Bank Account: ನಿಮ್ಮ ಬ್ಯಾಂಕ್ ಖಾತೆಗೆ ಬೇರೆಯವರ ಹಣ ಆಕಸ್ಮಿಕವಾಗಿ ಬಂದ್ರೆ ತಕ್ಷಣವೇ ಈ ಕೆಲಸ ಮಾಡಿ!
ನಾವು ಯಾವಾಗಲೂ ಆಕಸ್ಮಿಕ ಹಣ ನಮ್ಮ ಖಾತೆಗೆ ಬಂದ್ರೆ ಎಷ್ಟು ಚೆನ್ನಾಗಿರುತ್ತೆ ಅಂತ ಬಯಸುವುದು ಸಹಜ. ಹಾಗಂದ ಮಾತ್ರಕ್ಕೆ ನಿಜಕ್ಕೂ ಬೇರೆಯವರಿಗೆ ಹೋಗಬೇಕಿದ್ದ ಹಣ (Money) ನಿಮ್ಮ ಖಾತೆ (Bank Account) ಯನ್ನು ಸೇರಿದ್ರೆ ನೀವು ಏನು ಮಾಡುತ್ತೀರಿ? ಆ ವ್ಯಕ್ತಿಗೆ ಹಿಂತಿರುಗಿಸುತ್ತೀರಾ? ಅಥವಾ ಬಯಸದೆ ಬಂದ ಭಾಗ್ಯ ಅಂತ ನಿಮ್ಮ ಬಳಿಯೇ ಇಟ್ಟುಕೊಳ್ಳುತ್ತೀರಾ?
ಸ್ನೇಹಿತರೆ, ನಾವು ಬ್ಯಾಂಕಿನ ವ್ಯವಹಾರ ಮಾಡುವಾಗ ಬಹಳ ಜಾಗರೂಕತೆಯಿಂದ ಇರಬೇಕು. ಒಂದೇ ಒಂದು ಅಂಕೆ ಅಥವಾ ಒಂದೇ ಒಂದು ನಂಬರ್ ತಪ್ಪಾಗಿ ಬರೆದರೂ ಕೂಡ ಅದು ಇನ್ನೇನೋ ಅವಾಂತರ ಸೃಷ್ಟಿಸಬಹುದು. ಉದಾಹರಣೆಗೆ ನೀವು ಯಾರದೋ ಅಕೌಂಟ್ ಗೆ ಹಣ ವರ್ಗಾವಣೆ ಮಾಡುತ್ತೀರಿ ಎಂದು ಭಾವಿಸಿ. ನೀವು ಹೀಗೆ ಹಣ ವರ್ಗಾವಣೆ ಮಾಡುವಾಗ ಅವರ ಅಕೌಂಟ್ ನಂಬರ್ (Account Number) ನಲ್ಲಿ ಒಂದೇ ಒಂದು ತಪ್ಪು ಮಾಡಿದರು ಸಾಕು, ಅದು ಬೇರೆಯವರ ಅಕೌಂಟಿಗೆ ಹಣ ಹೋಗುವಂತೆ ಆಗಬಹುದು.
ಬೇರೆಯವರ ಹಣ ನಿಮ್ಮ ಖಾತೆಗೆ ಬಂದ್ರೆ ಏನು ಮಾಡಬೇಕು?
ಅಚಾನಕ್ ಆಗಿ ನಮ್ಮ ಖಾತೆಗೆ (Bank Account) ಹಣ (Money) ಬಂದು ಸೇರಿದರೆ ಖುಷಿ ಆಗುವುದು ಸಹಜ. ಹಾಗಂದ ಮಾತ್ರಕ್ಕೆ ಬೇರೆಯವರ ಹಣವನ್ನು ನೀವು ನಿಮ್ಮ ಖಾತೆಯಲ್ಲಿ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಅಪರಿಚಿತ ವ್ಯಕ್ತಿಯಿಂದ ನಿಮ್ಮ ಖಾತೆಗೆ ಹಣ ಬಂದರೆ ತಕ್ಷಣ ನೀವು ಬ್ಯಾಂಕ್ ಗೆ ಮಾಹಿತಿ ತಿಳಿಸಬೇಕು. ಯಾವ ದಿನಾಂಕ, ಯಾವ ಸಮಯ, ಯಾವ ಖಾತೆಯಿಂದ ನಿಮಗೆ ಹಣ ಬಂದಿದೆ? ಎಷ್ಟು ಮೊತ್ತ ಬಂದಿದೆ? ಎಂಬುದನ್ನು ಬ್ಯಾಂಕ್ ನ ಗಮನಕ್ಕೆ ತರಬೇಕು. ಆಗ ಬ್ಯಾಂಕ್ ತಕ್ಷಣ ಕಾರ್ಯ ಪ್ರವೃತ್ತವಾಗಿ ನಿಮ್ಮ ಖಾತೆಯ ಹಣ ಯಾರ ಖಾತೆಗೆ ತಲುಪಬೇಕೋ, ಅದನ್ನ ಪತ್ತೆ ಮಾಡಿ ಅವರ ಖಾತೆಗೆ ಹಿಂತಿರುಗಿಸುವಂತೆ ಮಾಡುತ್ತದೆ.
ಈ ಪ್ರಕ್ರಿಯೆಯಲ್ಲಿ ಸ್ವಲ್ಪ ಸಮಯ ಬೇಕಾಗಬಹುದು. ಅಷ್ಟರಲ್ಲಿ ನೀವು ಆ ಹಣವನ್ನು ನಿಮ್ಮ ಖಾತೆ (Bank Account) ಯಿಂದ ನಿಮ್ಮ ವಯಕ್ತಿಕ ಕೆಲಸಕ್ಕೆ ಬಳಸಿಕೊಳ್ಳುವುದಕ್ಕೆ ಹೋಗಬೇಡಿ. ಒಂದು ವೇಳೆ ನಿಮ್ಮ ಖಾತೆಗೆ ಅಪರಿಚಿತ ವ್ಯಕ್ತಿಯಿಂದ ಹಣ ಬಂದರೆ ಅದನ್ನು ನೀವು ಬಳಸಿಕೊಂಡಿದ್ದರೆ ನಂತರ ಆ ಹಣವನ್ನು ಮರುಪಾವತಿ ಮಾಡಬೇಕಾಗುತ್ತದೆ. ಹಾಗಾಗಿ ಬ್ಯಾಂಕಿನಿಂದ ನಿಮಗೆ ಮಾಹಿತಿ ಬರುವವರೆಗೂ ನಿಮ್ಮ ಖಾತೆಯಲ್ಲಿ ಇರುವ ಬೇರೆಯವರ ಹಣವನ್ನು ಮುಟ್ಟಲು ಹೋಗಬೇಡಿ.
ಬೇರೆಯವರ ಖಾತೆಗೆ ಹೋಗಬೇಕಿದ್ದ ಹಣ ಆಕಸ್ಮಿಕವಾಗಿ ನಿಮ್ಮ ಖಾತೆಗೆ ಬಂದರೆ ನೀವು ಆ ಹಣವನ್ನು ಬಳಸಿಕೊಳ್ಳಲು ಹೋಗಬೇಡಿ ಒಂದು ವೇಳೆ ಬಳಸಿಕೊಂಡರೆ ಪೂರ್ಣ ಪ್ರಮಾಣದ ಹಣವನ್ನು ನೀವು ಕಟ್ಟಿಕೊಡಬೇಕು ಅಷ್ಟೇ ಅಲ್ಲದೆ ಬ್ಯಾಂಕ್ ನಿಮ್ಮ ಖಾತೆಯನ್ನು Freeze ಮಾಡುವ ಸಾಧ್ಯತೆ ಕೂಡ ಇರುತ್ತದೆ. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಂಡು ನಿಮ್ಮ ಖಾತೆಗೆ ಬೇರೆಯವರ ಹಣ ಬಂದಿದ್ದರೆ ತಕ್ಷಣ ಅದನ್ನು ಮರುಪಾವತಿಸುವ ವ್ಯವಸ್ಥೆ ಮಾಡಿ.