Karnataka Times
Trending Stories, Viral News, Gossips & Everything in Kannada

IND vs ENG 4th Test: 4 ನೇ ಟೆಸ್ಟ್ ನಿಂದ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಹೊರಕ್ಕೆ!

advertisement

ಕ್ರಿಕೆಟ್ ಆಟ ಎಂದರೆ ಭಾರತದಲ್ಲಿ ಕೋಟ್ಯಾಂತರ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ಭಾರತದಲ್ಲಿ ಅನೇಕಾನೇಕ ಆಟ ಇದ್ದರೂ ಅಬಾಲ ವೃದ್ಧರವರೆಗೂ ಅಭಿಮಾನಿಗಳು ಇರುವುದು ಕ್ರಿಕೆಟ್ ಗೆ ಹಾಗಾಗಿ ಈಗಾಗಲೇ ಅನೇಕ ಕ್ರಿಕೆಟ್ ಟೂರ್ನಮೆಂಟ್ ನಡೆಯುತ್ತಲಿದ್ದು ಸದ್ಯಕ್ಕಂತೂ ಎಲ್ಲಿ ಕೇಳಿದರು ಟೀಂ ಇಂಡಿಯಾದ ಟೆಸ್ಟ್ ಮ್ಯಾಚ್ ನದ್ದೇ ಸುದ್ದಿ. ಆದರೆ ಈಗ ಈ ಟೆಸ್ಟ್ ನಲ್ಲಿ ಭಾರತದ ಶ್ರೇಷ್ಠ ಆಟಗಾರ ಆಡುತ್ತಿಲ್ಲ ಎಂಬ ಆತಂಕಕಾರಿ ಸುದ್ದಿಯೊಂದು ಹರಿದಾಡುತ್ತಿದೆ.

ಈ ಆಟಗಾರ ಇರೊದು ಡೌಟ್

ಫೆಬ್ರವರಿ 23 ರಂದು ರಾಂಚಿಯಲ್ಲಿ ಆರಂಭ ಆಗಲಿರುವ ಈ ಆಟದಲ್ಲಿ ಯಾರೆಲ್ಲ ಆಡ್ತಾರೆ ಎಂಬ ಕುತೂಹಲ ಇದ್ದೆ ಇರುತ್ತದೆ. ಮಂಗಳವಾರ ಮಧ್ಯಹ್ನ ಟೀಂ ಇಂಡಿಯಾದಿಂದ ಮೊಹಮ್ಮದ್ ಸಿರಾಜ್ (Mohammed Siraj) ಮತ್ತು ಆಕಾಶ್ ದೀಪ್ (Akash Deep) ಇಬ್ಬರು ಭಾರತೀಯ ವೇಗಿ ಆಟಗಾರರು ಪತ್ತೆಯಾಗಿದ್ದು ಟೀಂ ಇಂಡಿಯಾದ ನಾಲ್ಕನೇ ಟೆಸ್ಟ್ ನಿಂದ ಜೆಸ್ರ್ಪೀತ್ ಬೂಮ್ರಾ (Jasprit Bumrah) ಅವರು ಹೊರಗುಳಿಯಲಿದ್ದಾರೆ ಎಂಬ ಅನುಮಾನ ಬಲವಾಗಿದ್ದು ಬೂಮ್ರಾ ಅಭಿಮಾನಿಗಳಿಗೆ ಬೇಸರ ತರಿಸಿದೆ.

 

 

ಖಾಸಗಿ ವಿಮಾನದಲ್ಲಿ ಪಯಣ

advertisement

ಖಾಸಗಿ ವಿಮಾನದ ಮೂಲಕ ಅಂದರೆ ಪ್ರೈವೇಟ್ ಚಾರ್ಟರ್ ಮೂಲಕ ಭಾರತ ಮತ್ತು ಇಂಗ್ಲೆಂಡ್ ನ ಕ್ರಿಕೆಟಿಗರನ್ನು ರಾಂಚಿಗೆ ಕರೆತರಲಾಗಿದೆ. ಅದರಲ್ಲಿ ಕೆ. ಎಲ್. ರಾಹುಲ್ (KL Rahul) ಅವರು ಕಾಣಿಸಿ ಬರದ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ತಂಡ ಸೇರುವ ನಿರೀಕ್ಷೆ ಇದೆ. ಆದರೆ ಇನ್ನೊಂದೆಡೆ ಕೆ. ಎಲ್ . ರಾಹುಲ್ ಅವರು ಮೂರನೇ ಟೆಸ್ಟ್ ಪಂದ್ಯದಲ್ಲಿ ಆಡಲು ಸಾಧ್ಯವಾಗಿರಲಿಲ್ಲ ಅದಕ್ಕೆ ಮುಖ್ಯ ಕಾರಣ ರಾಹುಲ್ ಅವರಿಗೆ ಕ್ಚಾಡ್ರಿ ಸೆಪ್ಸ್ ನಿಂದ ಬಳಲುತ್ತಿದ್ದು ಈ ಬಾರಿ ಆಡ್ತಾರಾ ಎಂಬ ಅನುಮಾನ ಸಹ ಮೂಡಿದೆ.

ಕಾರಣ ಏನು?

ಮೊದಲ ಮೂರು ಆಟದಲ್ಲಿ ಬುಮ್ರಾ (Jasprit Bumrah) ಅತ್ಯುತ್ತಮ ಆಟ ಪ್ರದರ್ಶನ ನೀಡಿದ್ದಾರೆ ಹಾಗಾಗಿ ನಾಲ್ಕನೇ ಸರಣಿ ಆಟದಲ್ಲಿ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲು ಸೆಲೆಕ್ಶನ್ ಕಮಿಟಿ ನಿರ್ಧಾರ ಮಾಡಿದೆ. ಬಿಸಿಸಿಐ ಸಲೆಕ್ಟರ್ಸ್ ಕಮಿಟಿಯ ಈ ನಿರ್ಧಾರದಿಂದಾಗಿ ಬೂಮ್ರಾ ನಾಲ್ಕನೇ ಸರಣಿ ಆಡಲಾರರು. ಇದಾದ ಬಳಿಕ ಐದನೇ ಸರಣಿ ಧರ್ಮಶಾಲಾದಲ್ಲಿ ನಡೆಯಲಿದ್ದು ಅಲ್ಲಿ ಬೂಮ್ರಾ ರಿ ಎಂಟ್ರಿ ಪಡಿತಾರಾ ಕಾದು ನೋಡಬೇಕು.

ಇಷ್ಟರೊಳಗಿನ ಆಟ ಹೀಗಿತ್ತು

ಭಾರತ ತಂಡವು ಸರಣಿ ಆಟದಲ್ಲಿ ಮೊದಲ ಮೂರು ಸರಣಿಯಲ್ಲಿ 2-1 ಅಂತರದಲ್ಲಿ ಮೇಲುಗೈ ಸಾಧಿಸಿದ್ದು, ಮೊದಲ ಟೆಸ್ಟ್ ಪಂದ್ಯ ಹೈದ್ರಬಾದ್ ನಲ್ಲಿ ನಡೆದಿದ್ದು ಅಲ್ಲಿ ಭಾರತದ ತಂಡ 28ರನ್ನುಗಳ ಸೋಲನ್ನು ಅನುಭವಿಸಿದೆ. ಬಳಿಕ ವೈಝಾಗ್ ಹಾಗೂ ರಾಜ್ ಕೋಟ್ ನಲ್ಲಿ ಭರ್ಜರಿ ಗೆಲುವು ಪಡೆದು ಮುನ್ನುಗ್ಗುತ್ತಲಿದೆ. ಇಷ್ಟೆಲ್ಲ ಸರಣಿ ವಿಜಯದ ಬಳಿಕ ಈಗ ಬೂಮ್ರಾ ಇಲ್ಲದ ನಾಲ್ಕನೆ ಟೆಸ್ಟ್ ಏನಾಗುತ್ತೆ ಎಂಬ ಕುತೂಹಲ ಕೂಡ ಉಂಟಾಗಿದೆ.

advertisement

Leave A Reply

Your email address will not be published.