Karnataka Times
Trending Stories, Viral News, Gossips & Everything in Kannada

Land Mutation: ಜಮೀನಿನ ಮ್ಯೂಟೇಶನ್ ಪ್ರತಿಯನ್ನು ಮೊಬೈಲ್ ಮೂಲಕ ನೋಡುವ ಸುಲಭ ವಿಧಾನ!

advertisement

ಒಬ್ಬ ವ್ಯಕ್ತಿಯಿಂದ ಒಂದು ಆಸ್ತಿ ಅಥವಾ ಜಮೀನು ವರ್ಗಾವಣೆ ಆಗಬೇಕಾದರೆ ದಾನ, ಕ್ರಯ, ವಿಭಾಗ, ಪೌತಿ ರೂಪದಲ್ಲಿ ಹಕ್ಕು ವರ್ಗಾವಣೆ ಆಗುತ್ತದೆ. ಈ ರೀತಿಯಾಗಿ ವರ್ಗಾವಣೆ ಆಗುವ ಆಸ್ತಿಗೆ ಮ್ಯುಟೇಶನ್ ಪ್ರತಿಯನ್ನು ಮಾಡಿಸಿಕೊಳ್ಳುವುದು ಅಗತ್ಯ. ಹಾಗಾದರೆ ಮ್ಯುಟೇಶನ್ ಪ್ರತಿ ಎಂದರೆ ಏನು? ಎಂದು ನೋಡುವುದಾದರೆ ಆಸ್ತಿಗೆ (Property) ಸಂಬಂಧಿಸಿದ ನಿಯಮಗಳು ಹೇಳುವಂತೆ, ಭೂಮಿಯನ್ನು ಸ್ವಂತ ಹೆಸರಿಗೆ ನೋಂದಣಿ (Registration) ಮಾಡಿಕೊಂಡು ರೂಪಾಂತರವನ್ನು ಪಡೆಯುವುದು ಬಹಳ ಮುಖ್ಯ, ಇದನ್ನು ಮ್ಯುಟೇಶನ್ (Land Mutation) ಎಂದೂ ಕರೆಯುತ್ತಾರೆ.

ಮೊದಲಿಗೆ ಮ್ಯುಟೇಶನ್ ಪ್ರತಿಯ ಉಪಯೋಗವಾದರೂ ಏನು ಎಂದು ತಿಳಿದುಕೊಳ್ಳೋಣ:

 

Image Source: Kerala Kaumudi

 

advertisement

ವ್ಯಕ್ತಿಯು ಬೆಳೆಯ ಸಾಲ ಪಡೆಯಬೇಕಾದರೆ, ಬ್ಯಾಂಕಿನಿಂದ ಸಾಲ ತೆಗೆದುಕೊಳ್ಳಬೇಕಾದರೆ ಈ ಮ್ಯುಟೇಶನ್ (Land Mutation) ಪ್ರತಿಯ ಅಗತ್ಯವಿದೆ. ಈ ಮ್ಯುಟೇಶನ್ ನಿಂದ ಜಮೀನು ಮೊದಲಿಗೆ ಯಾರ ಹೆಸರಿನಲ್ಲಿತ್ತು ? ಪ್ರಸ್ತುತ ಯಾರ ಹೆಸರಿನಲ್ಲಿದೆ ?ಮತ್ತು ಯಾವ ರೂಪದಲ್ಲಿ ವರ್ಗಾವಣೆ ಆಗಿದೆ?ಎಂಬುದರ ಸಂಪೂರ್ಣ ಮಾಹಿತಿ ಸಿಗುತ್ತದೆ. ಇನ್ನು ಯಾವುದಾದರೂ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮವಾಗಿ ಯಾರಾದರೂ ಭೂಸ್ವಾಧೀನ ಮಾಡಿಕೊಂಡಲ್ಲಿ ಮತ್ತು ಜಮೀನಿಗೆ ಸಂಬಂಧಿಸಿದಂತೆ ಜಗಳಗಳು ವಿವಾದಗಳು ಉಂಟಾದಾಗ ಅದರ ಕುರಿತಾಗಿ ಪ್ರಕರಣ ದಾಖಲಿಸಬೇಕಾದರೆ ಮ್ಯುಟೇಶನ್ ಪ್ರತಿ (Mutation Copy) ಯನ್ನು ನ್ಯಾಯಾಲಯಕ್ಕೆ ನೀಡಬೇಕಾಗುತ್ತದೆ. ಜಿಲ್ಲಾಧಿಕಾರಿಗಳು ಭೂಪರಿವರ್ತನೆ ಮಾಡುವಾಗ ಮ್ಯುಟೇಶನ್ (Land Mutation) ಪ್ರತಿ, ಸದರಿ ಮ್ಯುಟೇಶನ್ ಪ್ರತಿಯನ್ನು ಪ್ರಾರ್ಥಮಿಕ ದಾಖಲೆಯಾಗಿ ಪಡೆಯುವುದು ಕಡ್ಡಾಯ ಕೂಡ ಆಗಿದೆ. ಕಾರಣ ಇದರಲ್ಲಿ ಜಮೀನಿಗೆ ಸಂಬಂಧಪಟ್ಟಂತಹ ಸಂಪೂರ್ಣ ಮಾಹಿತಿ ಸುಲಭವಾಗಿ ಲಭ್ಯವಾಗುತ್ತದೆ.

ಇನ್ನು ಮ್ಯುಟೇಶನ್ ಪ್ರತಿಯನ್ನು ಮೊಬೈಲ್ ನಲ್ಲಿ ಹೇಗೆ ನೋಡುವುದು ಎಂದು ತಿಳಿದುಕೊಳ್ಳೋಣ:

ಇನ್ನು ಸರ್ಕಾರ ಮ್ಯುಟೇಶನ್ ಪ್ರತಿಯನ್ನು ಸುಲಭವಾಗಿ ಪಡೆದುಕೊಳ್ಳಲು ಹೊಸ ಆನ್ ಲೈನ್ ವೆಬ್ ಸೈಟ್ ಅನ್ನು ಬಿಡುಗಡೆ ಮಾಡಿದೆ, ಸರ್ಕಾರ ಬಿಡುಗಡೆ ಮಾಡಿರುವ ವೆಬ್ ಸೈಟ್ ನ ಅಡ್ರೆಸ್ (landrecords.karnataka.gov.in) ಆಗಿದೆ. ಈ ವೆಬ್ ಸೈಟಿನ (View RTC) ವೀವ್ ಆರ್ ಟಿ ಸಿ ಎಂಬಲ್ಲಿ ಸರಿಯಾದ ಸರ್ವೇ ನಂಬರ್, ತಾಲ್ಲೂಕು, ಜಿಲ್ಲೆ, ಹಳ್ಳಿ, ಜಮೀನಿನ ಸರ್ವೆ ನಂಬರ್ ನೀಡುವ ಮೂಲಕ ಮ್ಯುಟೇಶನ್ ಪ್ರತಿಯನ್ನು ಪಡೆಯಬಹುದು.

ಇದರಲ್ಲಿ ಸರ್ವೇ ನಂಬರ್ ಕಾಲಂ, ವಹಿವಾಟಿನ ವರ್ಷ, ಮ್ಯುಟೇಶನ್ (Land Mutation) ಸ್ವಾಧೀನತೆಯ ರೀತಿ, ಜಮೀನಿನ ಮಾಲೀಕರ ಹೆಸರು ಇದರ ಕುರಿತಾದ ಸಂಪೂರ್ಣ ಮಾಹಿತಿ ದೊರೆಯುತ್ತದೆ. ಇದರಿಂದ ವ್ಯಕ್ತಿಯು ಯಾವ ವರ್ಷದಲ್ಲಿ ಮತ್ತು ಯಾವ ರೀತಿಯಲ್ಲಿ ಯಾರಿಗೆ ವಹಿವಾಟನ್ನು ನಡೆಸಿದ್ದಾನೆ ಎಂಬುದರ ಕುರಿತು ಸಂಪೂರ್ಣವಾಗಿ ತಿಳಿದುಕೊಳ್ಳಬಹುದಾಗಿದೆ.

advertisement

Leave A Reply

Your email address will not be published.