Karnataka Times
Trending Stories, Viral News, Gossips & Everything in Kannada

FASTag: ದೇಶದಾದ್ಯಂತ ಟೋಲ್ ನ ಹೊಸ ನಿಯಮ; ಫಾಸ್ಟ್ ಟ್ಯಾಗ್ ಇರುವ ಎಲ್ಲರಿಗೂ ಹೊಸ ಸೂಚನೆ

advertisement

ನಮಗೆಲ್ಲಾ ತಿಳಿದಿರುವ ಹಾಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನದ ಮೂಲಕ ಪ್ರಯಾಣಿಸುವಾಗ ಟೋಲ್ ಗೇಟ್ ಕಳೆದು ಮುಂದೆ ಹೋಗ್ಬೇಕು. ಹೀಗೆ ಟೋಲ್ ಪ್ಲಾಜಾ (Toll Plaza) ಪಾಸಾಗಿ ಮುಂದೆ ಹೋಗುವಾಗ ಟೋಲ್ ಮೊತ್ತವನ್ನು ಪಾವತಿಸಬೇಕು. ಇದಕ್ಕಾಗಿ ಜನರು ಈಗ ಹಿಂದಿನಂತೆ ಕಾಯಬೇಕಾಗಿಲ್ಲ ಫಾಸ್ಟ್ ಟ್ಯಾಗ್ (FASTag) ಒಂದಿದ್ರೆ ಸಾಕು ತಕ್ಷಣ ನಿಮ್ಮ ಖಾತೆಯಿಂದ ಈ ಮೊತ್ತ ಕಡಿತಗೊಳ್ಳುತ್ತದೆ. ಹಾಗೂ ನೀವು ಸುಲಭವಾಗಿ ಅತ್ಯಂತ ಶೀಘ್ರವಾಗಿ ಪ್ರಯಾಣ ಮಾಡಬಹುದು.

ಇನ್ನು ಮುಂದೆ ಫಾಸ್ಟ್ ಟ್ಯಾಗ್ (FASTag) ಅಗತ್ಯವೇ ಇಲ್ಲ!

ನಮಗೆ ಮೊದಲೇ ಪುರುಸೊತ್ತು ಇರೋದಿಲ್ಲ ಅಂತದ್ರಲ್ಲಿ ಟೋಲ್ ನಲ್ಲಿ ಸ್ವಲ್ಪ ಸಮಯ ಕಳೆಯಬೇಕು ಅಂದ್ರೆ ಸಾಕಷ್ಟು ಜನರಿಗೆ ಪಿತ್ತ ನೆತ್ತಿಗೇರುತ್ತೆ. ಎಷ್ಟು ಹೊತ್ತು ಇಲ್ಲೇ ಕಳಿಬೇಕು ಅಂತ ಟೋಲ್ ಪ್ಲಾಜಾ ದಲ್ಲಿ ಗಲಾಟೆ ಮಾಡುತ್ತಾರೆ. ಇದರಿಂದಾಗಿ ಫಾಸ್ಟ್ ಟ್ಯಾಗ್ ಪರಿಚಯಿಸಲಾಯಿತು. ನೀವು ಟೋಲ್ ಹತ್ರ ಹೋಗ್ತಿದ್ದ ಹಾಗೆ ನಿಮ್ಮ ಗಾಡಿಯ ಮೇಲೆ ಅಂಟಿಸಲಾಗಿರುವ ಫಾಸ್ಟ್ ಟ್ಯಾಗ್ ಅನ್ನು ಸೆನ್ಸಾರ್ ರೆಕೊರ್ನೈಸ್ ಮಾಡುತ್ತೆ. ಹಾಗೂ ನಿಮ್ಮ ಖಾತೆಯಿಂದ ಹಣ ಕಡಿತಗೊಳ್ಳುತ್ತೆ ನೀವು ತಕ್ಷಣ ಅಲ್ಲಿಂದ ಹೋಗಬಹುದು.

Image Source: ET Auto

advertisement

ಆದರೆ ಇನ್ನು ಮುಂದೆ ಈ ಸೆಕೆಂಡ್ ಗಳನ್ನು ಕೂಡ ನೀವು ಟೋಲ್ ಪ್ಲಾಜಾದಲ್ಲಿ ಕಳೆಯಬೇಕಾಗಿಲ್ಲ ಯಾಕಂದ್ರೆ ಈಗ ಸರ್ಕಾರ ಹೊಸ ಉಪಕ್ರಮಕ್ಕೆ ಕೈ ಹಾಕಿದ್ದು, ಉಪಗ್ರಹ ಚಾಲಿತ ಫಾಸ್ಟ್ ಟ್ಯಾಗ್ ಬಳಕೆಗೆ ತರುವುದಕ್ಕೆ ಪ್ರಯತ್ನಿಸುತ್ತಿದೆ. ನಿಮ್ಮ ವಾಹನದ ನಂಬರ್ ಪ್ಲೇಟ್ ನಿಂದ ತೆರಿಗೆ ಹಣ ನೇರವಾಗಿ ಖಾತೆಯಿಂದ ಕಡಿತಗೊಳ್ಳುವಂತೆ ಮಾಡಬಹುದು.

ಟೋಲ್ ನ ಹೊಸ ನಿಯಮ

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ NHAI ಮಾರಾಟ ಕೇಂದ್ರಗಳಿಂದ ಫಾಸ್ಟ್ ಟ್ಯಾಗ್ ವಿತರಣೆ ಮಾಡುತ್ತಿದೆ. ಇದನ್ನು ನೀವು ಪಡೆದುಕೊಳ್ಳಲು, my FASTag ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಬೇಕು. ಇಲ್ಲಿ ನೀವು ಫಾಸ್ಟ್ ಟ್ಯಾಗ್ ಪಡೆದುಕೊಳ್ಳಲು ಸಾಧ್ಯವಿದೆ.

ಸಾಮಾನ್ಯವಾಗಿ ನಾವು ವಾಹನ ಖರೀದಿ ಮಾಡಿದ ಮೇಲೆ ವಾಹನದ ಮುಂಭಾಗದಲ್ಲಿ ಗ್ಲಾಸ್ ಮೇಲೆ ಫಾಸ್ಟ್ ಟ್ಯಾಗ್ ಸ್ಥಾಪಿಸುತ್ತೇವೆ. ಇದು ನಿಮ್ಮ ವಾಹನಕ್ಕೆ ಸಮಸ್ಯೆ ಆದರೆ ಅಥವಾ ಫಾಸ್ಟ್ ಟ್ಯಾಗ್ ಹಾಳಾದರೆ ನೀವು ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ಹೆಚ್ಚುವರಿ ದಂಡ ಪಾವತಿಸಬೇಕಾಗುತ್ತದೆ. ಹಾಗಾಗಿ ನಂಬರ್ ಪ್ಲೇಟ್ ಗೆ ಫಾಸ್ಟ್ ಟ್ಯಾಗ್ ಕನೆಕ್ಟ್ ಮಾಡುವುದರಿಂದ ಯಾವುದೇ ಸಮಸ್ಯೆ ಇಲ್ಲದೆ ನೀವು ಪ್ರಯಾಣಿಸಬಹುದು ಜೊತೆಗೆ ಟೋಲ್ ತೆರಿಗೆ ಕೂಡ ಕ್ಷಣಮಾತ್ರದಲ್ಲಿ ಕಡಿತಗೊಳ್ಳುತ್ತದೆ. ಇನ್ನು ಫಾಸ್ಟ್ ಟ್ಯಾಗ ಖರೀದಿ ಮಾಡುವವರು ಬ್ಯಾಂಕ್ ನಲ್ಲಿ ಖರೀದಿಸಬಹುದು. ಹೊಸ ನಿಯಮ ಸದ್ಯದಲ್ಲಿಯೇ ಜಾರಿಗೆ ಬರಬಹುದು ಎಂದು ವರದಿಯಾಗಿದೆ.

advertisement

Leave A Reply

Your email address will not be published.