Karnataka Times
Trending Stories, Viral News, Gossips & Everything in Kannada

Loan: ಬಂಗಾರ ಇಟ್ಟು ಸಾಲ ಪಡೆದ ಎಲ್ಲರಿಗೂ ಹೊಸ ಸೂಚನೆ! ಹಣಕಾಸು ಸಚಿವಾಲಯದ ಆದೇಶ

advertisement

ಕಳೆದ ವರ್ಷಗಳಿಗೆ ಹೋಲಿಸಿದರೆ, ಚಿನ್ನದ ಮೇಲಿನ ಸಾಲ (Loan)ದ ಮೊತ್ತವು ಗಣನೀಯವಾಗಿ ಏರಿಕೆ ಕಂಡಿದ್ದು ಈ ಕುರಿತಾಗಿ ವರದಿಯನ್ನು ಒಪ್ಪಿಸುವಂತೆ ಮತ್ತು ಚಿನ್ನದ ಸಾಲದ ಮೇಲಿನ ಆಧಾರಗಳನ್ನು ಪರಿಶೀಲಿಸುವಂತೆ ಡಿಪಾರ್ಟ್ಮೆಂಟ್ ಆಫ್ ಫೈನಾನ್ಸಿಯಲ್ ಸರ್ವಿಸ್ (DFS) ನೋಟಿಸ್ ಜಾರಿಗೊಳಿಸಿದ್ದು, ಸಾರ್ವಜನಿಕ ವಲಯದ ಬ್ಯಾಂಕ್ ಗಳು ಈ ವಿಚಾರಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಬೇಕೆಂಬ ಆದೇಶ ಹೊರಡಿಸಲಾಗಿದೆ.

ಇನ್ನು ಈ ವಿಷಯವಾಗಿ ಹಣಕಾಸು ಸೇವೆಗಳ ಕಾರ್ಯದರ್ಶಿ ವಿವೇಕ್ ಜೋಶಿ (Vivek Joshi) ಅವರು ಮಾತನಾಡಿದ್ದು ಈ ಹಿಂದಿನ ವರ್ಷಗಳಿಂದ ಗಣನೀಯವಾಗಿ ಚಿನ್ನದ ಮೇಲಿನ ಸಾಲದ ಪ್ರಮಾಣ ಹೆಚ್ಚಾಗಿದ್ದು, ಸರಿಯಾದ ರೀತಿಯಲ್ಲಿ ಸರ್ಕಾರದ ನಿದರ್ಶನಗಳ ಅನುಸರಣೆ ಆಗದ ಕಾರಣ, ಡಿಪಾರ್ಟ್ಮೆಂಟ್ ಆಫ್ ಫೈನಾನ್ಸಿಯಲ್ ಸರ್ವಿಸ್ (DFS) ಸಾರ್ವಜನಿಕ ವಲಯದ ಬ್ಯಾಂಕ್ ಮುಖ್ಯಸ್ಥರಿಗೆ ಪತ್ರ ಬರೆದಿದೆ. ಮತ್ತು ಇದಕ್ಕೆ ಸಂಬಂಧಪಟ್ಟಂತ ಮಾಹಿತಿಯನ್ನು ಸಮಗ್ರವಾಗಿ ಪರಿಶೀಲಿಸುವಂತೆ ಆದೇಶ ನೀಡಲಾಗಿದೆ.

Image Source: Studycafe

advertisement

‌ಹಾಗಾದರೆ ಪತ್ರದಲ್ಲಿನ ಉದ್ದೇಶಗಳು ಯಾವುವು?

ಪ್ರಮುಖ ಬ್ಯಾಂಕ್ ಗಳಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB), ಬ್ಯಾಂಕ್ ಆಫ್ ಬರೋಡ (Bank Of Baroda)  ಈ ಮೂರು ಬ್ಯಾಂಕ್ 2022 ಮತ್ತು 2023 ಡಿಸೆಂಬರ್ ವರ್ಷಗಳಲ್ಲಿ ನೀಡಿರುವ ಚಿನ್ನದ ಮೇಲಿನ ಸಾಲದ ಪ್ರಮಾಣವು ಒಟ್ಟಾರೆಯಾಗಿ 39,878 ಕೋಟಿ ಅಷ್ಟಿದ್ದು, 2024 ಜನವರಿ ತಿಂಗಳಲ್ಲಿ ಗಣನೀಯವಾಗಿ 17% ನಷ್ಟು ಹೆಚ್ಚಾಗಿದ್ದು ಸರಾಸರಿ ಚಿನ್ನಾಭರಣಗಳ ಮೇಲಿನ ಸಾಲವು 1.01 ಕೋಟಿ ಆಗಿದೆ. ಈ ರೀತಿಯಾದ ಸಾಲದ ಮೊತ್ತದ ಹೆಚ್ಚಳದ ನಡುವೆಯೂ ಸಮಗ್ರ ಪರಿಶೀಲನೆ ಆಗಬೇಕೆಂಬ ಆದೇಶವನ್ನು ನೀಡಿರುವಂತಹ ಹಣಕಾಸು ಸಚಿವಾಲಯವು ಇದರ ಕುರಿತಾಗಿ ಮೇಲ್ವಿಚಾರಣೆ ನಡೆಸಲಿದೆ.

ಗೋಲ್ಡ್ ಲೋನ್ (Gold Loan):

ಇನ್ನು ಗೋಲ್ಡ್ ಲೋನ್ (Gold Loan) ಪಡೆದಿರುವಂತಹ ಪ್ರತಿಯೊಬ್ಬರ ಖಾತೆಯನ್ನು ಕೂಡ ಪರಿಶೀಲಿಸುವಂತೆ ತಿಳಿಸಲಾಗಿದ್ದು, ಅದರಲ್ಲೂ 2022ರ ನಂತರ ತೆಗೆದುಕೊಂಡಿರುವಂತಹ ಪ್ರತಿಯೊಂದು ಗೋಲ್ಡ್ ಲೋನ್ ಖಾತೆಯ ಸಂಗ್ರಹಣೆಯ ಶುಲ್ಕದ ವಿವರಣೆ ಮತ್ತು ಸಾಲದ ಮೇಲಾಧಾರದ ಮೌಲ್ಯದ ಕುರಿತು ಸಮಗ್ರವಾಗಿ ಪರಿಶೀಲಿಸಿ ಚಿನ್ನದ ಮೇಲಿನ ಸಾಲದ  ಪೋರ್ಟ್ ಫೋಲಿಯೋ ಮಾಹಿತಿ ಕಲೆ ಹಾಕಿ ಸಾಲದ ಮೊತ್ತ ಅನುಚಿತವಾಗಿ ವಿಸ್ತರಣೆ ಆಗಿಲ್ಲ ಎಂಬುದನ್ನು ಖಚಿತಪಡಿಸುವಂತೆ ಹಣಕಾಸು ಸಚಿವಾಲಯವು ಸರ್ಕಾರ ಸೌಮ್ಯ ಬ್ಯಾಂಕ್ ಗಳಿಗೆ ಆದೇಶ ಹೊರಡಿಸಿದೆ.

advertisement

Leave A Reply

Your email address will not be published.