Karnataka Times
Trending Stories, Viral News, Gossips & Everything in Kannada

UPI: ಈ ಕೆಲಸ ಮಾಡದಿದ್ರೆ ನಿಮ್ಮ ಡಿಜಿಟಲ್ ಪೇಮೆಂಟ್ ಆ್ಯಪ್ ಹೊಸ ವರ್ಷದ ಆರಂಭಕ್ಕೆ ರದ್ದಾಗಲಿದೆ!

advertisement

ಡಿಜಿಟಲ್ ಪೇಮೆಂಟ್ ಕಡೆ ಹೆಚ್ಚಿನ ಜನರು ತಮ್ಮ ಒಲವನ್ನು ಹೊಂದಿದ್ದು ಆನ್ಲೈನ್ ಮೂಲಕವೇ ಸಣ್ಣ ಪುಟ್ಟ ವಸ್ತುಗಳಿಂದ ದುಬಾರಿ ವಸ್ತುಗಳ ತನಕ ಖರೀದಿ ಮಾಡುತ್ತಿದ್ದಾರೆ. ಈಗ ಬಹುತೇಕ ಎಲ್ಲ ಬ್ಯಾಂಕಿನ ವ್ಯವಹಾರವನ್ನು UPI ID ಅಡಿಯಲ್ಲಿ ಸೇವೆ ಪಡೆಯಬಹುದು. ಅಂದರೆ ವಸ್ತುಗಳ ಖರೀದಿ ಮಾಡಿದ ಬಳಿಕ ಹಣ ನೀಡುವ ಬದಲು ATM Card ನೀಡಿ ಸ್ವೈಪ್ ಮಾಡುವ ಬದಲು ಯುಪಿಐ ಪೇಮೆಂಟ್ ಆ್ಯಪ್ (UPI Payment App) ಮೂಲಕ ಹಣ ವರ್ಗಾವಣೆ ಮಾಡಬಹುದು.

ಡಿಜಿಟಲ್ ಇಂಡಿಯಾ ವಿಚಾರಕ್ಕೆ ಈ ಒಂದು ಅಭಿವೃದ್ಧಿ ಮಹತ್ವ ಪೂರ್ಣ ಸ್ಥಾನ ಪಡೆದಿದ್ದು ನಿಮ್ಮ ಬ್ಯಾಂಕಿನ ಖಾತೆ ಸಂಖ್ಯೆ , ಐಎಫ್ ಸಿ ಮಾಹಿತಿ ನೀಡದೆಯೂ ಸುಲಭಕ್ಕೆ ಹಣಕಾಸಿನ ವರ್ಗಾವಣೆ ಮತ್ತು ಸ್ವೀಕಾರ ಮಾಡಬಹುದು. UPI ಪೇಮೆಂಟ್ ನ ಅಡಿಯಲ್ಲಿ ಗೂಗಲ್ ಪೇ (Google Pay), ಪೇಟಿಎಂ (Paytm), ಫೋನ್ ಪೇ (Phone Pe), ಅಮೆಜಾನ್ ಪೇ (Amazon Pay), ಭೀಮ್ (BHIM), ವಾಟ್ಸ್ ಆ್ಯಪ್ ಪೇ (WhatsApp Pay) ಮಾತ್ರವಲ್ಲದೆ ಇತರ ಪೇಮೆಂಟ್ ಆ್ಯಪ್ ಕಾರ್ಯನಿರ್ವಹಣೆ ಕೂಡ ಆ್ಯಪ್ ಮೂಲಕವೇ ಆಗುವಂತದ್ದು.

ಸ್ಥಗಿತದ ನಿರ್ಧಾರ:

 

 

advertisement

ನ್ಯಾಶನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಯುಪಿಐ ಪೇಮೆಂಟ್ (UPI Payment) ಕುರಿತು ಒಂದು ಪ್ರಮುಖ ನಿರ್ಣಯಕ್ಕೆ ಬಂದಿದೆ. UPI ಪೇಮೆಂಟಿಂಗ್ ಆ್ಯಪ್ ಅನ್ನು ಒಂದು ವರ್ಷಕ್ಕೊಮ್ಮೆ ಬಳಸದೇ ಇದ್ದರೆ ನಿಮ್ಮ ಆ್ಯಪ್ ರದ್ದು ಮಾಡುವ ಬಗ್ಗೆ ಇತ್ತೀಚೆಗಷ್ಟೇ ಮಾಹಿತಿಯನ್ನು ನೀಡಲಾಗಿತ್ತು. ಹಾಗಾಗಿ ಈ ಬಗ್ಗೆ ಎಲ್ಲ ಬ್ಯಾಂಕುಗಳಿಗೆ ಮತ್ತು ಅಪ್ಲಿಕೇಶನ್ ಕಂಪೆನಿಗಳಿಗೆ ಈ ಬಗ್ಗೆ ಮಾರ್ಗಸೂಚಿಯನ್ನು ಕೂಡ ಹೊರಡಿಸಲಾಗಿದೆ. ನೀವು ಕೂಡ ಬಳಕೆ ಮಾಡದೇ ಇಟ್ಟ ಪೇಮೆಂಟಿಂಗ್ ಆ್ಯಪ್ ಬಗ್ಗೆ ಗಮನಿಸುವುದು ಅತ್ಯವಶ್ಯವಾಗಿದೆ. ಡಿಸೆಂಬರ್ 31ರ ಒಳಗೆ ನಿಮ್ಮ UPI ಐಡಿ ಯನ್ನು ಕಡ್ಡಾಯವಾಗಿ ಸಕ್ರಿಯಗೊಳಿಸಬೇಕು ಇಲ್ಲವಾದರೆ ನಿಷ್ಕ್ರಿಯ ವಾಗಲಿದೆ ಎಂದು ಕೂಡ NPCI ಮಾಹಿತಿ ನೀಡಿದೆ.

ಭದ್ರತೆಯ ಉದ್ದೇಶ:

UPI ಬಳಕೆ ಮಾಡುವ ಗ್ರಾಹಕರ ಹಿತದೃಷ್ಟಿಯಿಂದ ಈ ಒಂದು ನಿರ್ಧಾರ ಕೈಗೊಳ್ಳಲು ಮುಂದಾಗಲಾಗಿದೆ ಅಂದರೆ ಅನೇಕ ಬಾರಿ ಗ್ರಾಹಕರು ತಮ್ಮ ಮೊಬೈಲ್ ಫೋನ್ ಬದಲಾಯಿಸುತ್ತಾರೆ. ಆದರೆ ಹಳೆ ಫೋನಿನಲ್ಲಿ ಬಳಕೆ ಮಾಡುವ ಆ್ಯಪ್ ಅನ್ನು ಹಾಗೇ ಕೈಬಿಟ್ಟು ಪುನಃ ಇನ್ನೊಂದು ಆ್ಯಪ್ ಮೊರೆ ಹೋಗುತ್ತಾರೆ ಆಗ ಅವರ ಹಳೆ ಫೋನ್ ಐಡಿ ಮೂಲಕ ಫೊರ್ಜರಿ ಆಗುವ ಸಾಧ್ಯತೆ ಇದೆ. ಹಾಗಾಗಿ ಪೇಮೆಂಟ್ ಅಪ್ಲಿಕೇಶನ್ ಹಾಗೂ ಡಿಜಿಟಲ್ ಪೇಮೆಂಟ್ ದುರುಪಯೋಗ ಆಗದಂತೆ ತಡೆಯುವ ನೆಲೆಯಲ್ಲಿ ಈ ನಿರ್ಣಯಕ್ಕರ ಮುಂದಾಗಲಾಗಿದೆ.

ಒಟ್ಟಾರೆಯಾಗಿ ಒಂದು ವ್ಯವಸ್ಥೆ ಅತ್ಯಂತ ಬಲಿಷ್ಟ ವಾಗುತ್ತಿದ್ದಂತೆ ಅದನ್ನು ಹೇಗೆಲ್ಲ ದುರುಪಯೋಗ ಮಾಡಬಹುದು ಎಂದು ಕಾಯುವ ವರ್ಗ ಕೂಡ ಸೃಷ್ಟಿ ಆಗಿದ್ದು ಅಂತಹ ಪ್ರಾಬಲ್ಯ ತಡೆಯುವ ನೆಲೆಯಲ್ಲಿ ಬಳಸದೇ ಇರುವ ಯುಪಿಐ ಐಡಿಯನ್ನು ನಿಷ್ಕ್ರಿಯಗೊಳಿಸುವ ಕ್ರಮ ಅತ್ಯಂತ ಸಮಂಜಸವಾಗಿದೆ.

advertisement

Leave A Reply

Your email address will not be published.