Karnataka Times
Trending Stories, Viral News, Gossips & Everything in Kannada

Maruti Brezza: ಮಾರುತಿ ಕಂಪನಿಯ ಈ SUV ಕಾರು ಇಲ್ಲಯವರೆಗೂ 10ಲಕ್ಷ ಯೂನಿಟ್ ಮಾರಾಟ, ಬೆಲೆ ಕೇವಲ 9ಲಕ್ಷ!

advertisement

ಕಾರು ಕಂಪನಿಯ ಅತೀ ಶ್ರೇಷ್ಠ ಸ್ಥಾನವನ್ನು ಹೊಂದಿರುವ ಮಾರುತಿ ಕಂಪೆನಿ ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆಯುತ್ತಿದ್ದು ಈಗಾಗಲೇ ಇದೇ ಕಂಪೆನಿ ಅಧೀನದಲ್ಲಿ ತುಂಬಾ ಕಾರ್ ಸೇಲ್ ಆಗಿದೆ. ಅದೇ ರೀತಿ ಮಾರುತಿ ವಿಟಾರಾ ಬ್ರೆಝಾ ಕೂಡ ಈಗ ಮಹತ್ವ ಪೂರ್ಣ ಸಾಧನೆ ಮಾಡಿದೆ. ಹಾಗಾಗಿ ಈ ಸುದ್ದಿ ಸದ್ಯ ಜಾಹಿರವಾಗುತ್ತಿದೆ.

ಅಧಿಕ ಮಾರಾಟ

ಮಾರುತಿ ಕಂಪೆನಿಯ ಬ್ರೆಝಾ (Maruti Brezza) ಕಾರು ಈ ಹಿಂದಿನಿಂದಲೂ ಬಹಳ ಪ್ರಾಮುಖ್ಯತೆ ಪಡೆದಿದ್ದು 2016ರರ ಮಾರ್ಚ್ ನಿಂದ ಈ ಕಾರು ಬಿಡುಗಡೆ ಮಾಡಲಾಗಿತ್ತು ಬಳಿಕ ಈಗ ಅದು ಅತೀ ಹೆಚ್ಚು ಸೇಲ್ ಪಡೆದ ಕಾರುಗಳ ಸಾಲಿಗೆ ಬಂದಿದೆ. 2023ರ ಡಿಸೆಂಬರ್ ವರೆಗಿನ ಅಂಕಿ ಅಂಶವನ್ನು ಪರಿಗಣಿಸಲಾಗುತ್ತಿದ್ದು 7 ವರ್ಷ 8ತಿಂಗಳ ಅವಧಿಯಲ್ಲಿ 10ಲಕ್ಷಕ್ಕೂ ಮೀರಿ ಈ ಕಾರು ಮಾರಾಟವಾಗಿದೆ.

ಇದುವರೆಗೆ ಎಷ್ಟು ಮಾರಾಟವಾಗಿದೆ?

advertisement

ಮಾರ್ಚ್ 2016ರಿಂದ ನವೆಂಬರ್ 2023ರ ವರೆಗೆ ಬ್ರೆಜ್ಜಾ ಕಂಪೆನಿಯ ಕಾರು 9,96,608 ಯುನಿಟ್ ನಷ್ಟು ಮಾರಾಟ ಕಂಡಿದೆ. ಎಪ್ರಿಲ್ ನಿಂದ ನವೆಂಬರ್ ವರೆಗೆ ಬ್ರೆಜಾ ಕಂಪೆನಿಯ ಕಾರು 1, 11,371ಯುನಿಟ್ ನಷ್ಟು ಮಾರಾಟ ಆಗಿದೆ. ಸರಾಸರಿ ಆಧಾರದ ಮೇಲೆ ವಾರಕ್ಕೆ 3,480, ಪ್ರತೀ ದಿನ 497 ಹಾಗೇ ಮಾಸಿಕ ಮಾರಾಟ 13, 921ಯುನಿಟ್ ನಷ್ಟು ಮಾರಾಟ ಆಗಿದೆ. ಬಳಿಕ 2023ರ ಡಿಸೆಂಬರ್ ನಲ್ಲಿ ಮೊದಲವಾರವೇ ಎಲ್ಲ ದಾಖಲೆಯನ್ನು ಸಹ ಮೀರಿಸುತ್ತಿದೆ.

ಕಾಂಪ್ಯಾಕ್ಟ್ SUV  ಕೂಡ ಪ್ರಬಲ ಪೈಪೋಟಿ ನೀಡುತ್ತಿದೆ. 2019ರಲ್ಲಿ FY 1,57, 880 ಯುನಿಟ್ ನಷ್ಟು ಮಾರಾಟ ಆಗಿದ್ದರೆ ಅದೇ ಅವಧಿಯಲ್ಲಿ ಬ್ರೆಝಾ ಕಾರು 1,67,055 ಯುನಿಟ್ ನಷ್ಟು ಮಾರಾಟವಾಗಿದೆ. ಇದಕ್ಕೆ ಮುಖ್ಯ ಕಾರಣ ಈ ವರ್ಷದ ಮೊದಲ ಭಾಗಕ್ಕೆ ಮಾರ್ಚ್ ನಲ್ಲಿ CNG ರೂಪಾಂತರ ಪರಿಚಯ ಮಾಡಿದ್ದು ಇದರ ಬೆಳವಣಿಗೆಗೆ ಮತ್ತಷ್ಟು ಸಹಕಾರಿ ಆಗಿದೆ ಎನ್ನಬಹುದು. FY ಕಾರು 2022 ರಿಂದ 2023 ರ ವರೆಗೆ ಈ ಮಾರಾಟವಾಗಿದೆ.

ಪ್ರಬಲ ಪೈಪೋಟಿ

FY2023ಮೊದಲ 8ತಿಂಗಳು ಬ್ರೇಜಾ ಮಾರಾಟವು ಹೆಚ್ಚು ಮಾರಾಟವಾದ SUV ಆಗಿದೆ. ಇದೇ ಅವಧಿಯಲ್ಲಿ ಟಾಟಾ ನೆಕ್ಸಾನ್ 1,10, 778ಯುನಿಟ್ ರವರೆಗೆ ಮಾರಾಟಮಾಡಿದ್ದು ಬ್ರೆಜಾಗಿಂತ 593 ಯುನಿಟ್ ನೆಕ್ಸಾನ್ ಮುಂದಿದೆ ಎನ್ನಬಹುದು. ಹುಂಡೈ ಕ್ರೇಟಾ ಮತ್ತು ಟಾಟಾ ಪಂಚ್ ಗಳು ಕೂಡ ಈ ಅವಧಿಯಲ್ಲಿ ಪ್ರಬಲ ಪೈಪೋಟಿ ನೀಡುತ್ತಿದೆ. ಮಾರುತಿ ಸುಜುಕಿ ಕಾರಿನ ಬೆಲೆ ಎಷ್ಟಿರಬಹುದು ಎಂಬ ಕುತೂಹಲ ನಿಮಗೆ ಇದ್ದರೆ 9,06,485 ರೂಪಾಯಿನಷ್ಟಿದೆ. ಈ ಬಗ್ಗೆ ಮಾಹಿತಿ ನಿಮಗೆ ಇಷ್ಟ ಆದಲ್ಲಿ ಲೈಕ್ ಮಾಡಿ ಕಮೆಂಟ್ ಮಾಡಿ

advertisement

Leave A Reply

Your email address will not be published.