Karnataka Times
Trending Stories, Viral News, Gossips & Everything in Kannada

Anna Bhagya-Gruha Lakshmi: ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಪಡೆಯುತ್ತಿದ್ದ ಎಲ್ಲರಿಗೂ ಹೊಸ ರೂಲ್ಸ್ ! ನಿಯಮ ಬದಲಿಸಿದ ಸರ್ಕಾರ

advertisement

ರಾಜ್ಯದಲ್ಲಿ ಮಧ್ಯಮ ವರ್ಗದ, ಬಡ ಜನರ ಅಭಿವೃದ್ಧಿ ಗಾಗಿ ರಾಜ್ಯ ಸರಕಾರವು ಈ ಬಾರಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಆರ್ಥಿಕ ಬೆಂಬಲವನ್ನು ಜನತೆಗೆ ನೀಡುತ್ತಿದೆ.‌ ಅದರಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲವನ್ನು ಮನೆಯ ಯಜಮಾನಿ ಮಹಿಳೆ ಪಡೆದರೆ ಅನ್ನ ಭಾಗ್ಯ (Anna Bhagya) ದ ಮೊತ್ತವನ್ನು ಮನೆಯ ಮುಖ್ಯ ಯಜಮಾನನ ಖಾತೆಗೆ ಜಮೆ ಮಾಡುತ್ತಿದೆ. ಈಗಾಗಲೇ ಗ್ಯಾರಂಟಿ ಯೋಜನೆಗಳ ಬಗ್ಗೆ ಎಲ್ಲ ವರ್ಗದ ಜನತೆಯು ಮೆಚ್ಚುಗೆಯನ್ನು ವ್ಯಕ್ತ ಪಡಿಸುತ್ತಿದೆ. ಆದ್ರೆ, ಅರ್ಜಿ ಸಲ್ಲಿಕೆ ಮಾಡಿದ ಹೆಚ್ಚಿನ‌ ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ (Anna BhagyaGruha Lakshmi) ದ ಹಣವೂ ಕೂಡ ಜಮೆಯಾಗುತ್ತಿಲ್ಲ. ಒಂದು ವೇಳೆ ನೀವು ಈ ಕೆಲಸ ಮಾಡದೇ ಇದ್ದಲ್ಲಿ ಹಣ ಬಿಡುಗಡೆಗೊಂಡರು ನಿಮ್ಮ ಖಾತೆಗೆ ಜಮೆಯಾಗಲ್ಲ. ಹಾಗಾಗಿ ಈ‌ ಕೆಲಸವನ್ನು ನೀವು ಮಾರ್ಚ್ 25 ರ ಒಳಗೆ ಮಾಡಿ ಮುಗಿಸಲೇಬೇಕು.

ಯಾವುದು ಈ ಕೆಲಸ:

 

Image Source: Prokerala

 

ಹೌದು ಅನ್ನಭಾಗ್ಯ ಯೋಜನೆ (Anna Bhagya Yojana) ಯ ಫಲಾನುಭವಿಗಳಿಗೆ ಪ್ರತಿ ಕೆಜಿಗೆ 34 ರೂಪಾಯಿಯಂತೆ 5 ಕೆಜಿಗೆ 170 ರೂಪಾಯಿ ಮೊತ್ತ ನೀಡುತ್ತಿದೆ. ಬಿಪಿಎಲ್ ಮತ್ತು ಅಂತ್ಯೋದಯ ಕುಟುಂಬದ ಪ್ರತಿಯೊಬ್ಬ ವ್ಯಕ್ತಿಯ ಹಣವನ್ನು ಮನೆಯ‌ ಯಜಮಾನಿಯ ಖಾತೆಗೆ ಜಮೆ ಮಾಡುತ್ತಿದೆ. ಆದರೆ ಇನ್ಮುಂದೆ ಹಣ ಜಮೆ ಯಾಗಬೇಕಿದ್ರೆ ಈ‌ ಕೆಲಸ ಮಾಡಬೇಕು. ಇನ್ಮುಂದೆ ನಿಮ್ಮ ದಾಖಲೆಗಳ ಮಾಹಿತಿಗಳು ಡಿಜಿಟಲೈಸ್ ಡ್ ಆಗಿರಬೇಕು. ಅಂದರೆ ನಿಮ್ಮ ಬ್ಯಾಂಕ್ ಖಾತೆಗೆ NPCI Mapping, Aadhaar Card Link, Mobile Number Link ಪ್ರತಿಯೊಂದು ಕಡ್ಡಾಯವಾಗಿರಬೇಕು.ಇನ್ನು ನಿಮ್ಮ ಹೆಸರು, ವಿಳಾಸ, ಆಧಾರ್ ಮಾಹಿತಿ, ಇತ್ಯಾದಿ ಒಂದಕ್ಕೊಂದು ಹೊಲುವಂತೆ ಇರಬೇಕು. ಹಾಗಾಗಿ ತಿದ್ದು ಪಡಿ ಮಾಡಲು ಇದ್ದರೆ ಸರಿಪಡಿಸಿ, ಈ ಕೆಲಸವನ್ನು ಮಾಡಿದ್ರೆ ಮಾತ್ರ ಹಣ ಜಮೆಯಾಗಲಿದೆ.

advertisement

ಗೃಹಲಕ್ಷ್ಮಿ ಹಣವೂ ಜಮೆಯಾಗಲ್ಲ:

 

Image Source: 123RF

 

ಅದೇ ರೀತಿ ಮಹಿಳೆಯರಿಗೆ ಜಮೆಯಾಗುವ ಎರಡು ಸಾವಿರ ಮೊತ್ತ ಕೂಡ ಖಾತೆಗೆ ಬರಲ್ಲ. ಹಾಗಾಗಿ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯ 7ನೇ ಕಂತಿನ ಹಣ ನಿಮ್ಮ ಖಾತೆಗೆ ಜಮೆಯಾಗಬೇಕಿದ್ರೆ ನಿಮ್ಮ ಆಧಾರ್ ಮಾಹಿತಿ ಸರಿ ಇಲ್ಲದೆ ಇದ್ದಲ್ಲಿ ಅಪ್ಡೇಟ್ ಮಾಡಿಕೊಳ್ಳಿ. ಹಾಗಾಗಿ ಮಾರ್ಚ್ 15ರಿಂದ 31ರವರೆಗೆ ಈ ಅವಧಿ ಇರಲಿದ್ದು ನಿಮ್ಮ ರೇಷನ್ ಕಾರ್ಡ್ (Ration Card), ಆಧಾರ್ ಇತ್ಯಾದಿ ಸರಿಪಡಿಸಿಕೊಂಡಲ್ಲಿ ಇದೇ ತಿಂಗಳು ಹಣ ಜಮೆಯಾಗಬಹುದು.

ಯಾವಾಗ ಹಣ ಜಮೆ?

ಈಗಾಗಲೇ ಏಳನೇ ಕಂತಿನ ಗೃಹಲಕ್ಷ್ಮಿ ಹಣ (Gruha Lakshmi Money) ಕೆಲವು ಮಹಿಳೆಯರ ಖಾತೆಗೆ ಜಮೆಯಾಗಿದ್ದು ಬಾಕಿ ಇದ್ದ ಮಹಿಳೆಯರಿಗೆ ಇದೇ ತಿಂಗಳ ಕೊನೆಯ ಒಳಗೆ ಜಮೆಯಾಗಲಿದೆ. ನಿಮ್ಮ ದಾಖಲೆಗಳು ಸರಿಪಡಿಸಿಕೊಂಡಲ್ಲಿ ಎಲ್ಲ‌ ಕಂತಿನ ಹಣ ಒಟ್ಟಿಗೆ ಜಮೆಯಾಗಲಿದೆ. ಅದೇ ರೀತಿ ಅನ್ನಭಾಗ್ಯ ಹಣವೂ ಇದೇ ತಿಂಗಳ ಒಳಗೆ‌ ಜಮೆಯಾಗಲಿದೆ ಎನ್ನುವ ಮಾಹಿತಿ ವಿವಿಧ ಮೂಲಗಳಿಂದ ಲಭ್ಯವಾಗಿದೆ.

advertisement

Leave A Reply

Your email address will not be published.