Karnataka Times
Trending Stories, Viral News, Gossips & Everything in Kannada

Gruha Lakshmi: ಗೃಹಲಕ್ಷ್ಮಿ ಯೋಜನೆ ಹಣ ಬಾರದೇ ಇರೊ ಮಹಿಳೆಯರಿಗೆ ಗುಡ್ ನ್ಯೂಸ್!

advertisement

ರಾಜ್ಯ ಸರಕಾರದ ‌ಪಂಚ ಗ್ಯಾರಂಟಿ ಯೋಜನೆಗಳು ಇಂದು ಕೂಡ ಬಹಳ ಸುದ್ದಿಯಲ್ಲಿದ್ದು ಐದು ಯೋಜನೆಗಳ ಪ್ರಯೋಜನ ವನ್ನು ಜನತೆ ಪಡೆಯುತ್ತಿದೆ.‌ಐದು ಗ್ಯಾರಂಟಿ ಯೋಜನೆಯಲ್ಲಿ ಬಹಳ ಸುದ್ದಿಯಲ್ಲಿರುವ ಯೋಜನೆ ಎಂದರೇ ಗೃಹಲಕ್ಷ್ಮಿ (Gruha Lakshmi), ಈಗಾಗಲೇ ನೊಂದಣಿ ಮಾಡಿದ ಹಲವು ಮಹೀಳೆಯರಿಗೆ ಈ ಮೊತ್ತ ಜಮೆ ಯಾಗಿದ್ದು ಕೆಲವರಿಗೆ ಒಂದು ಕಂತಿನ ಹಣ ಕೂಡ ಬಂದಿಲ್ಲ. ಈ ಬಗ್ಗೆ ಮಹೀಳಾ ಮತ್ತು ಮಕ್ಕಳ ಕಲ್ಯಾಣ ‌ಇಲಾಖೆ ಸೂಕ್ತ ನಿರ್ಧಾರ ‌ಕೈಗೊಳ್ಳುವುದಾಗಿ ಮಾಹಿತಿ ಕೂಡ ನೀಡಿತ್ತು.

ಇಷ್ಟು ಮಹೀಳೆಯರಿಗೆ ಹಣ ಜಮೆ:

ಗೃಹಲಕ್ಷ್ಮಿ ಯೋಜನೆ (Gruha Lakshmi) ಗೆ ನೋಂದಾಯಿಸಿಕೊಂಡ ಸುಮಾರು 1.21 ಕೋಟಿ ಮಹಿಳಾ ಫಲಾನುಭವಿ ಗಳಲ್ಲಿ 1.12 ಕೋಟಿ ಮಹೀಳೆ ಯರಿಗೆ ಈಗಾಗಲೇ 2 ಸಾವಿರ ರೂ. ಜಮೆ ಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಮಾಹಿತಿ ಕೂಡ ನೀಡಿದ್ದಾರೆ.

ಹಣ ಬರದೇ ಇರೋ ಮಹೀಳೆಯರು ಹೀಗೆ ಮಾಡಿ:

 

 

advertisement

ಕೆಲವು ಜಿಲ್ಲೆಗಳಲ್ಲಿ ಮಹೀಳೆಯರು ‌ಈ ಯೋಜನೆಗೆ ನೋಂದಾಯಿ ಸಿಕೊಂಡರು ಫಲಾನುಭವಿಗಳ ಕೆವೈಸಿ ಅಪ್ಡೇಟ್, ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ, ಮಾಹಿತಿ ತಪ್ಪಾಗಿರುವುದು ಇತ್ಯಾದಿ ಕಾರಣಗಳಿಂದ ಖಾತೆಗೆ ಹಣ ಬಂದಿಲ್ಲ.‌ ಮೊದಲು ಈ ಸಮಸ್ಯೆ ಬಗೆಹರಿಸಿಕೊಂಡು ಮತ್ತೆ ಅರ್ಜಿ ಸಲ್ಲಿಕೆ ಮಾಡಿದ್ರೆ ಈ ಹಣ ಜಮಾ ಮಾಡಲಾಗುವುದು ಎಂದು ಸರಕಾರ ತಿಳಿಸಿದೆ.  ಕೆಲವರ ಹೆಸರು ಮತ್ತು ಅಡ್ರೆಸ್ ಮ್ಯಾಚ್ ಆಗದೇ ಇರೋ ಕಾರಣ ತಾಂತ್ರಿಕ ದೋಷದಿಂದಾಗಿ ಹಣ ಬಿಡುಗಡೆ ಆಗುತ್ತಿಲ್ಲ. ಎಂದು ರಾಜ್ಯ ಸರಕಾರ ಸ್ಪಷ್ಟನೆ ‌ನೀಡಿದೆ.

Gruha Lakshmi ಆರನೇ ಕಂತಿನ ಹಣ ಜಮೆ?

ಈಗಾಗಲೇ 5 ಕಂತಿನ ಹಣ ಪಡೆದ ಮಹೀಳೆಯರು ಆರನೇ ಕಂತಿಗೆ ಕಾದು ಕುಳಿತಿದ್ದಾರೆ. ಮೊನ್ನೆಯಷ್ಟೆ ‌ಪೆಬ್ರವರಿ ಹದಿನೈದರಂದು ಕೆಲವು ಮಹೀಳೆಯರ ಖಾತೆಗೆ ಜಮೆ ಯಾಗಿದ್ದು ಹಂತ ಹಂತವಾಗಿ ಹಣ ಜಮೆ ಯಾಗಲಿದೆ. ಒಟ್ಟಿನಲ್ಲಿ ಪ್ರತಿಯೊಬ್ಬ ಫಲಾನುಭವಿಯ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆ ಮಾಡಲಾಗುತ್ತದೆ.

Gruha Lakshmi ಹಣ ಜಮೆ ಆಗಿದೆಯಾ ತಿಳಿಯಲು ಹೀಗೆ ಮಾಡಿ:

ನಿಮ್ಮ ಖಾತೆಗೆ ಗೃಹಲಕ್ಷ್ಮಿ ಹಣ ಬಂದಿದೆಯೋ ಇಲ್ಲವೋ ಎಂದು ತಿಳಿಯಲು ಗೂಗಲ್‌ ಪ್ಲೇ ಸ್ಟೋರ್‌ ಮೂಲಕ ಡಿಬಿಟಿ ಕರ್ನಾಟಕ ಆಪ್ ಡೌನ್‌ಲೋಡ್ ಮಾಡಿಕೊಂಡು ಇಲ್ಲಿ ಮಾಹಿತಿ ತಿಳಿಯಬಹುದಾಗಿದೆ. ಈ ಆಪ್‌ ನೋಂದಣಿಗೆ ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ನಂಬರ್ ಸಲ್ಲಿಸಿ ತಿಳಿಯಿರಿ.

advertisement

Leave A Reply

Your email address will not be published.