Karnataka Times
Trending Stories, Viral News, Gossips & Everything in Kannada

KSRTC Cargo: ಕೆಎಸ್‌ಆರ್‌ಟಿಸಿ ಕಾರ್ಗೋ ಟ್ರಕ್ ಸೇವೆ ಆರಂಭ, ಕಡಿಮೆ ದರದಲ್ಲಿ ಹೆಚ್ಚಿನ ಸೌಲಭ್ಯ!

advertisement

ಈಗಾಗಲೇ ಕಾಂಗ್ರೆಸ್ ಸರಕಾರವು ಶಕ್ತಿ ಯೋಜನೆಯನ್ನು ಜಾರಿಗೆ ತರುವ ಮೂಲಕ ಮಹೀಳೆಯರಿಗೆ ಸುಲಭ ವಾಗಿ ಪ್ರಯಾಣ ಮಾಡಲು ಅವಕಾಶ ಒದಗಿಸಿದೆ. ಮಹೀಳೆಯರು ಇಂದು ಕೂಡ ತಮ್ಮ ಆಧಾರ್ ಕಾರ್ಡ್ (Aadhaar Card) ತೋರಿಸುವ ಮೂಲಕ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಇದೀಗ ಶಕ್ತಿ ಯೋಜನೆ (Shakti Yojana) ಜಾರಿಗೆ ಬಂದ ಬಳಿಕ ಸಾರಿಗೆ ನಿಗಮದ ಆದಾಯ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಇದೀಗ ಹೊಸದಾದ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಹಾಗಿದ್ರೆ ಯಾವುದು ಈ ಯೋಜನೆ ಏನೆಲ್ಲಾ ಸೌಲಭ್ಯ ಇದೆ ಎಂಬ ಮಾಹಿತಿ ಇಲ್ಲಿದೆ.

ಪ್ರಯಾಣಿಕರಿಗೆ ಖುಷಿ ಸುದ್ದಿ:

ಕರ್ನಾಟಕದಲ್ಲಿ ಮತ್ತು ಕರ್ನಾಟಕದಿಂದ ಹೊರ ರಾಜ್ಯಗಳಿಗೆ ಸಂಚಾರ ಮಾಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಕೆಎಸ್‌ಆರ್‌ಟಿಸಿ ನಮ್ಮ ಕಾರ್ಗೋ (KSRTC Namma Cargo) ಹೆಸರಿನ ಕಾರ್ಗೋ ಸೇವೆಯನ್ನು ಆರಂಭ ಮಾಡಿದ್ದು ಪ್ರಯಾಣಿಕರಿಗೆ ಖುಷಿಯ ವಿಚಾರ ಆಗಿದೆ.ಅದೇ ರೀತಿ ಇದೀಗ ಟ್ರಕ್ ಸೇವೆಯನ್ನು ಆರಂಭ ಮಾಡಿದೆ.

 

ಇದರ ಸೇವೆ ಎಲ್ಲಿ ಲಭ್ಯವಿದೆ:

advertisement

KSRTC ನಮ್ಮ ಕಾರ್ಗೋ (Namma Cargo) ಹಲವು ಸ್ಥಳಗಳಲ್ಲಿ ಲಭ್ಯವಿದ್ದು ಬೆಂಗಳೂರು, ತುಮಕೂರು, ಹಾಸನ, ಮಂಗಳೂರು, ಮೈಸೂರು ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಇತ್ಯಾದಿ ಭಾಗಗಳಿಗೆ ಕೆಎಸ್‌ಆರ್‌ಟಿಸಿ ನಮ್ಮ ಕಾರ್ಗೊ ಸೇವೆ ಲಭ್ಯವಿದೆ.

ಸಾರಿಗೆ ಸಚಿವರು ಹೇಳಿದ್ದೇನು?

 

 

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನಮ್ಮ ಕಾರ್ಗೋ ಟ್ರಕ್ ‌ (Cargo Truck) ಆರಂಭ ಮಾಡಿದ್ದು, 20 ಹೊಸ ಕಾರ್ಗೋ ಟ್ರಕ್‌ಗಳೊಂದಿಗೆ ಹೊಸ ಸೇವೆ ಶುರುಮಾಡಿದೆ. ಹಂತ ಹಂತವಾಗಿ ವಿಸ್ತರಣೆ ಮಾಡುವುದಾಗಿ ಸಾರಿಗೆ ಸಚಿವರು ‌ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಸಚಿವರು ಮುಂದಿನ ಒಂದು ತಿಂಗಳಿನಲ್ಲಿ 100 ಟ್ರಕ್‌ಗಳು ಸೇವೆಗೆ ಲಭ್ಯವಿರಲಿವೆ. ಒಂದು ವರ್ಷದೊಳಗೆ 500 ಟ್ರಕ್‌ಗಳನ್ನು ಸೇರಿಸಲಾಗುವುದು ಎಂದು ಮಾಹಿತಿ ನೀಡಿದ್ರು.

ಏನೆಲ್ಲಾ ವ್ಯವಸ್ಥೆ ಇದೆ:

ಕಾರ್ಗೋ ವಾಹನಗಳಲ್ಲಿ GPS ಇದೆ, ಇನ್ಶೂರೆನ್ಸ್ ಇರಲಿದೆ, ಮೊಬೈಲ್ ಟ್ರಾಕಿಂಗ್ ಇರಲಿದೆ.ಈ ಪ್ರಯಾಣದಲ್ಲಿ ವ್ಯವಸ್ಥಿತ ಮತ್ತು ಸಮರ್ಪಕವಾದ ಕಾರ್ಗೋ ಸೇವೆಯನ್ನು ಒದಗಿಸಲಾಗುತ್ತದೆ. KSRTC ನಮ್ಮ ಕಾರ್ಗೋ ಸೇವೆಗೆ ಒಂದು ಕಿ.ಮೀ. ನಿಂದ 100 ಕಿ.ಮೀ. ತನಕ ದರ 5,000 ರೂಪಾಯಿ ಆಗಿದೆ. ಈ ಬಗ್ಗೆ ಹೆಚ್ಚಿನ‌ ಮಾಹಿತಿ ಬೇಕಾದ್ದಲ್ಲಿ‌ ಸಂಖ್ಯೆ 080-26252625 ನೀವು ಕರೆ ಮಾಡಿ ತಿಳಿದು ಕೊಳ್ಳಬಹುದು.

advertisement

Leave A Reply

Your email address will not be published.