Karnataka Times
Trending Stories, Viral News, Gossips & Everything in Kannada

RBI: ಈ ವಿಚಾರಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿದ್ರೆ ಬ್ಯಾಂಕಿಂಗ್ ವಂಚನೆಗಳಲ್ಲಿ ಹಣವನ್ನು ಕಳೆದುಕೊಳ್ಳುವುದಿಲ್ಲ!

advertisement

ಇಂದು ಬ್ಯಾಕಿಂಗ್ ವಂಚನೆ, ಅನ್ ಲೈನ್ ವಂಚನೆಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗಿದ್ದು ಗ್ರಾಹಕರು ಹಣ ಕಳೆದು ಕೊಳ್ಳುವ ಸನ್ನಿವೇಶ ಉಂಟಾಗಿದೆ. ಇದು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಗ್ರಾಹಕರ ವಿಶ್ವಾಸವನ್ನು ಕಡಿಮೆ ಮಾಡುತ್ತಿದೆ. ಇಂದು ಸೈಬರ್ ದಾಳಿ, ಡೇಟಾ ಟ್ಯಾಂಪರಿಂಗ್ ಮತ್ತು ವ್ಯವಹಾರದ ಅಡಚಣೆಯ ಅಪಾಯವೂ ಕೂಡ ಬಹಳಷ್ಟು ಹೆಚ್ಚಾಗಿದೆ‌. ಹಾಗಾಗಿ ಗ್ರಾಹಕರು ಈ ಬಗ್ಗೆ ಎಚ್ಚೆತ್ತುಕೊಳ್ಳುವುದು‌ ಸಹ ಬಹಳ ಮುಖ್ಯ.

RBI Rule:

 

 

ಇಂದು ಬ್ಯಾಂಕಿಂಗ್ ವಲಯದಲ್ಲಿ ವಂಚನೆಗಳ ಸಂಖ್ಯೆ ಬಹಳಷ್ಟು ಹೆಚ್ಚುತ್ತಲೆ ಬಂದಿದೆ.‌ ಇದೀಗ ಈ ವಂಚನೆಗಳ ವಿರುದ್ಧ ಗ್ರಾಹಕರನ್ನು ಸುರಕ್ಷಿತ ರಾಗಿ ಇಡಲು ರಿಸರ್ವ್ ಬ್ಯಾಂಕ್ ನಿಯಮಗಳನ್ನು (RBI Rules) ಜಾರಿಗೆ ತರುತ್ತಲೆ ಇರುತ್ತದೆ. ಸೈಬರ್ ಅಪರಾಧಿಗಳು ವಿವಿಧ ರೀತಿಯ ಮೋಸ ಮಾಡಿ ಅಮಾಯಕರ ಹಣವನ್ನು ದೋಚುತ್ತಿದ್ದಾರೆ. ಹಾಗಾಗಿ ಈ ಬಗ್ಗೆ ನಾವು ಮುಂಜಾಗ್ರತಾ ಕ್ರಮವನ್ನು ವಹಿಸಬೇಕು.

advertisement

ಈ ಕೆಲಸ ಮಾಡಿ:

ಬ್ಯಾಂಕ್ ವಂಚನೆಯಿಂದ ರಕ್ಷಿಸಲು ತ್ವರಿತ ಎಚ್ಚರಿಕೆಗಳನ್ನು ಮೊದಲು ಪಾಲಿಸಿ, ಹೌದು ಎಲ್ಲಾ ಬ್ಯಾಂಕಿಂಗ್ ವಹಿವಾಟುಗಳಿಗೆ ತ್ವರಿತ ಎಚ್ಚರಿಕೆಗಳನ್ನು ಸಕ್ರಿಯಗೊಳಿಸಿ. ತ್ವರಿತ ಎಚ್ಚರಿಕೆಯನ್ನು ಪಡೆಯಲು ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ನೊಂದಾಯಿಸಿ ಅಥವಾ ನಿಮ್ಮ ಬ್ಯಾಂಕ್‌ಗೆ ಇಮೇಲ್ ಕೂಡ ಮಾಡಬಹುದು. ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ನಿಮ್ಮ ಫೋನ್ ಸಂಖ್ಯೆಯನ್ನು ನೀವು ನೋಂದಾಯಿಸಿದರೆ, ಕಡ್ಡಾಯವಾಗಿ SMS ಎಚ್ಚರಿಕೆಗಳನ್ನು ನೀವು ಪಡೆಯಬಹುದು.

ಬ್ಯಾಂಕ್ ಗೆ ಮಾಹಿತಿ ನೀಡಿ:

ಅನಧಿಕೃತ ವಹಿವಾಟಿನ ಬಗ್ಗೆ ನಿಮಗೆ ತಿಳಿದರೆ ವಂಚನೆಯ ಸಂದರ್ಭದಲ್ಲಿ, ನೀವು ತಕ್ಷಣ ಬ್ಯಾಂಕ್‌ಗೆ ಮಾಹಿತಿ ತಿಳಿಸಬಹುದು. ಇದು ನಿಮ್ಮ ಹಣಕಾಸಿನ ನಷ್ಟವನ್ನು ಕಡಿಮೆ ಮಾಡಲು ‌ಸಹಾಯ ಮಾಡುತ್ತದೆ. ಇನ್ನೂ ನಿಮ್ಮ OTP, PIN, ಅಥವಾ CVV ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ, ನಿಮ್ಮ ಮೊಬೈಲ್ ಬ್ಯಾಂಕಿಂಗ್ ಪಾಸ್‌ವರ್ಡ್‌ಗಳು, ಪಿನ್, OTP ವಿವರ ನಿಮ್ಮೊಂದಿಗೆ‌ ಇರಲಿ.

ಇ-ಮೇಲ್ ಅಥವಾ SMS ಲಿಂಕ್ ಬಂದ್ರೆ ಅದರ ಮೇಲೆ ಕ್ಲಿಕ್ ಮಾಡ್ಬೇಡಿ. ಈ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿದ ತಕ್ಷಣ ನಿಮ್ಮ ಬ್ಯಾಂಕ್ ವೆಬ್ ಸೈಟ್ ಹೋಲುವ ನಕಲಿ ವೆಬ್ ಸೈಟ್ ತೆರೆದು ಹಣ ಕಳೆದುಕೊಳ್ಳ ಬೇಕಾಗುತ್ತದೆ. ಹಾಗಾಗಿ ಈ ಬಗ್ಗೆ ಜಾಗೃತೆ ವಹಿಸಿ.

advertisement

Leave A Reply

Your email address will not be published.