Karnataka Times
Trending Stories, Viral News, Gossips & Everything in Kannada

Maruti Suzuki: ಬಡವರ BMW ಎಂದು ಕರೆಯುವ ಈ ಕಾರಿನ ಮೇಲೆ 1 ಲಕ್ಷ ರು ನೇರ ರಿಯಾಯಿತಿ!

advertisement

ಸ್ಟೈಲಿಶ್ ಲುಕ್, ಜೇಬಿಗು ಬೆಸ್ಟ್ ಎನಿಸಿಕೊಂಡಿರುವ ಮಾರುತಿ ಸುಜುಕಿ ಕಂಪನಿ ಗ್ರಾಹಕರ ಮೆಚ್ಚಿನ ಕಂಪನಿಗಳಲ್ಲಿ ಒಂದಾಗಿದೆ.ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿ ಮಾರುತಿ ಸುಜುಕಿ ಖ್ಯಾತಿ ಗಳಿಸಿದೆ. ದೇಶಾದ್ಯಂತವಿರುವ ಹಲವು ನೆಕ್ಸಾ ಡೀಲರ್‌ಶಿಪ್‌ಗಳು ಮಾರಾಟವಾಗದಿರುವ 2023ರ ಮಾದರಿಗಳ ಮೇಲೆ ಭರ್ಜರಿ ರಿಯಾಯಿತಿ ಪ್ರಯೋಜನವನ್ನು ಘೋಷಿಸಿದ್ದು, ಈಗಲೂ ಮುಂದುವರಿಸಿಕೊಂಡು ಬಂದಿವೆ ಎಂದು ಈಗಾಗಲೇ ಹಲವು ಮಾಧ್ಯಮಗಳು ವರದಿ ಮಾಡಿವೆ.

1 ಲಕ್ಷದವರೆಗೆ ಡಿಸ್ಕೌಂಟ್ ಆಫರ್:

ಇನ್ನು ಈಗಾಗಲೇ ಲಭ್ಯವಾಗಿರುವ ಮಾಹಿತಿ ಪ್ರಕಾರ, ವಿವಿಧ ಕಾರಣಗಳಿಗೆ ಕೆಲವೊಂದು ಡೀಲರ್‌ಶಿಪ್‌ಗಳಿಗೆ 2023ರ ವರ್ಷಾಂತ್ಯದವರೆಗೂ ಹೆಚ್ಚಿನ ಕಾರುಗಳನ್ನು ಮಾರಾಟಗೊಳಿಸಲು ಸಾಧ್ಯವಾಗಿಲ್ಲ. ಇದರಿಂದ ಹೆಚ್ಚಿನ ಸ್ಟಾಕ್ ಹಾಗೆಯೇ ಉಳಿದಿದೆ. ಅದನ್ನು ಬೇಗ ಖಾಲಿ ಮಾಡಬೇಕೆಂಬ ಧಾವಂತದಲ್ಲಿ ಡೀಲರ್‌ಶಿಪ್‌ಗಳಿದ್ದು, ದೊಡ್ಡ ಮಟ್ಟದ ರಿಯಾಯಿತಿಯನ್ನು ನೀಡುತ್ತಿವೆ. ಹಿಂದಿನ ವರ್ಷದ ಗ್ರ್ಯಾಂಡ್ ವಿಟಾರಾ (Maruti Suzuki Grand Vitara), ಫ್ರಾಂಕ್ಸ್ (Maruti Suzuki Fronx) ಕಾರುಗಳು ರೂ.1 ಲಕ್ಷವರೆಗೆ ಡಿಸ್ಕೌಂಟ್ ಆಫರ್ ಪಡೆದಿವೆ.

Maruti Suzuki Grand Vitara ಹಾಗೂ Fronx ಕಾರಿಗೆ ರಿಯಾಯತಿ ದರ:

ಈ ವರ್ಷಾರಂಭದ ಜನವರಿಯಲ್ಲಿ 2023ರ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ (Grand Vitara) ಹಾಗೂ ಫ್ರಾಂಕ್ಸ್ (Fronx) ಎಸ್‌ಯುವಿಗಳು ಕ್ರಮವಾಗಿ ರೂ.79,000 ಹಾಗೂ ರೂ.83,000 ರಿಯಾಯಿತಿ ಪ್ರಯೋಜನವನ್ನು ಪಡೆದಿದ್ದವು. ಹೆಚ್ಚುವರಿಯಾಗಿ ಮಾರಾಟ ಪ್ರಮಾಣವನ್ನು ಅಧಿಕಗೊಳಿಸಲು ವಿವಿಧ ಡೀಲರ್‌ಶಿಪ್‌ಗಳು ರೂ.50,000 ನಗದು ರಿಯಾಯಿತಿ ಯನ್ನು ಘೋಷಿಸಿವೆ. ಈ ಮೂಲಕ ಇವೆರೆಡು ಕಾರುಗಳು ರೂ.1.30 ಲಕ್ಷ ಡಿಸ್ಕೌಂಟ್ ಆಫರ್ ಹೊಂದಿವೆ.

ಜಿಮ್ನಿ ಎಸ್‌ಯುವಿಗಳ ಮಾರಾಟ ಅಧಿಕ:

 

 

advertisement

ಅದೇ ರೀತಿಯಲ್ಲಿ 2023ರಲ್ಲಿ ಉತ್ಪಾದನೆಗೊಂಡ ಮಾರುತಿ ಸುಜುಕಿ ಸಿಯಾಜ್ (Ciaz) ಮತ್ತು ಇಗ್ನಿಸ್ (Ignis) ಕಾರುಗಳು ಸಹ ಭರ್ಜರಿ ರಿಯಾಯಿತಿ ಸೌಲಭ್ಯವನ್ನು ಪಡೆದಿದ್ದು, ರೂ.61,000 ದಿಂದ ರೂ. 48,000 ಡಿಸ್ಕೌಂಟ್ ಲಭ್ಯವಿದೆ. ಆದರೆ, ಕೆಲವು ಡೀಲರ್‌ಶಿಪ್‌ಗಳು ರೂ.1 ಲಕ್ಷವರೆಗೆ ರಿಯಾಯಿತಿಯನ್ನು ನೀಡಿವೆ ಎಂಬ ವಿವರಗಳು ದೊರೆತಿವೆ. ಹೋದ ವರ್ಷವೇ ಉತ್ತಮ ರಿಯಾಯಿತಿ ಪಡೆದುಕೊಂಡ ಹಿನ್ನೆಲೆ, ಜಿಮ್ನಿ ಎಸ್‌ಯುವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡಿದ್ದು, ಸ್ಟಾಕ್ ವಿರಳವಾಗಿದೆ.

Maruti Suzuki Grand Vitara Features:

 

 

ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ (Maruti Suzuki Grand Vitara), ರೂ.10.80 ಲಕ್ಷದಿಂದ ರೂ.20.09 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಹೈಬ್ರಿಡ್ ಪೆಟ್ರೋಲ್ ಹಾಗೂ ಸಿಎನ್‌ಜಿ ಆಯ್ಕೆಯಲ್ಲಿ ಸಿಗಲಿದ್ದು, 19.38 ರಿಂದ 27.97 ಕೆಎಂಪಿಎಲ್ ಮೈಲೇಜ್ ನೀಡುತ್ತದೆ. ಈ ಕಾರಿನಲ್ಲಿ 5 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದಾಗಿದೆ.
ಗ್ರ್ಯಾಂಡ್ ವಿಟಾರಾ ಕಾರು 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಪನೋರಮಿಕ್ ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್, ವೈರ್‌ಲೆಸ್ ಫೋನ್ ಚಾರ್ಜರ್, ವೆಂಟಿಲೇಟೆಡ್ ಫ್ರಂಟ್ ಸೀಟ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌, ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), 360 ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ.

Maruti Suzuki Fronx ವಿಶೇಷತೆ ಹೀಗಿದೆ:

 

 

ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki Fronx) ಎಸ್‌ಯುವಿ, ರೂ.7.51 ಲಕ್ಷದಿಂದ ರೂ.13.04 ಲಕ್ಷ ದರವನ್ನು ಪಡೆದಿದೆ. 1-ಲೀಟರ್ ಟರ್ಬೊ ಪೆಟ್ರೋಲ್, 1.2-ಲೀಟರ್ ಡುಯಲ್ಜೆಟ್ ಪೆಟ್ರೋಲ್ ಮತ್ತು 1.2-ಲೀಟರ್ ಸಿಎನ್‌ಜಿ ಎಂಜಿನ್ ಹೊಂದಿದ್ದು, ರೂಪಾಂತರಗಳಿಗೆ ಅನುಗುಣವಾಗಿ 5-ಸ್ವೀಡ್ ಮ್ಯಾನುವಲ್, 5-ಸ್ವೀಡ್ ಆಟೋಮೆಟಿಕ್, 6-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಒಳಗೊಂಡಿದೆ.

advertisement

Leave A Reply

Your email address will not be published.