Karnataka Times
Trending Stories, Viral News, Gossips & Everything in Kannada

Budget Car: ಕೆಲವೇ ದಿನಗಳಲ್ಲಿ ಲಾಂಚ್ ಆಗಲಿದೆ BMW ಗೆ ಸೆಡ್ಡು ಹೊಡೆಯಲಿರುವ ಬಡವರ ಈ ಕಾರು! ಅತ್ಯಂತ ಕಡಿಮೆ ಬೆಲೆ

advertisement

ಭಾರತೀಯ ಮಾರುಕಟ್ಟೆಯಲ್ಲಿ ಕಾಂಪ್ಯಾಕ್ಟ್ ಎಸ್ ಯು ವಿ ಕಾರುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಯಾಕಂದ್ರೆ ಇದು ಒಂದು ಸಣ್ಣ ಕುಟುಂಬ ದೂರದ ಊರುಗಳಿಗೆ ಪ್ರಯಾಣ ಮಾಡಲು ಕೂಡ ಆರಾಮದಾಯಕ ಪ್ರಯಾಣದ ಅನುಭವ ನೀಡುತ್ತದೆ. ಜೊತೆಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುತ್ತದೆ. ಹಾಗಾಗಿ ಮೋಟಾರ್ ಕಂಪನಿಗಳು ಕೂಡ ಜನರಿಗೆ ಅನುಕೂಲವಾಗುವಂತಹ ಕಾಂಪ್ಯಾಕ್ಟ್ ಎಸ್ ಯು ವಿ ಗಳನ್ನು ಬೇರೆ ಬೇರೆ ರೀತಿಯ ತಂತ್ರಜ್ಞಾನಗಳನ್ನು ಬಳಸಿ ತಯಾರು ಮಾಡುತ್ತಿವೆ. ಸದ್ಯದಲ್ಲಿ ಈ ಕ್ಯಾಟಗರಿಗೆ ಮಹೀಂದ್ರಾದ ಹೊಸ ಎಸ್ ಯು ವಿ Mahindra XUV300 ಲಾಂಚ್ ಆಗಲಿದೆ.

Mahindra XUV300 Features:

 

Image Source: Mahindra

 

ನಾಲ್ಕು ಮೀಟರ್ ಎಸ್ಯುವಿ ವಿಭಾಗದಲ್ಲಿ ಮಾರುತಿ ಬ್ರೆಝಾ (Maruti Brezza), ನೆಕ್ಸನ್ (Nexon), ಹುಂಡೈ ವೆನ್ಯೂ (Hyundai Venue) ಮೊದಲಾದ ಕಾರುಗಳು ಪ್ರಾಬಲ್ಯ ಪಡೆದುಕೊಂಡಿವೆ. ಆದರೆ ಮುಂದಿನ ಒಂದು ವರ್ಷಗಳಲ್ಲಿ ಅಂದ್ರೆ 2025 ಕ್ಕೆ ಹೊಸ ಮೂರು ಎಸ್ ಯು ವಿ ಗಳನ್ನು ಪರಿಚಯಿಸಲಾಗುವುದು.

Mahindra ತನ್ನ XUV300 ಕಾಂಪ್ಯಾಕ್ಟ್ ಎಸ್ ಯು ವಿ ಎನ್ನು ಲಾಂಚ್ ಮಾಡಲಿದೆ. ಇದೊಂದು ನವೀಕರಣ ರೂಪಾಂತರ ಆಗಿದ್ದು ಸಾಕಷ್ಟು ವೈಶಿಷ್ಟತೆಗಳನ್ನು ಅಳವಡಿಸಲಾಗಿದೆ. ಫೇಸ್‌ಲಿಫ್ಟ್‌ನ ಕ್ಯಾಬಿನ್ XUV400 EV ಅನು ಹೋಲಬಹುದು ಎಂದು ಊಹಿಸಲಾಗಿದೆ. ಭಾರತೀಯ ಹೆದ್ದಾರಿಗಳಲ್ಲಿ ಪ್ರಾಯೋಗಿಕ ಟೆಸ್ಟಿಂಗ್ ನಡೆದಿದ್ದು ಕಂಡು ಬಂದಿದೆ ಹೀಗಾಗಿ ಈ ಸದ್ಯದಲ್ಲಿ ಈ ಕಾರು ಬಿಡುಗಡೆ ಆಗಬಹುದು ಎನ್ನುವ ನಿರೀಕ್ಷೆ ಇದೆ.

Mahindra XUV300 Engine:

 

advertisement

Image Source: Mahindra

 

ಮಹಿಂದ್ರ ಕಾರಿನಲ್ಲಿ 1.0 ಲೀಟರ್ ನ ಮೂರು ಸಿಲಿಂಡರ್ ಹೊಂದಿರುವ ಟರ್ಬೋ ಪೆಟ್ರೋಲ್ ಎಂಜಿನಿಯರ್ ಅಳವಡಿಸಿರುವ ಸಾಧ್ಯತೆ ಇದೆ. ಇದು 110bhp ಪವರ್ ಹಾಗೂ 200nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಬಹುದು. ಜೊತೆಗೆ 6 ಸ್ಪೀಡ್ ಮಾನ್ಯುಯಲ್ ಹಾಗೂ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅಳವಡಿಸಿರಬಹುದು.

Mahindra XUV300 Mileage & Price:

 

Image Source: CarWale

 

ಇನ್ನು ಹೊಸದಾಗಿ ಬರಲಿರುವ ಮಹೇಂದ್ರದ ಕಾಂಪ್ಯಾಕ್ಟ್ ಎಸ್ ಯು ವಿ 20 -25 ಕೆ ಎಂ ಪಿ ಎಲ್ ಮೈಲೇಜು ನೀಡಬಹುದೆಂದು ಊಹಿಸಲಾಗಿದೆ. ಆದರೆ ಬೆಲೆ ಎಷ್ಟಿರಬಹುದು ಎಂದು ಬಹಿರಂಗಗೊಂಡಿಲ್ಲ. ಊಹೆಯ ಪ್ರಕಾರ 8 ಲಕ್ಷಗಳಿಂದ ಆರಂಭವಾಗಬಹುದು.

Mahindra XUV300 ಜೊತೆಗೆ ಬರಲಿದೆ Kia Compact SUV

ಆಟೋ ವರದಿಯ ಪ್ರಕಾರ, ಕಿಯಾ ಕ್ಲಾವಿಸ್ (Kia Clavis) ವಿಶೇಷ ಮುಖಾಂತರ ಕೂಡ ಮುಂದಿನ ವರ್ಷ ಬಿಡುಗಡೆ ಆಗಬಹುದು. ಇದರಲ್ಲಿ ಸಾಕಷ್ಟು ಸುಧಾರಿತ ತಂತ್ರಜ್ಞಾನ ಅಳವಡಿಸಿರುವ ಸಾಧ್ಯತೆ ಇದೆ. ಪನೋರೆಮಿಕ್ ಸನ್ ರೂಫ್, ದೊಡ್ಡ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಎಡಿಎಎಸ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೊಲ್, 360 ಡಿಗ್ರಿ ಕ್ಯಾಮೆರಾ ಮೊದಲದ ಸುಧಾರಿತ ತಂತ್ರಜ್ಞಾನಗಳನ್ನು ಈ ಕಾರಿನಲ್ಲಿ ಕೊಡುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಪ್ರಸ್ತುತ ಜನರ ಲೈಫ್ ಸ್ಟೈಲ್ ದೇಹ ಹೊಂದಾಣಿಕೆ ಆಗುವಂತಹ ಎಸ್ ಯು ವಿಗಳು ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಬರಲಿದೆ.

advertisement

Leave A Reply

Your email address will not be published.