Karnataka Times
Trending Stories, Viral News, Gossips & Everything in Kannada

Kia Clavis: ಕ್ರೆಟಾ ಮತ್ತು ಸ್ಕಾರ್ಪಿಯೊ ಕಾರ್ ಗಳನ್ನು ಸೈಡ್ ಲೈನ್ ಮಾಡಲು ಬರುತ್ತಿದೆ ಕಿಯಾ ಕಂಪನಿಯ ಈ ಕಾರು; ಕೇವಲ 9 ಲಕ್ಷಕ್ಕೆ!

advertisement

ನೀವೇನಾದ್ರೂ ಅತಿ ಕಡಿಮೆ ಬೆಲೆಗೆ ಐಷಾರಾಮಿ ಕಾರು ಖರೀದಿ ಮಾಡಲು ಅವಕಾಶ ಸಿಕ್ಕರೆ ಎಷ್ಟು ಚೆನ್ನಾಗಿರುತ್ತೆ ಅಂತ ಕನಸು ಕಾಣುತ್ತಿದ್ದೀರಾ? ಹಾಗಾದ್ರೆ ಈ ಕನಸು ನನಸಾಗುವ ಸಮಯ ಬಂದೇಬಿಡ್ತು ನೋಡಿ. ಕೈಗೆಟುಕುವ ಬೆಲೆಯಲ್ಲಿ ಅತ್ಯುತ್ತಮ ವೈಶಿಷ್ಟ್ಯತೆಗಳನ್ನು ಹೊಂದಿರುವ ಅದ್ಭುತ ನೋಟ ಒಳಗೊಂಡಿರುವ ಕಾರು ಮಾರುಕಟ್ಟೆಗೆ ಬಂದಿದೆ. ಈ ಕಾರಿನ ಮುಂದೆ ಈಗ ಮಾರುಕಟ್ಟೆಯಲ್ಲಿ ಇರುವ ಕ್ರೆಟಾ, ಸ್ಕಾರ್ಪಿಯೋ ಮೊದಲಾದ ಕಾರುಗಳು ಸೈಡ್ ಲೈನ್ ಆಗಲೇಬೇಕು.

ಕಿಯಾದ ಹೊಸ ಕ್ಲಾವಿಸ್!

ಇದೊಂದು ಕ್ಲಾಸಿಕ್ ಕಾರು ಎಂದೇ ಹೇಳಬಹುದು. ಕಿಯಾ ಮೋಟಾರ್ಸ್ ದೇಶದಲ್ಲಿ ಮೈಕ್ರೋ ಎಸ್ ಯು ವಿ ಕಾರನ್ನು ಬಿಡುಗಡೆ ಮಾಡಲು ಸಿದ್ಧವಾಗಿದ್ದು, 5 ಆಸನಗಳ ಕಾರನು ನೀವು ದೂರದ ಡ್ರೈವ್ ಗಾಗಿ ಬಳಸಿಕೊಳ್ಳಬಹುದು.

ಕಿಯಾ ಕ್ಲಾವಿಸ್ ವಿನ್ಯಾಸ!

ಈ ಕಾರಿನ ವಿನ್ಯಾಸ ಉಳಿದ ಕಾರುಗಳಿಗೆ ಪೈಪೋಟಿ ನೀಡುವಂತೆಯೇ ಇರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಕಿಯಾದ ಹೊಸ ಕ್ಲಾವಿಸ್, ಸೆಲ್ಟೋಸ್ ಅನ್ನು ಹೋಲುತ್ತದೆ. ಆದರೆ ಮೈಕ್ರೋ ಎಸ್ಯುಬಿ ವಿಭಾಗದಲ್ಲಿ ಅತ್ಯಂತ ಪರಿಣಾಮಕಾರಿ ಕಾರು ಇದಾಗಬಹುದು.

advertisement

ಕಿಯಾ ಕ್ಲಾವಿಸ್ ಇಂಜಿನ್ ಮತ್ತು ಮೈಲೇಜ್!

ಈ ಕಾರಿನಲ್ಲಿ ಪ್ರಬಲ 1.2 ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ಅಳವಡಿಸಲಾಗಿದೆ. ಉತ್ತಮ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದ್ದು ಸಿಟಿ ಪ್ರದೇಶದಲ್ಲಿ 14 ರಿಂದ 16 ಕೆಎಂಪಿಎಲ್ ಹಾಗೂ ಹೈವೇಯಲ್ಲಿ 17ರಿಂದ 18 kmpl ಮೈಲೇಜ್ ಕೊಡಬಹುದು. 55 ಲೀಟರ್ ಇಂಧನ ಟ್ಯಾಂಕ್ ಅಳವಡಿಸಿರುವ ನಿರೀಕ್ಷೆ ಇದೆ. ಹಾಗಾಗಿ ದೀರ್ಘ ಪ್ರಯಾಣಕ್ಕೆ ಈ ಕಾರು ಹೇಳಿ ಮಾಡಿಸಿದಂತಿದೆ.

ಕಿಯಾ ಕ್ಲಾವಿಸ್ (Kia Clavis) ಕಾರು ಮುಂಬರುವ ದಿನಗಳಲ್ಲಿ ಹುಂಡೈ ಎಕ್ಸ್ಟರ್ (Hyundai Exter) ಹಾಗೂ ಟಾಟಾ ಪಂಚ್ (Tata Punch)ಗೆ ನೇರವಾಗಿ ಸ್ಪರ್ಧಿಸಲಿದೆ. ಇನ್ನು ಇದರ ಒಳಾಂಗಣ ವಿನ್ಯಾಸ ನೋಡುವುದಾದರೆ 10 ಇಂಚಿನ ಟಚ್ ಸ್ಕ್ರೀನ್, ವೆಂಟಿಲೇಟೆಡ್ ಸೀಟ್ ಗಳನ್ನು ಕೊಡಲಾಗಿದೆ. ಬ್ಲೂಟೂತ್ ಕನೆಕ್ಟಿವಿಟಿ ಅಂತಹ ತಂತ್ರಜ್ಞಾನಗಳನ್ನು ಅಳವಡಿಸಲಾಗಿದ್ದು ಪನೋರಮಿಕ್ ಸನ್ರೂಫ್ ನೀಡಲಾಗಿದೆ.

ಕಿಯಾ ಕ್ಲೆವಿಸ್ ಕಾರಿನ ಬೆಲೆ!

ಈ ಕಾರಿನ ಬೆಲೆ ಟಾಟಾ ಪಂಚ್ ಗೆ ಹಾಗೂ ಇತರ ಕಾರ್ ಗಳಿಗೆ ಹೋಲಿಸಿದರೆ ತುಸು ಕಡಿಮೆ ಹಾಗೂ ಹೆಚ್ಚು ಆರಾಮದಾಯಕ ಕಾರು ಎನಿಸಿದೆ. ಇದರ ಎಕ್ಸ್ ಶೋರೂಮ್ ಬೆಲೆ ಒಂಬತ್ತು ಲಕ್ಷ ರೂಪಾಯಿಗಳಿಂದ 13 ಲಕ್ಷದವರೆಗೆ ಇರಬಹುದು. 2024 ರ ಅಂತ್ಯದ ವೇಳೆಗೆ ಭಾರತೀಯ ಮಾರುಕಟ್ತೆಗೆ ಕಿಯಾ ಕ್ಲೆವಿಸ್ ಕಾರು ಬಿಡುಗಡೆ ಆಗುವ ನಿರೀಕ್ಷೆ ಇದೆ.

advertisement

Leave A Reply

Your email address will not be published.