Karnataka Times
Trending Stories, Viral News, Gossips & Everything in Kannada

Traffic Rules: ಹೊಸ ವರ್ಷಕ್ಕೆ ಇನ್ನಷ್ಟು ಬಿಗಿವಾಯ್ತು ಟ್ರಾಫಿಕ್ ರೂಲ್ಸ್, ತಪ್ಪು ಮಾಡಿದ್ರೆ ಕಠಿಣ ಕ್ರಮ ಜಾರಿ!

advertisement

ಇನ್ನೇನು ಕೆಲವೇ ದಿನದಲ್ಲಿ ಈ ವರ್ಷದ ಅಂತಿಮ ಹಂತಕ್ಕೆ ತಲುಪಿ ಮತ್ತೆ ಹೊಸ ವರುಷದತ್ತ ನಾವೆಲ್ಲರು ಕಾಲಿಡುತ್ತಿದ್ದೇವೆ ಹಾಗಾಗಿ ಈ ಹೊಸ ವರ್ಷ ಆರಂಭದ ದಿನಕ್ಕೆ ಅನೇಕ ಸಂಗತಿಗಳು ಬದಲಾವಣೆ ಕಾಣಲಿದ್ದು ಅಂತಹ ಒಂದು ಸಂಗತಿಯಲ್ಲಿ ಸಂಚಾರ ನಿಯಮ ಕೂಡ ಸೇರಿಕೊಂಡಿದೆ. ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಡಿಸೆಂಬರ್ 31 ರಿಂದ ಜನವರಿ 1 ರಂದು ಸಂಚಾರ ವ್ಯವಸ್ಥೆ ಬಹುಮಟ್ಟಿಗೆ ಬದಲಾಗಲಿದೆ. ರಾಜ್ಯದಲ್ಲಿ ಹೊಸ ವರ್ಷಕ್ಕೆ ಈ ಹೊಸ ನಿಯಮಗಳ (Traffic Rules) ಪಾಲನೆ ಕಡ್ಡಾಯವಾಗಲಿದ್ದು ಈ ಬಗ್ಗೆ ಮಾಹಿತಿ ಇಲ್ಲಿದೆ.

ಹೊಸ ವರ್ಷ ಬಂದಾಗ ವರ್ಷದ ಮೊದಲ ದಿನವೇ ಮೋಜು ಮಸ್ತಿ, ಪ್ರವಾಸ ಹೀಗೆ ಅನೇಕ ಕಾರಣಕ್ಕೆ ಪ್ರಯಾಣಿಕರ ಸಂಖ್ಯೆ ಎಂದಿಗಿಂತ ಹೆಚ್ಚಾಗಲಿದೆ ಎಂದು ಹೇಳಬಹುದು. ಹಾಗಾಗಿ ಹೊಸ ವರ್ಷದಿಂದ ಕೆಲ ಅಗತ್ಯ ನಿಯಮ ಬದಲಾಗಲಿದ್ದು ಈ ಬಗ್ಗೆ ಸಾರಿಗೆ ಇಲಾಖೆ ಯಿಂದ ಕೂಡ ನಿರ್ದೇಶನ ಬಂದಿದೆ. ಕೆಲ ನಿಯಮ ಜಾರಿಗೆ ಬರುತ್ತಿದ್ದರೆ ಇನ್ನೂ ಕೆಲ ಹಳೆ ನಿಯಮಕ್ಕೆ ಮರುಪರಿಶೀಲನೆ ಮಾಡಿ ಕೆಲ ಅಗತ್ಯ ಮಾರ್ಪಾಡು ಮಾಡಲಾಗುತ್ತಿದೆ.

ಬೆಂಗಳೂರಿನಲ್ಲಿ ಹೀಗಿರಲಿದೆ ನಿಯಮ:

 

 

advertisement

ರಾಜಧಾನಿ ಬೆಂಗಳೂರಿನಲ್ಲಿ ವಾಹನ ದಟ್ಟಣೆ ತಡೆಯಲು ಕೆಲ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಮೂಲಕ ಎಂಜಿ ರಸ್ತೆ (MG Road), ಬ್ರಿಗೇಡ್ ರಸ್ತೆ (Brigade Road), ಚರ್ಚ್ ಸ್ಟ್ರೀಟ್ (Church Street), ಸೈಂಟ್ ಮಾರ್ಕ್ಸ್ ರಸ್ತೆ (St Marks Road), ರೆಸ್ಟ್ ಹೌಸ್ ರಸ್ತೆ (Rest House Road), ರೆಸಿಡೆನ್ಸಿ ರಸ್ತೆ (Residency Road) ವಾಹನ ಸಂಚಾರ ಮತ್ತು ನಿಲುಗಡೆ ಮೇಲೆ ಕೆಲ ನಿರ್ಬಂಧ ವಿಧಿಸಲಾಗಿದೆ. ಕೆಲವು ಭಾಗದಲ್ಲಿ ನೋ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು ಡಿಸೆಂಬರ್ 31 ಹಾಗೂ ಜನವರಿ 1 ರ ಅವಧಿಗೆ ಈ ನಿಯಮ ಕಡ್ಡಾಯವಾಗಲಿದ್ದು ಪಾಲನೆ ಮಾಡಲೇಬೇಕು. ಒಂದು ವೇಳೆ ನೀವು ಪಾರ್ಕ್ ಮಾಡಿದ್ದರೂ ಡಿಸೆಂಬರ್ 31 ರ ಸಂಜೆ 4 ಗಂಟೆಗೆ ತೆರವು ಗೊಳಿಸಬೇಕು ಇಲ್ಲವಾದರೆ ದಂಡ ಬರಿಸಬೆಕಾಗುತ್ತದೆ. ಇಷ್ಟು ಮಾತ್ರವಲ್ಲದೇ ಬೆಂಗಳೂರಿನ ಹಲವು ಮಾರ್ಗದಲ್ಲಿ ಬದಲಿ ಮಾರ್ಗ ಸೂಚನೆ ನೀಡಲಾಗಿದ್ದು ಈ ನಿಯಮ ಕೂಡ ಎಲ್ಲರೂ ಪಾಲಿಸಲೇ ಬೇಕು.

ಸಂಚಾರ ನಿಯಮ ಪಾಲನೆ ಕಡ್ಡಾಯ:

 

 

ಹೊಸ ವರ್ಷ ಬಂತು ಎಂದಾಗ ಗುಂಡು ತುಂಡಿನ ಪಾರ್ಟಿ ಜೋರಾಗೆ ಇರುತ್ತದೆ. ಹಾಗೆಂದು ಪೂರ್ತಿ ಕುಡಿದು ಓಲಾಡ್ತಾ ವಾಹನ ಚಲಾಯಿಸಿದ್ರೆ ಅಂತವರ ವಿರುದ್ಧ ಕೂಡ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಸಾರಿಗೆ ವಿಚಾರದಲ್ಲಿ ಸಂಚಾರ ನಿಯಮ ಕಟ್ಟು ನಿಟ್ಟಾಗಿ ಪಾಲಿಸಲು ವ್ಯವಸ್ಥೆ ರೂಪಿಸಲಾಗಿದೆ. ಮದ್ಯಪಾನ ಮಾಡಿ ಡ್ರೈವ್ ಮಾಡುವವರ ವಿರುದ್ಧ ಕಠಿಣ ಕ್ರಮಗಳನ್ನು ಜಾರಿಗೆ ತರಲು ಸರಕಾರ ಚಿಂತಿಸಿದೆ.

ಸಿಗ್ನಲ್ ಜಂಪ್ ಮಾಡುವುದು, ಓವರ್ ಸ್ಪೀಡ್ ಹೋಗುವುದು, ಸೀಟ್ ಬೆಲ್ಟ್ ಹಾಕದಿರುವುದು, ಹೆಲ್ಮೆಟ್ ಹಾಕದಿರುವುದು, ಪೊಲೀಸರ ಜೊತೆ ಅನುಚಿತ ವರ್ತನೆ ಇನ್ನೂ ಅನೇಕ ವಿಧವಾದ ವಿಚಾರಕ್ಕೆ ಸಂಬಂಧಿಸಿದ ನಿಯಮಗಳು ಈಗ ಮತ್ತಷ್ಟು ಕಠಿಣವಾಗಿದೆ. DL, ಆರ್ ಸಿ ದಾಖಲಾತಿ (RC Registration) ಇದ್ದೂ ವಾಹನ ತಪಾಸಣೆ ಅಥವಾ ವ್ಯಕ್ತಿಗೆ ಪೊಲೀಸರು ಪ್ರಶ್ನೆ ಮಾಡಿ ಅವರೊಂದಿಗೆ ಅನುಚಿತ ಅಥವಾ ಅಸಂಬದ್ಧವಾಗಿ ವರ್ತಿಸಿದರೂ ಕೂಡ ಶಿಕ್ಷೆ ವಿಧಿಸಲಾಗುವುದು ಹಾಗಾಗಿ ಈ ಬಗ್ಗೆ ಎಚ್ಚೆತ್ತುಕೊಳ್ಳುವುದು ಅತೀ ಅಗತ್ಯ.

advertisement

Leave A Reply

Your email address will not be published.