Karnataka Times
Trending Stories, Viral News, Gossips & Everything in Kannada

Hyundai Creta: ಹುಂಡೈ ಕಂಪನಿಯ ಈ ಕಾರು ಖರೀದಿಗೆ ಶೋ ರೂಮ್ ಮುಂದೆ ಸಾಲು ಸಾಲು ನಿಂತ ಜನ, 10 ಲಕ್ಷ ಮಾರಾಟ!

advertisement

ಹಲವು ಕಾರುಗಳು ಲಾಂಚ್ ಆದ ಬಳಿಕ ಮಾರುಕಟ್ಟೆಯಲ್ಲಿ ತನ್ನದೇ ಆದ ಒಂದು ಛಾಪನ್ನು ಮೂಡಿಸುತ್ತವೆ. ಇಂತಹ ಕಾರುಗಳಲ್ಲಿ ಎಷ್ಟೇ ಬದಲಾವಣೆಗಳು ಆದರೂ ಕೂಡ ಜನರು ಇದನ್ನು ಮೆಚ್ಚುತ್ತಿರುತ್ತಾರೆ. ಕಾರು ತಯಾರಕರು ಕೂಡ ಇಂತಹ ಪ್ರಖ್ಯಾತವಾದ ಮಾಡೆಲ್ ಗಳಲ್ಲಿ ಬದಲಾವಣೆಗಳನ್ನು ಮಾಡಬೇಕಾದರೆ ತುಂಬಾ ಆಲೋಚನೆ ಮಾಡಿ ಬದಲಾವಣೆಗಳನ್ನು ಮಾಡುತ್ತಾರೆ.

ಕಾರುಗಳು ಎಷ್ಟೇ ಯಶಸ್ವಿಯಾಗಿದ್ದರೂ ಕೂಡ ಅದೇ ಮಾಡೆಲ್ ನ ಸ್ವಲ್ಪ ವಿನ್ಯಾಸದಲ್ಲಿ ಬದಲಾಗಿರುವ ಅಥವಾ ಫೇಸ್ ಲಿಫ್ಟ್ ಆಗಿರುವ ಮಾಡೆಲ್ ಅನ್ನು ಕಾರ್ ತಯಾರಕರು ಕೆಲವು ವರ್ಷಗಳ ನಂತರ ಲಾಂಚ್ ಮಾಡುತ್ತಾರೆ. ಈಗ ಭಾರತದ ಪ್ರಖ್ಯಾತ ಎಸ್‌ ಯು ವಿ ಆದ ಕ್ರೆಟಾ ಕೂಡ 2024 ರ ಫೇಸ್ ಲಿಫ್ಟ್ ಮಾಡೆಲ್ ನೊಂದಿಗೆ ಲಾಂಚ್ ಆಗಿದೆ.

ಕಳೆದ ತಿಂಗಳು ಲಾಂಚ್ ಆದ ಹುಂಡೈ ಕ್ರೆಟಾದ (Hyundai Creta) ಫೇಸ್ ಲಿಫ್ಟ್ ವರ್ಷನ್ ಗೆ ಈಗಾಗಲೇ 60,000 ಕ್ಕಿಂತಲೂ ಹೆಚ್ಚಿನ ಬುಕಿಂಗ್ ಗಳು ಲಭ್ಯ ಆಗಿವೆ. ಇದರೊಂದಿಗೆ ಭಾರತದಲ್ಲಿ 10 ಲಕ್ಷಕ್ಕಿಂತಲೂ ಹೆಚ್ಚಿನ ಸೇಲ್ಸ್ ಆದ ಎಸ್‌ ಯು ವಿ ಎಂಬ ಪಟ್ಟವನ್ನು ಕ್ರೆಟಾ ಪಡೆದುಕೊಂಡಿದೆ.

ಎಷ್ಟಿದೆ ಬುಕ್ಕಿಂಗ್ ಚಾರ್ಜಸ್:

 

 

advertisement

ನಿಮಗೂ ಕೂಡ ಕ್ರೆಟಾ (Hyundai Creta) ಬುಕ್ ಮಾಡಬೇಕು ಎಂದಾದಲ್ಲಿ ನಿಮ್ಮ ಸಮೀಪದ ಡೀಲರ್ ಗಳ ಬಳಿ ಹೋಗಿ 25,000ಗಳ ಬುಕಿಂಗ್ ಅಮೌಂಟ್ ನೀಡಿ ಕಾರನ್ನು ಬುಕ್ ಮಾಡಬಹುದು. ಈಗ ಆಗಿರುವ ಬುಕಿಂಗ್ ಗಳ ಪ್ರಕಾರ ಪ್ರತಿ ಗಂಟೆಗೆ 52 ಹೊಸ ಕ್ರೆಟಾ ಕಾರುಗಳು ಬುಕ್ ಆಗಿವೆ. 10.99 ಲಕ್ಷದಿಂದ ಆರಂಭವಾಗಿ 19.99 ಲಕ್ಷದ ತನಕ ಎಕ್ಸ್ ಶೋರೂಮ್ ಬೆಲೆ ಹೊಸ ಕ್ರೆಟಾ ಗೆ ಇದೆ.

ಏನೆಲ್ಲಾ ಬದಲಾಗಿದೆ ?

 

 

ಹಾಗಿದ್ದರೆ ಕ್ರೆಟಾ ದಲ್ಲಿ ಆಗಿರುವ ಬದಲಾವಣೆಗಳು ಏನು ಎಂಬ ಬಗ್ಗೆ ಒಮ್ಮೆ ನೋಡೋಣ. ಕ್ಯಾಬಿನ್ ಒಳಗಡೆ 10.25 ಇಂಚಿನ ಹೊಸ ಇನ್ಫೋಟೈನ್ಮೆಂಟ್ ಸಿಸ್ಟಮ್ ಸಿಗಲಿದೆ. ಆರು ಏರ್ ಬ್ಯಾಗ್ ಗಳು ಸೇಫ್ಟಿ ಗಾಗಿ ಇವೆ. ಪ್ಯಾನರೋಮಿಕ್ ಸನ್ ರೂಫ್ ಇದ್ದು ಇದನ್ನು ಧ್ವನಿಯ ಮೂಲಕ ನಿಯಂತ್ರಣ ಮಾಡಬಹುದಾಗಿದೆ. ಡ್ರೈವರ್ ಸೀಟ್ ಅನ್ನು 8 ವಿಧಗಳಲ್ಲಿ ಹೊಂದಿಸಿಕೊಳ್ಳಬಹುದಾಗಿದೆ. ಡಿ ಕಟ್ ಮಾದರಿಯ ಸ್ಟೇರಿಂಗ್ ವೀಲ್ ಇದೆ. ಮುಂದಿನ ಎರಡು ಸೀಟುಗಳು ವೆಂಟಿಲೇಟೆಡ್ ಆಗಿವೆ.

ಇಂಜಿನ ಆಯ್ಕೆಗಳು:

ಇನ್ನು ಇಂಜಿನ್ ನ ವಿಷಯಕ್ಕೆ ಬಂದಾಗ ಫೇಸ್ ಲಿಫ್ಟ್ ಕ್ರೆಟಾಗೆ ಹೊಸ 1.5 ಲೀಟರ್ ಟರ್ಬೋ ಚಾರ್ಜ್ ಪೆಟ್ರೋಲ್ ಇಂಜಿನ್ ಸಿಗಲಿದ್ದು ಇದು 160 ಬಿ ಎಚ್ ಪಿ ಪವರ್ ಹಾಗೂ 253 ಏನ್ ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎರಡನೇ ಇಂಜಿನ್ ಆಯ್ಕೆಯಾಗಿ 1.5 ಲೀಟರ್ ನ್ಯಾಚುರಲಿ ಅಸ್ಪಿರೇಟೆಡ್ ಪೆಟ್ರೋಲ್ ಇಂಜಿನ್ ಸಿಗಲಿದೆ. ಇದು 115 ಬಿ ಎಚ್ ಪಿ ಪವರ್ ಹಾಗೂ 144 ಎನ್ ಎಮ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಡೀಸೆಲ್ ಇಂಜಿನ್ ನ ಆಯ್ಕೆಗೆ ಬಂದಾಗ 1.5 ಲೀಟರ್ ಡೀಸೆಲ್ ಇಂಜಿನ್ ಸಿಗಲಿದ್ದು ಇದು 116 ಬಿ ಎಚ್ ಪಿ ಪವರ್ ಅನ್ನು 250 ಎನ್ ಎಮ್ ಟಾರ್ಕ್ ನೊಂದಿಗೆ ನೀಡಲಿದೆ.

advertisement

Leave A Reply

Your email address will not be published.