Karnataka Times
Trending Stories, Viral News, Gossips & Everything in Kannada

Credit Card: ನಿಮಗೂ ಕ್ರೆಡಿಟ್ ಕಾರ್ಡ್ ಬೇಕಾ? ಆನ್ಲೈನ್ ನಲ್ಲಿಯೇ ಬುಕಿಂಗ್ ಮಾಡೋದು ಹೇಗೆ ತಿಳಿಯಿರಿ!

advertisement

ನೀವು ಬ್ಯಾಂಕ್ ನ ವ್ಯವಹಾರಗಳಲ್ಲಿ ತೊಡಗಿಕೊಂಡಿದ್ರೆ, ಬ್ಯಾಂಕ್ ನಿಮಗೆ ಬೇರೆ ಬೇರೆ ರೀತಿಯ ಆಫರ್ ಗಳು ಇರುವ ಕ್ರೆಡಿಟ್ ಕಾರ್ಡ್ ಅನ್ನು ನೀಡುತ್ತದೆ. ಇತ್ತೀಚಿಗಂತೂ Credit Card ಬೇಕಾ ಅಂತ ಫೋನು ಕರೆ ಮೂಲಕ ವಿಚಾರಿಸುವ ಏಜೆಂಟ್ ಗಳು ಕೂಡ ಜಾಸ್ತಿ ಆಗಿದ್ದಾರೆ. ಈ ಕ್ರೆಡಿಟ್ ಕಾರ್ಡನ್ನು ಬಹಳ ಮುತುವರ್ಜಿಯಿಂದ ಬಳಕೆ ಮಾಡಬೇಕು. ಹಾಗೇನಾದ್ರೂ ನೀವು ಸರಿಯಾದ ರೀತಿಯಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿದರೆ ಅದರಿಂದ ಸಿಗುವ ಪ್ರಯೋಜನಗಳು ಕೂಡ ಜಾಸ್ತಿ.

ಹೌದು, ಇತ್ತೀಚೆಗೆ ಸಾಕಷ್ಟು ಜನ ತಮ್ಮ ದೈನಂದಿನ ವ್ಯವಹಾರಗಳಿಗೆ ಕ್ರೆಡಿಟ್ ಕಾರ್ಡ್ (Credit Card) ಬಳಸಿಕೊಳ್ಳುತ್ತಾರೆ. ಬಿಲ್ ಪಾವತಿ ಮಾಡುವುದ್ರಿಂದ ಹಿಡಿದು, ಪ್ರತಿಯೊಂದು ಸಣ್ಣ ಪುಟ್ಟ ಕ್ರೆಡಿಟ್ ವ್ಯವಹಾರಗಳಿಗೆ ಕ್ರೆಡಿಟ್ ಕಾರ್ಡ್ ನ್ನೇ ಬಳಸಿಕೊಳ್ಳಲಾಗುತ್ತದೆ.

Credit Card ಮೂಲಕ ಸಾಲ ಸೌಲಭ್ಯವನ್ನು ಕೂಡ ಪಡೆದುಕೊಳ್ಳಬಹುದು. ಸಾಲ ಪಡೆದುಕೊಂಡರೆ ಪ್ರತಿ ತಿಂಗಳು EMI ರೂಪದಲ್ಲಿ ಹಣವನ್ನು ಮರುಪಾವತಿ ಮಾಡಬಹುದು. ಆನ್ಲೈನ್ ಮೂಲಕವೇ ನೀವು ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಲು ಸಾಧ್ಯವಿದೆ. ಬೇರೆ ಬೇರೆ ಬ್ಯಾಂಕುಗಳು ಬೇರೆ ಬೇರೆ ರೀತಿಯ ಆಫರ್ ಗಳನ್ನು ಕ್ರೆಡಿಟ್ ಕಾರ್ಡ್ ಮೂಲಕ ನೀಡುತ್ತಾರೆ. ಹಾಗಾಗಿ ನಿಮಗೆ ಯಾವುದು ಸೂಕ್ತವೋ ಅಂತಹ ಕ್ರೆಡಿಟ್ ಕಾರ್ಡ್ ಅನ್ನು ಆಯ್ಕೆ ಮಾಡಿಕೊಂಡು ಅಪ್ಲೈ ಮಾಡಿ. ಅದರಲ್ಲೂ ನೀವು ತಿಂಗಳ ವೇತನ ಪಡೆದುಕೊಳ್ಳುವವರಾಗಿದ್ದರೆ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳುವುದು ಸುಲಭ.

ಕ್ರೆಡಿಟ್ ಕಾರ್ಡ್ ಗೆ ಅಪ್ಲೈ ಮಾಡುವಾಗ ಈ ವಿಷಯಗಳು ನೆನಪಿನಲ್ಲಿ ಇರಲಿ:

 

advertisement

 

  • ಯಾವ ಯಾವ ರೀತಿಯ ಕ್ರೆಡಿಟ್ ಕಾರ್ಡ್ ಲಭ್ಯ ಇದೆ. ಹಾಗೂ ಅದರ ಪ್ರಯೋಜನಗಳು ಏನು ಎಂಬುದನ್ನು ಮೊದಲು ರಿಸರ್ಚ್ ಮಾಡಿ ತಿಳಿದುಕೊಳ್ಳಿ.
  • ಕ್ರೆಡಿಟ್ ಕಾರ್ಡ್ ಗೆ ನಿಮ್ಮ ವಯಸ್ಸು ನಿಮ್ಮ ಆದಾಯ ಮಾಡುತ್ತಿರುವ ಕೆಲಸ ಕ್ರೆಡಿಟ್ ಸ್ಕೋರ್ ಇವೆಲ್ಲವೂ ಮುಖ್ಯವಾಗಿರುತ್ತದೆ. ಇವುಗಳನ್ನು ಹೊರತುಪಡಿಸಿ ಇನ್ನಷ್ಟು ಮಾನದಂಡಗಳು ಕೂಡ ಇರುತ್ತವೆ. ಅವುಗಳನ್ನು ಮೊದಲು ತಿಳಿದುಕೊಳ್ಳಿ.
  • ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಲು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಯುಟಿಲಿಟಿ ಬಿಲ್, ವಿಳಾಸ ಪುರಾವೆ ಹೀಗೆ ಮತ್ತಿತರ ದಾಖಲೆಗಳು ಬೇಕು. ಈ ದಾಖಲೆಗಳನ್ನು ಸಿದ್ಧಪಡಿಸಿ ಇಟ್ಟುಕೊಂಡು ನಂತರ ಅರ್ಜಿ ಹಾಕಿದರೆ ಬೇಗ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಬಹುದು.

ಕ್ರೆಡಿಟ್ ಕಾರ್ಡ್ ಗಾಗಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

  • ಮೊದಲಿಗೆ ನೀವು ಯಾವ ಬ್ಯಾಂಕ್ ನ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಲು ಬಯಸುತ್ತೀರೋ ಆ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ಗೆ ಹೋಗಿ.
  • ವೆಬ್ ಸೈಟ್ ತೆರೆದ ನಂತರ ಅಲ್ಲಿ ಸೇವೆಗಳು ವಿಭಾಗದಲ್ಲಿ ಸಾಕಷ್ಟು ಆಯ್ಕೆಗಳು ಇರುತ್ತವೆ ಕ್ರೆಡಿಟ್ ಕಾರ್ಡ್ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ.
  • ನಿಮಗೆ ಕ್ರೆಡಿಟ್ ಕಾರ್ಡ್ ಕೊಡಲು ಬೇಕಾಗಿರುವ ಅರ್ಹತೆಗಳನ್ನು ಕೇಳುತ್ತದೆ. ಉದಾಹರಣೆಗೆ ನಿಮ್ಮ ಆದಾಯ ಎಷ್ಟು? ನಿಮ್ಮ ಕ್ರೆಡಿಟ್ ಸ್ಕೋರ್ ಎಷ್ಟಿದೆ ಈ ಎಲ್ಲಾ ಮಾಹಿತಿಗಳನ್ನು ನೀವು ಸರಿಯಾಗಿ ನೀಡಬೇಕು.
  • ನಂತರ ನೀವು ಅರ್ಹರಾಗಿದ್ದರೆ ಕ್ರೆಡಿಟ್ ಕಾರ್ಡ್ ಅರ್ಜಿ ಫಾರ್ಮ್ ಫಿಲ್ ಮಾಡಬೇಕು.
  • ನಂತರ ದಾಖಲೆಗಳನ್ನು ಸಬ್ಮಿಟ್ ಮಾಡಿ ಕ್ರೆಡಿಟ್ ಕಾರ್ಡ್ ಅರ್ಜಿ ಸಲ್ಲಿಸಬಹುದು. ಇಷ್ಟು ಮಾಡಿದ್ರೆ ಕ್ರೆಡಿಟ್ ಕಾರ್ಡ್ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ. ಇನ್ನು ನೀವು ಬ್ಯಾಂಕಿಗೆ ನೇರವಾಗಿ ಹೋಗಿ ಕ್ರೆಡಿಟ್ ಕಾರ್ಡ್ ಗೆ ಅಪ್ಲೈ ಮಾಡಬಹುದು.

advertisement

Leave A Reply

Your email address will not be published.