Karnataka Times
Trending Stories, Viral News, Gossips & Everything in Kannada

Umapathy Gowda: ಡಿ ಬಾಸ್ ದರ್ಶನ ಕೊಟ್ಟ ಹೇಳಿಕೆಗೆ ಸೈಲೆಂಟ್ ಆಗಿ ತಿರುಗೇಟು ಕೊಟ್ಟ ಉಮಾಪತಿ ಗೌಡ, ಹೇಳಿದ್ದೇನು?

advertisement

ಸ್ಯಾಂಡಲ್ ವುಡ್ ನಲ್ಲಿ ಸದಾ ಗಾಸಿಪ್ ನಲ್ಲಿ ಇರೊ ಹೆಸರಿನ ಸಾಲಿಗೆ ದರ್ಶನ್ ಅವರು ಚಿರ ಪರಿಚಿತರು ಎನ್ನಬಹುದು. ಇತ್ತೀಚೆಗಷ್ಟೇ ವೈಯಕ್ತಿಕ ಜೀವನದಿಂದ ಸಾಕಷ್ಟು ಟ್ರೋಲ್ , ಕಮೆಂಟ್ ಗೆ ಒಳಗಾದ ದರ್ಶನ್ ಅವರು ಇದೀಗ ಮತ್ತೊಂದು ಗಾಸಿಪ್ ಅನ್ನು ಮಾಡಿಕೊಂಡಿದ್ದಾರೆ. ಕಟೇರ ಐವತ್ತು ದಿನದ ಯಶಸ್ಸಿನ ಕಾರ್ಯಕ್ರಮವನ್ನು ಆಚರಿಸಲಾಗಿದ್ದು ದರ್ಶನ್ (Darshan) ಈ ವೇಳೆ ಓರ್ವ ನಿರ್ಮಾಪಕನ ಬಗ್ಗೆ ಮಾತಾಡಿದ್ದರು. ಬಳಿಕ ಇನ್ನೊಂದು ಕಾರ್ಯಕ್ರಮದಲ್ಲಿ ಅದೇ ನಿರ್ಮಾಪಕ ದರ್ಶನ್ ಗೆ ಚೆನ್ನಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಆದದ್ದೇನು?

 

 

ಕಾಟೇರ ಹೆಸರನ್ನು ಮೊದಲು ಸಲೆಕ್ಟ್ ಮಾಡಿದ್ದು ತಾನೆಂದು ರಾಬರ್ಟ್ ಸಿನೆಮಾ ನಿರ್ಮಾಪಕರಾದ ಉಮಾಪತಿ ಹೇಳಿದ್ದು ಇದು ದರ್ಶನ್ ಅವರು ಕೂಡ ರಾಬರ್ಟ್ ಸಿನೆಮಾ ಬಗ್ಗೆ ಮಾತನಾಡಿ ಉಮಾಪತಿ ಅವರನ್ನು ತಗಡು ಎಂಬರ್ಥದಲ್ಲಿ ಮಾತನಾಡಿದ್ದರು ಆಗ ಅನೇಕ ಟ್ರೋಲರ್ಸ್ ಇದನ್ನು ಟ್ರೋಲ್ ಮಾಡಿದ್ದರು. ದರ್ಶನ್ ಅವರು ಅಯ್ಯೊ ತಗಡೆ ಅಂದು ರಾಬರ್ಟ್ ಕಥೆ ಕೊಟ್ಟದ್ದೇ ನಾವು ಆದರೂ ಇನ್ನು ಬುದ್ಧಿ ಬಂದಿಲ್ಲ. ಕಾಟೇರ ಇಷ್ಟೊಳ್ಳೆ ಕಥೆ ಹಾಗಿದ್ದರೂ ಯಾಕೆ ಬಿಟ್ಟೆ, ಈ ಕತೆ ಮೊದಲು ನನ್ನ ಹತ್ತಿರ ಬಂದಿತ್ತು ಹಾಗಾಗಿ ತರಣ್ ಗೆ ಹೇಳಿ ಕಾಟೇರ ಹೆಸರಿನ ರಿಜಿಸ್ಟ್ರೇಶನ್ ಮಾಡಿಸಿದ್ದೇನೆ ಯಾಕಪ್ಪ ಪದೇ ಪದೇ ನಮ್ಮ ಬಳಿಯೇ ತಗ್ಲಾಕೊಳ್ತಿಯಾ ಇದೆಲ್ಲ ಒಳ್ಳೆದಲ್ಲ ಎಲ್ಲೊ ಇದ್ಯಾ ಅಲ್ಲೆ ಚೆನ್ನಾಗಿ ಇರು ಇಂಥ ಅನಗತ್ಯ ಹೇಳಿಕೆ ನೀಡೊದ್ಯಾಕೆ? ಎಂದು ಉಮಾಪತಿ ಅವರ ಕಾಲೆಳೆದಿದ್ದರು.

ನಿರ್ಮಾಪಕನ ಉತ್ತರವೇನು?

 

advertisement

 

ಇತ್ತೀಚೆಗೆ ಉಪಾಧ್ಯಕ್ಷ ಸಿನೆಮಾದಲ್ಲಿ ಬ್ಯುಸಿ ಇರಬೇಕಾದರೆ ಪ್ರೆಸ್ ಮೀಟ್ ಒಂದರಲ್ಲಿ ನಿರ್ಮಾಪಕ ಉಮಾಪತಿ (Umapathy Gowda) ಅವರ ಬಳಿ ದರ್ಶನ್ (Darshan) ಅವರು ತಗಡು ಎಂಬ ಪದ ಬಳಕೆ ಮಾಡಿದ್ದಾರೆ ನಿಮ್ಮ ಪ್ರತಿಕ್ರಿಯೆ ಏನೆಂದು ಕೇಳಿದ್ದಾರೆ ಅದಕ್ಕೆ ಉತ್ತರಿಸಿದ್ದ ಅವರು ಯಾರು ಏನೆ ಹೇಳಲಿ ಕಾಟೇರ ಟೈಟಲ್ ಮೊದಲು ರಿಜಿಸ್ಟರ್ ಮಾಡಿದ್ದು ನಾನೇ ಬಳಿಕ ತರುಣ್ ಸುಧೀರ್ (Tharun Sudhir) ಸಿನೆಮಾ ಮಾಡಿದ್ದಾರೆ. ಅವರ ಸಿನೆಮಾ ಅನೌನ್ಸ್ ಆಗೋ ಕಾಲಕ್ಕೆ ಬೇರೆ ಸಿನೆಮಾ ಕೆಲಸದ ಮೇಲೆ ಬ್ಯುಸಿ ಇದ್ದೆ ಎಂದಿದ್ದಾರೆ.

ಮಾತಿಗೂ ತೂಕ ಬೇಕು?

ಬಳಿಕ ದರ್ಶನ್ ಅವರ ಬಗ್ಗೆ ಮಾತನಾಡಿ,ನಾನು ಯಾರಿಗೂಭಯ ಪಡಲಾರೆ, ನಾನು ಕೈಲಾಗದವನಲ್ಲ, ಇನ್ನೊಬ್ಬರ ಹಂಗಿನಲ್ಲಿ ಬದುಕಿಲ್ಲ ದೇಹದಲ್ಲಿ ತೂಕ ಇದ್ರೆ ಸಾಲದು ಆಡೊ ಮಾತಿಗೂ ತೂಕ ಬೇಕು. ಮಾಂಸ ತಿಂತಿವಿ ಅಂತ ಮೂಳೆನೇ ಮೈಮೇಲೆ ಹಾಕಿ ಓಡಾಡೊಕೆ ಆಗೊಲ್ಲ , ದೊಡ್ಡವರು ಏನೊ ಮಾತಾಡ್ತಾರೆ ಎಲುಬಿಲ್ಲದ ನಾಲಿಗೆ ನಾವೆನು ಮಾತಾಡೊಕಾಗುತ್ತಾ ಎಷ್ಟೆ ಆದರೂ ತಗಡು ಅಲ್ವಾ ಎಂದು ಸೈಲೆಂಟಾಗೆ ಟಾಂಗ್ ಕೊಟ್ಟಿದ್ದಾರೆ.

ಮತ್ತೆ ಸುದ್ದಿಯಾದ ಡಿ ಬಾಸ್:

ಈ ಮೂಲಕ ದರ್ಶನ್ ಅವರಿಗೆ ಉಮಾಪತಿ ಅವರ ಮೇಲೆ ಇದ್ದ ರಾಬರ್ಟ್ ಬಂಧ ಕಳುಚಿ ಬಿದಿದ್ದು ಇಬ್ಬರು ಪರಸ್ಪರ ಹೇಳಿಕೆ ಬಹಿರಂಗ ನೀಡಿದ್ದ ಬಗ್ಗೆ ಎಲ್ಲೆಡೆ ಚರ್ಚೆ ಆಗುತ್ತಿದೆ. ಕಾಟೇರ ಸಿನೆಮಾ ಯಶಸ್ಸಿನಲ್ಲಿ ಡಿ ಬಾಸ್ ಬ್ಯುಸಿ ಇದ್ದು ಈ ಬಗ್ಗೆ ಕಾರ್ಯಕ್ರಮ ನಡೆಸಿ ಅವಾರ್ಡ್ ಅನ್ಮು ಸಹ ನೀಡಿದ್ದರು‌. ಒಟ್ಟಾರೆಯಾಗಿ ಡಿ ಬಾಸ್ ವೈಯಕ್ತಿಕ, ವೃತ್ತಿ ಜೀವನ ಎರಡರಲ್ಲೂ ಸದಾ ಸುದ್ದಿಯಲ್ಲಿದ್ದು ಉಮಾಪತಿ ಉತ್ತರಕ್ಕೆ ಪ್ರತ್ಯುತ್ತರ ನೀಡ್ತಾರಾ ಎಂದು ಕಾದು ನೋಡಬೇಕು.

advertisement

Leave A Reply

Your email address will not be published.