Karnataka Times
Trending Stories, Viral News, Gossips & Everything in Kannada

Kia Clavis: ಕಡಿಮೆ ಬೆಲೆಗೆ ಭಾರತದಲ್ಲಿ ಈ ಕಾರು ಪರಿಚಯಿಸಲಿರುವ ಕಿಯಾ ಕಂಪನಿ! ಟಾಟಾಗೆ ನೇರವಾಗಿ ಸೆಡ್ಡು

advertisement

ಭಾರತೀಯ ಕಾರು ತಯಾರಿಕಾ ಕಂಪೆನಿಗಳಿಗೆ ಈಗ ವಿಶ್ವ ಮಟ್ಟದಲ್ಲಿ ಬಹುಬೇಡಿಕೆ ಇದೆ. ಕಾರು ತಯಾರಿಕಾ ಕಂಪೆನಿಯಲ್ಲಿ ಹುಂಡೈ (Hyundai), ಸುಜುಕಿ (Suzuki), ಮಾರುತಿ (Maruti), ಮಹೀಂದ್ರ (Mahindra), ಟಾಟಾ (Tata) ಕಂಪೆನಿಯ ಕಾರುಗಳಿಗೆ ಈಗಾಗಲೇ ದೊಡ್ಡ ಮಟ್ಟಿನ ಬೇಡಿಕೆ ಸೃಷ್ಟಿ ಆಗಿದೆ ಎನ್ನಬಹುದು. ಅದರ ಜೊತೆಗೆ ಈಗಿನ ಜನರ ಅಭಿರುಚಿಗೆ ತಕ್ಕಂತೆ ವಿನೂತನವಾದ ಅನೇಕ ಕಾರು ಬ್ರ್ಯಾಂಡ್ ಅನ್ನು ಮಾರುಕಟ್ಟೆಗೆ ಬಿಟ್ಟು ಪ್ರಬಲ ಪೈಪೋಟಿ ನೀಡಲಾಗುತ್ತಿದೆ. ಈ‌ನಿಟ್ಟಿನಲ್ಲಿ ಕಿಯಾ (Kia) ಕಾರು ಎಲ್ಲರ ಆಕರ್ಷಣೆಗೆ ಕಾರಣವಾಗಿದೆ.

Kia Sub SUV:

ಈಗ ಅತೀ ಹೆಚ್ಚು ಜನರಿಗೆ ಸಬ್ SUV ಕಾರು ಇಷ್ಟವಾಗುತ್ತಿದೆ. ಸಬ್ SUV ಎಂದರೆ ದೊಡ್ಡ ಆವೃತ್ತಿಯ ಚಿಕ್ಕ ರೂಪ ಎಂದು ಹೇಳಬಹುದು. ಅಂದರೆ ಇದರ ಫೀಚರ್ಸ್ ದೊಡ್ಡ ಮಾದರಿಯ ಎಸ್ ಯುವಿ ನಂತೆ ಇರಲಿದ್ದು ಆವೃತ್ತಿ ಮಾತ್ರ ಅದಕ್ಕೆ ಹೋಲಿಸಿದರೆ ಸಣ್ಣ ಆವೃತ್ತಿ ಆಗಿರುತ್ತದೆ. ಈ ನಿಟ್ಟಿನಲ್ಲಿ ಕಿಯಾ Sub SUV ಭಾರತದಲ್ಲಿ ದೊಡ್ಡ ಮಟ್ಟಿಗೆ ಕಾರ್ಯಾಚರಣೆ ನಡೆಸಲಿದ್ದು ಅನೇಕ ವಿಶೇಷ ಫೀಚರ್ಸ್ ತುಂಬಾನೇ ಅದ್ಬುತವಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಾರಿನ ಹೆಸರೇನು?

 

Image Source: Market Watch

 

advertisement

ಈ ಕಾರಿನ ಹೆಸರು ಕಿಯಾ ಕ್ಲಾವಿಸ್ (Kia Clavis) ಎಂದು. ಇದು ಭಾರತದಲ್ಲಿ ಟ್ರೇಡ್ ಮಾರ್ಕ್ ಹೊಂದಿದೆ. ಇದರಲ್ಲಿ AY ಎಂಬ ಕೋಡ್ ನೇಮ್ ಕೂಡ ಇರಲಿದೆ. ಟ್ಯಾಂಕ್ ವಿನ್ಯಾಸದ ಶೀಟ್ ರಚನೆಯೊಂದಿಗೆ ಈ ಕಾರು ನೋಡಲು ಬಹಳ ಆಕರ್ಷಕವಾಗಿದೆ. ಇದರಲ್ಲಿ ಫ್ಲಶ್ ಟೈಪ್ ಡೋರ್, ದಪ್ಪನೆಯ ಬಾಡಿ ಕ್ಲಾಡಿಂಗ್, ಕ್ಲಾಮ್ ಶೆಲ್ ಬ್ಯಾಲೆಟ್ ಹಾಗೂ ಲೈಟ್‌ ಸೆಟಪ್ ಇದರ ಫೀಚರ್ಸ್ ಸಾಲಿನಲ್ಲಿ ಕಾಣಬಹುದು. ಅತ್ಯಧಿಕ ಸುರಕ್ಷತಾ ವೈಶಿಷ್ಟ್ಯ ಕೂಡ ಇದರಲ್ಲಿ ಇದೆ.

Kia Clavis ವೈಶಿಷ್ಟ್ಯ ಹೇಗಿದೆ?

 

Image Source: carscoops

 

  • ಇದರ ಹಿಂಭಾಗದಲ್ಲಿ ಅಗಲವಾದ LED ಲೈಟ್ ಬಾರ್ ಇದೆ.
  • 10.25 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ ಹಾಗೂ ಇನ್ ಸ್ಟ್ರು ಮೆಂಟ್ ಡಿಸ್ ಪ್ಲೇ ಹೊಂದಿದೆ.
  • 360 ಡಿಗ್ರಿಯ ಸೌಂಡ್ ವ್ಯೂ ಕ್ಯಾಮರಾ ಹೊಂದಿದೆ.
  • 12 ಪಾರ್ಕಿಂಗ್ ಸೆನ್ಸರ್ ಅನ್ನು ಹೊಂದಿದೆ.
  • ಚಾರ್ಜಿಂಗ್ ಪೋರ್ಟ್ ಮತ್ತು ಎಸಿ ವೆಂಟ್ ಸಿಸ್ಟಂ ಸಹ ಇದೆ.
  • ವೈರ್ ಲೆಸ್ ಚಾರ್ಜಿಂಗ್ ಹಾಗೂ ಪೋಲ್ಡೆಬಲ್ ಸೆಂಟ್ರಲ್ ಆಮ್ ರೆಸ್ಟ್ ಹೊಂದಿದೆ.
  • 4 ಡಿಸ್ಕ್ ಬ್ರೇಕ್ ಸಿಸ್ಟಂ ಹೊಂದಿದೆ.
  • ಸುರಕ್ಷತಾ ದೃಷ್ಟಿಯಿಂದ 6ಏರ್ ಬ್ಯಾಗ್ ಕಿಟ್ ಅನ್ನು ಹೊಂದಿದೆ.
  • ಇದರಲ್ಲಿ ಎರಡು ರೂಪಾಂತರ ವ್ಯವಸ್ಥೆ ಇರಲಿದೆ.

Kia Clavis ಮೈಲೇಜ್, ಬೆಲೆ ಎಷ್ಟು?

ಮೈಲೇಜ್ ವಿಚಾರದಲ್ಲಿ ಕಿಯಾ ಕ್ಲಾವಿಸ್ (Kia Clavis) ಕಾರು 1ಲೀಟರ್ ಟರ್ಬೋ ಪೆಟ್ರೋಲ್ ಇಂಜಿನ್ ಜೊತೆಗೆ ಬರಲಿದೆ. 6ಸ್ಪೀಡ್ ಐಎಂಟಿ ಹಾಗೂ 7 ಸ್ಪೀಡ್ ಡಿಸಿಟಿ ಹೊಂದಿದೆ. ಕ್ಲಾವಿಸ್ EV ಸುಮಾರು 350ರಿಂದ 400km ರೇಂಜ್ ಅನ್ನು ಹೊಂದಿದೆ. ಹಾಗಾಗಿ ಮೊದಲ ಹಂತದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಸ್ಥಾನ ಪಡೆದು ಬಳಿಕ ವಿದೇಶದಲ್ಲಿ ಕೂಡ ಸಂಚಲನ ಮಾಡಲಿದೆ. ಇದರ ಬೆಲೆಯು 6ರಿಂದ 8 ಲಕ್ಷದ ವರೆಗೆ ಇರಲಿದ್ದು ಈ ವರ್ಷದ ಡಿಸೆಂಬರ್ ಒಳಗೆ ಇಡೀ ದೇಶಿಯ ವ್ಯಾಪಿಯಾಗಿ ಕಾರ್ಯ ನಿರ್ವಹಿಸುತ್ತದೆ.

advertisement

Leave A Reply

Your email address will not be published.