Karnataka Times
Trending Stories, Viral News, Gossips & Everything in Kannada

Financial Plans: ಸುರಕ್ಷಿತ ನಿವೃತ್ತಿ ಬದುಕಿಗೆ ಬೆಸ್ಟ್ ಫೈನಾನ್ಶಿಯಲ್ ಪ್ಲಾನ್ ಗಳಿವು.

advertisement

ವೃದ್ದಾಪ್ಯದಲ್ಲಿ ಆರ್ಥಿಕ ಸ್ವಾವಲಂಬನೆ ಪ್ರತಿಯೊಬ್ಬರಿಗೂ ಅತಿ ಅವಶ್ಯ. ನಿಮ್ಮ ಅಗತ್ಯ ವೆಚ್ಚಗಳಾದ ವೈದ್ಯಕೀಯ, ಜೀವನ ನಿರ್ವಹಣೆ ವೆಚ್ಚ ಮುಂತಾದ ಹಣಕಾಸಿನ ಅಗತ್ಯತೆಗಳನ್ನು ಪೂರೈಸಲು ನಿವೃತ್ತಿ ಯೋಜನೆಗಳು ನಿಮಗೆ ನೆರವಾಗುತ್ತವೆ. ನಿವೃತ್ತ ಜೀವನಕ್ಕಾಗಿ ನೀವು ಕೈಗೊಳ್ಳುವ ಹೂಡಿಕೆ ಯೋಜನೆಗಳು ನಿಮ್ಮ ವೃದ್ಧಾಪ್ಯವನ್ನು ಸುಖಮಯವಾಗಿ ಕಳೆಯುವಂತೆ ಮಾಡುತ್ತದೆ. ಅದಕ್ಕಾಗಿ ಉದ್ಯೋಗ ಮಾಡುತ್ತಿರುವಾಗಲೇ ಯೋಚಿಸುವುದು ಬಹಳ ಮುಖ್ಯವಾಗಿದೆ.

ಪಿಂಚಣಿ ಯೋಜನೆಗಳು (Pension Schemes) ಮತ್ತು ಹೂಡಿಕೆಗಳು, ನೀವು ಕಷ್ಟದಿಂದ ದುಡಿದ ಹಣವನ್ನು ಉಳಿತಾಯ ಮಾಡಲು ಇರುವ ಮಾರ್ಗವಾಗಿದೆ. ಇಂದು ಮಾರುಕಟ್ಟೆಯಲ್ಲಿ ಹಲವಾರು ವಿಧದ ಉಳಿತಾಯ ಯೋಜನೆಗಳನ್ನು ನೀವು ಕಾಣಬಹುದಾಗಿದೆ. ಪ್ರತಿಯೊಂದು ಆಯ್ಕೆಯು ಹೂಡಿಕೆದಾರರ ಅವಶ್ಯಕತೆಗಳನ್ನು ಅವಲಂಬಿಸಿಯೇ ಇದೆ. ಅವು ನಿಮಗೆ ಆದಾಯ, ಬಡ್ಡಿದರ ಮತ್ತು ಅನೇಕ ಪ್ರಯೋಜನಗಳನ್ನು ನೀಡುತ್ತವೆ.

ನಿವೃತ್ತಿ ಯೋಜನೆಗಳಲ್ಲಿ ತೊಡಗಿಸುವುದರಿಂದ ನಿಮಗೆ ಸಿಗುವ ಲಾಭವೇನು?

ಉಳಿತಾಯ ಅಥವಾ ಹೂಡಿಕೆ ಯೋಜನೆಗಳಿಂದ ಸಂಗ್ರಹವಾದ ಹಣವು ನಿವೃತ್ತಿಯ ನಂತರ ನಿಮಗೆ ಬದುಕಲು ಸಹಾಯ ಮಾಡುತ್ತದೆ. ಈ ರೀತಿಯ ಯಾವುದೇ ಯೋಜನೆಗಳಲ್ಲಿ ತೊಡಗಿಸಿಕೊಳ್ಳದಿದ್ದರೆ ಆಗ ಜೀವನ ನಿರ್ವಹಣೆ ಕಷ್ಟರಕವಾಗಬಹುದು. ನಿಮ್ಮ ಖರ್ಚು, ವೆಚ್ಚಗಳಿಗೆ ಇತರರನ್ನು ಅವಲಂಬಿಸಬೇಕಾಗುತ್ತದೆ. ಆದ್ದರಿಂದ ಸರಿಯಾದ ನಿವೃತ್ತಿ ಯೋಜನೆಗಳನ್ನು ಗುರುತಿಸಿ ಮತ್ತು ಸರಿಯಾದ ಹೂಡಿಕೆ ಮಾಡುವುದು ಅತಿಮುಖ್ಯವಾಗಿದೆ.

ನಿವೃತ್ತಿ ಯೋಜನೆಗಾಗಿ ಉತ್ತಮ ಆಯ್ಕೆಗಳಿವು:

National Pension System (ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ):

 

 

ಇದು ಸರ್ಕಾರಿ ಯೋಜನೆಯಾಗಿದೆ. ಇದು ಸರ್ಕಾರಿ ಮತ್ತು ಖಾಸಗಿ ವಲಯದ ನೌಕರರು ಸೇರಿದಂತೆ ಕಾರ್ಮಿಕ ವರ್ಗಕ್ಕೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. ಇದರಲ್ಲಿ ನಿಯಮಿತವಾಗಿ ಪ್ರೀಮಿಯಂಗಳನ್ನು ಪಾವತಿಸಬೇಕಾಗುತ್ತದೆ. ಹೂಡಿಕೆದಾರರು ನಿವೃತ್ತಿಗಾಗಿ ಕಾರ್ಪಸ್ ಫಂಡ್ ಅನ್ನು ನಿರ್ಮಿಸಬಹುದು. 60 ವರ್ಷಗಳ ನಂತರ, ಹೂಡಿಕೆದಾರರು ಕಾರ್ಪಸ್ ಫಂಡ್‌ನ 60 ಪ್ರತಿಶತವನ್ನು ಹಿಂಪಡೆಯಬಹುದು. ಉಳಿದ 40 ಪ್ರತಿಶತ ಬ್ಯಾಲೆನ್ಸ್‌ನೊಂದಿಗೆ ವಾರ್ಷಿಕ ಯೋಜನೆಗಳನ್ನು ಆಯ್ಕೆಮಾಡಿಕೊಳ್ಳಬಹುದು.

Public Provident Fund (ಸಾರ್ವಜನಿಕ ಭವಿಷ್ಯ ನಿಧಿ):

 

advertisement

 

ಇದೂ ಸಹ ಸರ್ಕಾರದ ಇನ್ನೊಂದು ಉಳಿತಾಯ ಯೋಜನೆಯಾಗಿದೆ. ಇದೊಂದು ಭರವಸೆಯ ಹೂಡಿಕೆಯಾಗಿದ್ದು, PPF ಎಂದು ಇದನ್ನು ಕರೆಯಲಾಗುತ್ತದೆ. ಇದು 15 ವರ್ಷದ ಅವಧಿಯಲ್ಲಿ ಮಾಡಬಹುದಾದ ಹೂಡಿಕೆಯಾಗಿದೆ. 500 ರೂ. ಗಳಿಂದ ಇದನ್ನು ಪ್ರಾರಂಭಿಸಬಹುದಾಗಿದೆ. ಇದರಲ್ಲಿ ಒಂದು ವರ್ಷದಲ್ಲಿ ಗರಿಷ್ಠ 1.5 ಲಕ್ಷ ರೂ. ಹೂಡಿಕೆ ಮಾಡಬಹುದಾಗಿದೆ. ಇದಕ್ಕೆ ಪ್ರಸ್ತುತ ವಾರ್ಷಿಕ 7.1 ಶೇಕಡಾ ಬಡ್ಡಿಯನ್ನು ನೀಡಲಾಗುತ್ತಿದೆ.

Mutual Funds:

 

 

ಖಾಸಗಿ ಹೂಡಿಕೆ ಯೋಜನೆಗಳಲ್ಲಿ ಮ್ಯೂಚುವಲ್‌ ಫಂಡ್‌ಗಳು ಜನಪ್ರಿಯ ಯೋಜನೆಗಳಾಗಿವೆ. ದೀರ್ಘಾವಧಿಯ ಆಧಾರದ ಮೇಲೆ ಮಾಡುವ Mutual Funds ನಿವೃತ್ತ ಜೀವನಕ್ಕೆ ಉತ್ತಮ ಆಯ್ಕೆಯಾಗಿದೆ. 3 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ನೀವು ಮಾಡಿದ ಹೂಡಿಕೆಯ ಆದಾಯಕ್ಕೆ ವರ್ಷಕ್ಕೆ 12 ಪ್ರತಿಶತದಿಂದ 15 ಪ್ರತಿಶತದಷ್ಟು ಲಾಭವನ್ನು ಪಡೆಯಬಹುದಾಗಿದೆ. ಮ್ಯೂಚುವಲ್ ಫಂಡ್‌ಗಳು ನಿವೃತ್ತಿಯ ನಂತರ ಹೆಚ್ಚಿನ ಹಣವನ್ನು ಒದಗಿಸಬಹುದಾದರೂ, ಅದಕ್ಕೆ ಸಂಬಂಧಿಸಿದ ಮಾರುಕಟ್ಟೆ ಅಪಾಯಗಳನ್ನು ನೀವು ಪರಿಗಣಿಸುವದು ಅಗತ್ಯವಾಗಿದೆ.

Bank Deposits:

ಹಣ ಉಳಿಸುವ ಸಾಂಪ್ರದಾಯಿಕ ಉಳಿತಾಯ ಯೋಜನೆಯೆಂದರೆ ಅದು ಬ್ಯಾಂಕ್‌ ಖಾತೆಗಳಲ್ಲಿ ನಿಯಮಿತ ಠೇವಣಿಗಳನ್ನು ಇಡುವುದು. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ತೆಗೆದುಕೊಳ್ಳುವ ಠೇವಣಿ ಯೋಜನೆಗಳು ಸುರಕ್ಷಿತವಾಗಿದ್ದು, ಬಡ್ಡಿಯನ್ನು ಸೇರಿಸಿ ಹಣವನ್ನು ಹಿಂಪಡೆಯಬಹುದಾಗಿದೆ. ಬ್ಯಾಂಕ್‌ಗಳಲ್ಲಿರುವ ಸ್ಥಿರ ಠೇವಣಿ (FD) ಗಳು ಹೆಚ್ಚಿನ ಲಾಭದಾಯಕವಾಗಿದೆ.

Insurance Plans:

ಜೀವ ವಿಮಾ ಯೋಜನೆಗಳು ಉಳಿತಾಯ ಮತ್ತು ಭದ್ರತೆಯ ಎರಡು ಆಯ್ಕೆಗಳೊಂದಿಗೆ ಬರುತ್ತವೆ. ಅನೇಕ ಪಿಂಚಣಿ ಯೋಜನೆಗಳು ಸಹ ಜೀವ ವಿಮಾ ರಕ್ಷಣೆ ಮತ್ತು ವರ್ಷಾಶನ ಆಯ್ಕೆಗಳನ್ನು ಒದಗಿಸುತ್ತವೆ. ಇವುಗಳಲ್ಲಿ ಕೆಲವು ಎಸ್‌ಬಿಐ ಲೈಫ್ ಸರಳ್ ಪೆನ್ಷನ್‌ ಸೇವರ್, ಮ್ಯಾಕ್ಸ್ ಲೈಫ್ ಗ್ಯಾರಂಟಿಡ್ ಲೈಫ್‌ಟೈಮ್‌ ಇನ್‌ಕಮ್‌ ಪ್ಲಾನ್‌, ಎಲ್‌ಐಸಿ ನ್ಯೂ ಜೀವನ್ ಶಾಂತಿ ಯೋಜನೆ ಮತ್ತು ಕೋಟಕ್ ಪ್ರೀಮಿಯರ್ ಪೆನ್ಷನ್‌ ಪ್ಲಾನ್‌ ಮುಂತಾದವುಗಳು. ನಿಮ್ಮ ಆರ್ಥಿಕ ಅಗತ್ಯಗಳಿಗೆ ಅನುಗುಣವಾಗಿ ಈ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಜಾಣತನವಾಗಿದೆ.

advertisement

Leave A Reply

Your email address will not be published.