Karnataka Times
Trending Stories, Viral News, Gossips & Everything in Kannada

Fixed Deposit: ನಿಮ್ಮ ಬ್ಯಾಂಕ್ FD ಹಣ ಯಾವಾಗ ಡಬಲ್ ಆಗುತ್ತೆ ಗೊತ್ತಾ? ಈ ಸೂತ್ರದ ಮೂಲಕ ತಿಳಿಯಿರಿ

advertisement

ಎಲ್ಲರಿಗೂ ಸಾಮಾನ್ಯವಾಗಿ ತಿಳಿದಿರುವಂತೆ ಫಿಕ್ಸೆಡ್ ಡೆಪಾಸಿಟ್ ನಲ್ಲಿ (Fixed Deposit) ಹಣವನ್ನು ಉಳಿತಾಯ ಮಾಡುವುದರಿಂದ ಅದಕ್ಕೆ ಬರುವಂತಹ ಬಡ್ಡಿಯ ಮೊತ್ತವು ನಾವು ಹೂಡಿಕೆ ಮಾಡಿರುವ ಮೊತ್ತಕ್ಕಿಂತ 4-6 ಪರ್ಸೆಂಟ್ ಅಥವಾ ಅಧಿಕ ಎಂದರೆ 8 ಪರ್ಸೆಂಟ್ ಅಷ್ಟು ಹಣವು ಹೆಚ್ಚಾಗಬಹುದು. ಆದರೆ ಎಷ್ಟು ವರ್ಷಗಳಲ್ಲಿ ನಾವು ಫಿಕ್ಸೆಡ್ ಡೆಪಾಸಿಟ್ (Fixed Deposit) ನಲ್ಲಿ ಹಣವನ್ನು ಡೆಪಾಸಿಟ್ ಮಾಡಿದರೆ ನಾವು ಹೂಡಿಕೆ ಮಾಡಿದಷ್ಟೇ ನಮ್ಮ ಹಣವು ದ್ವಿಗುಣ ಅಥವಾ ಎರಡರಷ್ಟು ಆಗುತ್ತದೆ ಎಂದು ತಿಳಿದುಕೊಳ್ಳುವುದು ಒಂದು ಮುಖ್ಯವಾದ ಸಂಗತಿಯಾಗಿದೆ. ಇದರಿಂದ ನಮ್ಮ ಉಳಿತಾಯವನ್ನು ನಾವು ಇನ್ನೂ ಹೆಚ್ಚಿಸಿಕೊಳ್ಳಬಹುದು.

ಕೆಲವೇ ವರ್ಷಗಳಲ್ಲಿ ಫಿಕ್ಸೆಡ್ ಡೆಪಾಸಿಟ್ (Fixed Deposit) ಮೊತ್ತವನ್ನು ಎರಡರಷ್ಟಾಗಿ ಮಾಡಿಕೊಳ್ಳುವುದು ಹೇಗೆ ಎಂದು ತಿಳಿದುಕೊಳ್ಳೋಣ:

 

Image Source: Business Today

 

ಸಾಮಾನ್ಯವಾಗಿ ನಮ್ಮ ಹಿರಿಯರು ಅಥವಾ ಫಿಕ್ಸೆಡ್ ಡೆಪಾಸಿಟ್ (Fixed Deposit) ಹೊಂದಿರುವವರು ಸಾಮಾನ್ಯವಾಗಿ ಅದರ ಮೇಲೆ ಹೆಚ್ಚಿನ ರೀತಿಯ ನಂಬಿಕೆಯನ್ನು ಹೊಂದಿರುತ್ತಾರೆ. ಕಾರಣ ಅದು ಸುರಕ್ಷಿತವಾಗಿ ಇರುತ್ತದೆ ಮತ್ತು ಕಟ್ಟುನಿಟ್ಟಾದ ನಿಯಮಗಳನ್ನು ಹೊಂದಿರುತ್ತದೆ ಎಂದು. ಇನ್ನು ನಾವು ಯಾವುದೇ ರೀತಿಯ ಯೋಜನೆಗಳ ಅಡಿಯಲ್ಲಿ ಫಿಕ್ಸೆಡ್ ಡೆಪಾಸಿಟ್ (Fixed Deposit) ಅನ್ನು ಹೂಡಿಕೆ ಮಾಡಿದರು ಕೂಡ ಅದನ್ನು ಒಂದು ಫಾರ್ಮುಲಾದಿಂದ ಎಷ್ಟು ವರ್ಷದೊಳಗೆ ದ್ವಿಗುಣ ಆಗುತ್ತದೆ ಎಂದು ತಿಳಿದುಕೊಳ್ಳಬಹುದಾಗಿದೆ.

advertisement

ಹಾಗಾದರೆ ಆ ಫಾರ್ಮುಲಾ ಯಾವುದು? ಎಂದು ತಿಳಿದುಕೊಳ್ಳುವುದಾದರೆ ನಾವು ಯಾವುದೇ ಡೆಪಾಸಿಟ್ ಮಾಡಿದಾಗ ಅದಕ್ಕೆ ಸಿಕ್ಕುವ ಬಡ್ಡಿಯ ಮೊತ್ತವನ್ನು ಕೂಡ ತಿಳಿದುಕೊಳ್ಳಬೇಕಾಗಿರುತ್ತದೆ. ನಂತರ ಅದನ್ನು 72 ರಿಂದ ಭಾಗಿಸಿದಾಗ ಸಿಗುವ ಉತ್ತರ ಏನು ಎಂದು ನೋಡಿದರೆ ಆ ಉತ್ತರದ ಸಂಖ್ಯೆ ಎಷ್ಟು ಇರುತ್ತದೆಯೋ ಅಷ್ಟು ವರ್ಷಗಳಲ್ಲಿ ನಾವು ಡೆಪಾಸಿಟ್ ಮಾಡಿರುವಂತಹ ಹಣ ಎರಡರಷ್ಟು ಆಗುತ್ತದೆ. ಇದು ತುಂಬಾ ಸುಲಭವಾದಂತಹ ವಿಧಾನವಾಗಿದೆ.

 

Image Source: RBL Bank

 

ಉದಾಹರಣೆಗ ಪೋಸ್ಟ್ ಆಫೀಸ್ (Post Office) ನಲ್ಲಿ 5 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ. ನೀವು 5 ವರ್ಷಗಳ ಕಾಲ ಈ ಹೂಡಿಕೆಯನ್ನು ಮಾಡಿದ್ದೀರಿ ಎಂದುಕೊಳ್ಳೋಣ. ಇನ್ನು 5 ವರ್ಷಗಳ Fixed Deposit ಮೇಲೆ 7.5 ಶೇಕಡಾ ಬಡ್ಡಿಯನ್ನು ಪಡೆಯುತ್ತೀರಾ ಎನ್ನುವುದಾದರೆ ನಿಮ್ಮ ಹೂಡಿಕೆಯು ಎಷ್ಟು ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ ಎಂಬುದನ್ನು ನೀವು ತಿಳಿದುಕೊಳ್ಳಬೇಕು. ಅಂತಹ ಪರಿಸ್ಥಿತಿಯಲ್ಲಿ, ಸೂತ್ರವನ್ನು ಅನ್ವಯಿಸಿ ಮತ್ತು 72 ಅನ್ನು 7.5 ರಿಂದ ಭಾಗಿಸಿ. 72/7.5 = 9.6 ಅಂದರೆ ನಿಮ್ಮ ಹಣವು 9 ವರ್ಷ ಮತ್ತು 6 ತಿಂಗಳುಗಳಲ್ಲಿ ದ್ವಿಗುಣಗೊಳ್ಳುತ್ತದೆ.

ಪೋಸ್ಟ್ ಆಫೀಸ್ (Post Office) ಅಲ್ಲಿ ನೇರವಾಗಿ 10 ವರ್ಷ ಅಥವಾ 9 ವರ್ಷ ಮತ್ತು ಆರು ತಿಂಗಳವರೆಗೆ ಯಾವುದೇ FD ಇಲ್ಲದಿರುವುದರಿಂದ. ಮೊದಲು 5 ವರ್ಷಗಳವರೆಗೆ FD ಅನ್ನು ಹೂಡಿಕೆ ಮಾಡಿ, ನಂತರ ಅದನ್ನು 5 ವರ್ಷಗಳವರೆಗೆ ಸೇರಿಸಿ ಇಡುವುದರಿಂದ ಒಟ್ಟು 10 ವರ್ಷಗಳ ಅವಧಿಯಲ್ಲಿ ನಿಮ್ಮ ಮೊತ್ತವು ದ್ವಿಗುಣಗೊಳ್ಳುತ್ತದೆ. ನೀವು 5 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, 10 ವರ್ಷಗಳ ಅವಧಿಯಲ್ಲಿ ಈ ಮೊತ್ತವು 7.5 ಶೇಕಡಾ ದರದಲ್ಲಿ 10,51,175 ರೂಪಾಯಿ ಆಗುತ್ತದೆ. ಹೀಗೆ ಸುಲಭವಾಗಿ ಫಾರ್ಮುಲಾವನ್ನು ಬಳಸುವುದರ ಮೂಲಕ ಡೆಪಾಸಿಟ್ ಮಾಡಿರುವ ಹಣ ಯಾವಾಗ ದ್ವಿಗುಣಗೊಳ್ಳುತ್ತದೆ ಎಂದು ತಿಳಿದುಕೊಳ್ಳಬಹುದು.

advertisement

Leave A Reply

Your email address will not be published.