Karnataka Times
Trending Stories, Viral News, Gossips & Everything in Kannada

PM SVANidhi Scheme: ಯಾವುದೇ ಗ್ಯಾರಂಟಿ ಕೊಡದೆ ಕೇವಲ ಆಧಾರ್ ಕಾರ್ಡ್ ಆಧಾರದ ಮೇಲೆ ಸರ್ಕಾರದಿಂದ ಪಡೆಯಬಹುದು 50,000!

advertisement

ಕೇಂದ್ರ ಸರ್ಕಾರ ಬೇರೆ ಬೇರೆ ವರ್ಗದ ಜನರು ಆರ್ಥಿಕವಾಗಿ ಸ್ವಾಗತ ಯೋಜನೆಗಳನ್ನು ಜಾರಿಗೆ ತಂದಿದೆ. Covid 19 ಸಮಯದಲ್ಲಿ ಸಾಕಷ್ಟು ದುಡಿಯುವ ಕೈಗಳು ಕೆಲಸ ಇಲ್ಲದೆ ಕಷ್ಟ ಪಡುವಂತೆ ಆಗಿತ್ತು. ಅದರಲ್ಲೂ ಬೀದಿ ವ್ಯಾಪಾರಿಗಳು ವ್ಯಾಪಾರವೇ ಇಲ್ಲದೆ ಹಾಕಿರುವ ಬಂಡವಾಳವನ್ನು ಹಿಂಪಡೆಯಲು ಸಾಧ್ಯವಾಗಿರಲಿಲ್ಲ ಇದೇ ಕಾರಣಕ್ಕೆ ಇಂತಹ ಬೀದಿ ವ್ಯಾಪಾರಿಗಳ ಸಹಾಯಕ್ಕಾಗಿ ಕೇಂದ್ರ ಸರ್ಕಾರ ಸ್ವನಿಧಿ ಯೋಜನೆ (PM SVANidhi Scheme) ಯನ್ನು ಜಾರಿಗೆ ತಂದಿದೆ.

PM SVANidhi Scheme:

 

 

advertisement

ಈ ಯೋಜನೆಯ ಅಡಿಯಲ್ಲಿ ಇಲ್ಲಿಯವರೆಗೆ ಸುಮಾರು 70 ಲಕ್ಷ ಬೀದಿ ಬದಿಯ ವ್ಯಾಪಾರಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ. ಸಣ್ಣ ಪುಟ್ಟ ಅಂಗಡಿ ಇಟ್ಟುಕೊಂಡು ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರು ಉದಾಹರಣೆಗೆ ಹಣ್ಣು ವ್ಯಾಪಾರ, ಹೂವು ವ್ಯಾಪಾರ, ತಿಂಡಿ ತಿನಿಸುಗಳ ವ್ಯಾಪಾರ, ಐರನ್ ಮಾಡುವವರು ಹೀಗೆ ಇಂಥವರ ಉದ್ಯಮವನ್ನು ಅಭಿವೃದ್ಧಿಪಡಿಸುವ ಸಲುವಾಗಿ ಸರ್ಕಾರ 50,000ಗಳನ್ನು ಸಾಲವಾಗಿ ನೀಡುತ್ತದೆ. ಇದಕ್ಕೆ ಸರ್ಕಾರ ಯಾವುದೇ ಗ್ಯಾರೆಂಟಿಯನ್ನು ಕೂಡ ತೆಗೆದುಕೊಳ್ಳುವುದಿಲ್ಲ. ನೀವು ಹತ್ತಿರದ ಯಾವುದೇ ಬ್ಯಾಂಕ್ ಗೆ ಹೋಗಿ ಸ್ವನಿಧಿ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ಪಡೆಯಬಹುದು.

PM SVANidhi Scheme ಯಲ್ಲಿ ಸಾಲ ಸೌಲಭ್ಯ ಪಡೆಯುವುದು ಹೇಗೆ?

ಯಾವುದೇ ಗ್ಯಾರೆಂಟಿ ಇಲ್ಲದೆ ರೂ. 50,000 ವರೆಗೆ ಸಾಲ ಪಡೆಯಬಹುದು. ಮೊದಲ ಹಂತದಲ್ಲಿ 10,000 ಗಳನ್ನು ಕೊಡಲಾಗುತ್ತದೆ ಇದನ್ನು 12 ತಿಂಗಳ ಅವಧಿಯಲ್ಲಿ ಮರುಪಾವತಿ ಮಾಡಬೇಕು. ಎರಡನೆಯ ಹಂತದಲ್ಲಿ 20 ಸಾವಿರ ರೂಪಾಯಿಗಳನ್ನು ಸಾಲವಾಗಿ ಪಡೆಯಬಹುದು. ಈ ಸಾಲವನ್ನು ಕೂಡ ಹಿಂತಿರುಗಿಸಿದ ನಂತರ 50,000 ಗಳನ್ನು ಮೂರನೇ ಹಂತದಲ್ಲಿ ನೀಡಲಾಗುತ್ತದೆ. ಈ ಸಾಲಕ್ಕೆ 7% ನಷ್ಟು ಬಡ್ಡಿ ದರ ವಿಧಿಸಲಾಗಿದೆ.

ಆಧಾರ್ ಕಾರ್ಡ್ (Aadhaar Card) ಮತ್ತು ಫೋನ್ ನಂಬರ್ ಕೊಟ್ಟು ಯಾವುದೇ ಸರ್ಕಾರಿ ಬ್ಯಾಂಕ್ ನಲ್ಲಿ ಸ್ವನಿಧಿ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಇಲ್ಲಿಯವರೆಗೆ ಶೇಕಡ 43.5% ನಷ್ಟು ಮಹಿಳಾ ವ್ಯಾಪಾರಿಗಳೆ ಈ ಯೋಜನೆಯ ಸಾಲ ಸೌಲಭ್ಯ ಪಡೆದುಕೊಂಡಿದ್ದಾರೆ. ವರದಿಯ ಪ್ರಕಾರ ಈ ಯೋಜನೆಯ ಅಡಿಯಲ್ಲಿ ಇಲ್ಲಿಯವರೆಗೆ 70 ಲಕ್ಷ ಜನರು ಸಾಲ ಸೌಲಭ್ಯ ಪಡೆದುಕೊಂಡಿದ್ದಾರೆ ಹಾಗೂ ಇದಕ್ಕಾಗಿ 9100 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ.

advertisement

Leave A Reply

Your email address will not be published.