಸ್ಕೂಟರ್ ಬರಲಿದೆ‌. ಇದರ ವಿನ್ಯಾಸವು ಕೂಡ ಆಧುನಿಕ ಸ್ಪರ್ಶ ನೀಡಲಿದೆ. ಅದರ ಜೊತೆ ಸ್ಮಾರ್ಟ್ ಸಂಪರ್ಕ ವೈಶಿಷ್ಟ್ಯಗಳನ್ನು ಕೂಡ ಒಳಗೊಂಡಿದೆ.

advertisement

Hero Optima EV ವೈಶಿಷ್ಟ್ಯ ಹೇಗಿದೆ?

  • ಹೀರೋ ಆಪ್ಟಿಮಾ ಆಕರ್ಷಿತ ವಿನ್ಯಾಸವನ್ನು ಹೊಂದಿದ್ದು ವಿವಿಧ ಬಣ್ಣಗಳಲ್ಲಿ ಖರೀದಿ ಮಾಡಬಹುದು.ಇದರಲ್ಲಿ ಎಲ್ಇಡಿ ಲೈಟ್ ಗಳು ಮತ್ತು ವಿಶೇಷ ಡ್ಯಾಶ್ಬೋರ್ಡ್ ಕೂಡ ಹೊಂದಿದೆ.
  • 52.2 ವೋಲ್ಟ್, 30ಎಎಚ್ ಲಿಥಿಯಂ ಫೆರೋ ಫಾಸ್ಫೇಟ್ ಬ್ಯಾಟರಿ ಪ್ಯಾಕ್ ಅನ್ನು ಆಪ್ಟೆಮಾ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬಳಸಲಾಗಿದೆ
  • ಈ ಸ್ಕೂಟರ್‌ಗಳನ್ನು ಪೂರ್ತಿ ಚಾರ್ಜ್ ಮಾಡಲು ನಾಲ್ಕೂವರೆ ಗಂಟೆ ಬೇಕಾಗಿದ್ದು 125 ಕಿಲೋ ಮೀಟರ್ ನ ವ್ಯಾಪ್ತಿ ನೀಡಲಿದೆ.
  • ಹೀರೋ ಆಪ್ಟಿಮಾ ಸ್ಕೂಟರ್ ಎರಡು ವೇರಿಯೆಂಟ್ ಗಳಲ್ಲಿ ಲಭ್ಯವಿದ್ದು CX ಹಾಗೂ CX ER ಎಂಬು ಎರಡು ವೇರಿಯೆಂಟ್ ಗಳಲ್ಲಿ‌ ಮಾರುಕಟ್ಟೆ ಗೆ ಬರಲಿದೆ.

Hero Optima EV ಬೆಲೆ ಎಷ್ಟು?

HERO OPTIMA ಎಲೆಕ್ಟ್ರಿಕ್ ಸ್ಕೂಟರ್ ಉತ್ತಮ ವೈಶಿಷ್ಟ್ಯ ದೊಂದಿಗೆ ಬಜೆಟ್ ಸ್ನೇಹಿ ಆಯ್ಕೆ ಕೂಡ ಆಗಿದೆ. ಇದರ ಬೆಲೆ ರೂ 1.29 ಲಕ್ಷದಿಂದ ರೂ 1.6 ಲಕ್ಷ ಇರಲಿದ್ದು ನೀವು ಅದನ್ನು 3 ವರ್ಷಗಳವರೆಗೆ 9.45% ಬಡ್ಡಿದರದಲ್ಲಿ 3900 ರೂಗಳ EMI ಗಳಲ್ಲಿ ಖರೀದಿ ಮಾಡಬಹುದಾಗಿದೆ.

advertisement

Leave A Reply

Your email address will not be published.