Karnataka Times
Trending Stories, Viral News, Gossips & Everything in Kannada

Google Pay: ಗೂಗಲ್ ಪೇ ನಲ್ಲಿ ರೀಚಾರ್ಜ್ ಮಾಡುವ ಮುನ್ನ ಈ ವಿಚಾರ ತಪ್ಪದೇ ಓದಿ!

advertisement

ಭಾರತದಲ್ಲಿ ಬಳಕೆ ಆಗಲ್ಪಡುವ ಫೇಮಸ್ ಆನ್ಲೈನ್ ಪೇಮೆಂಟ್ ಆ್ಯಪ್ ನಲ್ಲಿ ಗೂಗಲ್ ಪೇ (Google Pay) ಅತೀ ಹೆಚ್ಚು ಗ್ರಾಹಕರ ಮನ ಸೆಳೆದಿದೆ. ಇದರ ಸೇವೆ ಅತ್ಯಂತ ಕ್ಲಪ್ತ ಸಮಯಕ್ಕೆ ಸಿಗುವ ಜೊತೆಗೆ ಭಾರದಲ್ಲಿ ಕ್ಯಾಶ್ ಲೆಸ್ ಡಿಜಿಟಲ್ ವಹಿವಾಟಿಗೆ ಕೊಡುಗೆ ಅಪಾರ ಆಗಿದೆ. ಈ ಮೂಲಕ ಪೇಟಿಯಂ (Paytm), ಫೋನ್ ಪೇ (Phone Pe), ಭೀಮ್ (BHIM) ಇತ್ಯಾದಿ ಆ್ಯಪ್ ಗಳ ಸಾಲಿನಲ್ಲಿ ಇದು ಮುಂಚುಣಿಯಲ್ಲಿದೆ. ಹೀಗೆ ಗ್ರಾಹಕರ ಪ್ರಮಾಣ ಅಧಿಕವಾಗುತ್ತಿದ್ದಂತೆ ಸೇವೆಯ ಕ್ರಮ ಕೂಡ ಈಗ ಗೂಗಲ್ ಪೇ ನಲ್ಲಿ ಬದಲಾಗುತ್ತಿದೆ ಎನ್ನಬಹುದು.

ಶುಲ್ಕ ಅನ್ವಯವೇ?

ಇತ್ತೀಚೆಗಷ್ಟೇ UPI ಸೇವೆ ಹೆಚ್ಚು ಸರಳಿಕರಣಗೊಳಿಸಲು ಕ್ರಮ ಕೈಗೊಳ್ಳಲಾಗಿತ್ತು ಅದೇ ರೀತಿ ಇದೀಗ ಗೂಗಲ್ ಪೇ (Google Pay) ಬಳಕೆದಾರರಿಗೆ ಹೊಸ ವಿಚಾರ ಒಂದು ತಿಳಿದುಬಂದಿದೆ. ಈ ಹಿಂದೆ ನೀವು ಮೊಬೈಲ್ ಫೋನ್, ಟೀವಿ ರೀಚಾರ್ಜ್ (Tv Recharge)  ಮಾಡುವುದಾದರೆ ಅದಕ್ಕೆ ಸೇವಾ ಶುಲ್ಕ ಇರಲಿಲ್ಲ ಆದರೆ ಇನ್ನು ಮುಂದೆ ಈ ನಿಯಮ ಬದಲಾಗಲಿದೆ. ನೀವು ಗೂಗಲ್ ಪೇ ನಲ್ಲಿ ಪ್ರೀ ಪೇಯ್ಡ್ ಯೋಜನೆ ಹಾಕಿ ಕೊಂಡರೆ ಮೂರು ರೂಪಾಯಿ ತನಕ ಸೇವಾಶುಲ್ಕನೀಡಬೇಕು. ಈ ಒಂದು ಸೇವೆ UPI ಹಾಗೂ ಕಾರ್ಡ್ ಎರಡಕ್ಕೂ ಅನ್ವಯವಾಗಲಿದೆ. ಹಾಗಾಗಿ ಗ್ರಾಹಕರಿಗೆ ಈ ವ್ಯವಸ್ಥೆ ಕಷ್ಟಕರವಾಗಲಿದೆ.

ಯಾವುದಕ್ಕೆ ಎಷ್ಟು ಶುಲ್ಕ:

 

 

advertisement

100 ರೂಪಾಯಿಗಿಂತ ಕಡಿಮೆ ಮೊತ್ತದ ರೀಚಾರ್ಜ್ ಗಳಿಗೆ ಶುಲ್ಕವಿರಲಾರದು. 100 ರಿಂದ 200 ರೂಪಾಯಿ ವರೆಗೆ ರೀಚಾರ್ಜ್ ಮಾಡಿದರೆ 2 ರೂಪಾಯಿ ಶುಲ್ಕ ಅದೇ ರೀತಿ 200ರಿಂದ 300ರೂಪಾಯಿ ರೀಚಾರ್ಜ್ ಮಾಡಿದರೆ 3 ರೂಪಾಯಿ. ಹಾಗೇಯೇ 300 ಕ್ಕಿಂತ ಅಧಿಕವಾದರೂ ಕೂಡ ಮೂರು ರೂಪಾಯಿ ಶುಲ್ಕ ಪಾವತಿ ಮಾಡಬೇಕು. ಈ ಮೂಲಕ ಗೂಗಲ್ ಪೇ ತನ್ನ ಸೇವೆಯಲ್ಲಿ ಮಹತ್ವದ ಬದಲಾವಣೆ ತಂದಿದ್ದು ಸೇವಾ ಶುಲ್ಕ ಕಡಿಮೆ ಹಣ ಇರುವವರಿಗೆ ಅನಗತ್ಯ ಖರ್ಚು ಎಂಬ ಪ್ರಶ್ನೆ ಎದುರಾಗಲಿದೆ.

ಗ್ರಾಹಕರಿಗೂ ಮನದಟ್ಟು:

 

 

ಗೂಗಲ್ ಪೇ ಈ ರೀತಿ ಕ್ರಮದ ಬಗ್ಗೆ ಮೆಸೇಜ್ ಸಿಸ್ಟಂ ಜಾರಿಗೆ ತರಲು ಮುಂದಾಗಿದೆ. ಆನ್ಲೈನ್ ರೀಚಾರ್ಜ್ (Online Recharge) ಮಾಡಲು ಹೋದಾಗ ಅದರಲ್ಲಿ ಕನ್ವಿನಿಯೆನ್ಸ್ ಫೀಸ್ 3ರೂಪಾಯಿ ಎಂದು ಕೂಡ ತೋರಿಸಲಾಗುತ್ತಿದ್ದು ಗ್ರಾಹಕರಿಗೆ ಈ ಬಗ್ಗೆ ಮನದಟ್ಟು ಮಾಡುವ ಪ್ರಯತ್ನವನ್ನು ಗೂಗಲ್ ಪೇ ಸಂಸ್ಥೆ ಮಾಡುತ್ತಿದೆ. ಹಾಗಾಗಿ UPI ನಲ್ಲಿ ಬರುವ ಪೇಮೆಂಟ್ ಆ್ಯಪ್ ಗಳಲ್ಲಿ ಬಹುತೇಕ ಇದೇ ಕ್ರಮ ಜಾರಿಗೆ ಬರುವ ಸಾಧ್ಯತೆ ಇದೆ.

ಹೆಚ್ಚುವರಿ ವೆಚ್ಚ:

ಇಷ್ಟುದಿನ ರೀಚಾರ್ಜ್ ಮಾಡುವಾಗ ಮನೆಯಲ್ಲಿಯೇ ಒಂದೇ ಮೊಬೈಲ್ ನಲ್ಲಿ ಎಲ್ಲರ ಫೋನ್ ರೀಚಾರ್ಜ್ ಮಾಡುತ್ತಿದ್ದ ಗ್ರಾಹಕರಿಗೆ ಈಗ ಹೆಚ್ವುವರಿ ವೆಚ್ಚ ಬರಿಸುವ ಬೇಸರ ಕಾಡಿದೆ. ಗೂಗಲ್ ಪೇ ಈ ಹಿಂದಿನಿಂದಲೂ ಬಹಳ ನಂಬಿಕಸ್ತ ಆನ್ಲೈನ್ ಪೇಮೆಂಟ್ ಆ್ಯಪ್ ಆದ ಕಾರಣ ಈ ಹೆಚ್ಚುವರಿ ಶುಲ್ಕ ಇದ್ದರೂ ರೀಚಾರ್ಜ್ ಮಾಡುವವರ ಸಂಖ್ಯೆ ಕಡಿಮೆ ಏನು ಆಗಲಾರದು ಎಂದು ಹೇಳಬಹುದು.

advertisement

Leave A Reply

Your email address will not be published.