Karnataka Times
Trending Stories, Viral News, Gossips & Everything in Kannada

Gruha Lakshmi: ಬಾಕಿ ಇರುವ ಎಲ್ಲಾ ಕಂತಿನ ಗೃಹಲಕ್ಷ್ಮಿ ಹಣ ಜಮೆ! ಕೂಡಲೇ ಈ ಅಪ್ಡೇಟ್ ತಿಳಿದುಕೊಳ್ಳಿ

advertisement

ಇಂದು ಪುರುಷರಿಗಿಂತ ಮಹಿಳೆಯರದ್ದೇ ಮೇಲುಗೈ ಎನ್ನಬಹುದು, ಯಾಕಂದ್ರೆ ಇಂದು ಪುರುಷರಿಗಿಂತಲೂ ಮಹಿಳೆಯರೇ ಹೆಚ್ಚು ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಹಿಂದಿನ ಕಾಲದಲ್ಲಿ ಅಡುಗೆ ಕೆಲಸಕಷ್ಟೇ ಸೀಮಿತವಾಗಿದ್ದ ಹೆಣ್ಣು ಇಂದು ಏರ್ ಪೋರ್ಟ್ ನಿಂದ ಹಿಡಿದು ರಿಕ್ಷಾ ಡ್ರೈವರ್ ವರೆಗೂ ಮಹಿಳೆ ಆವರಿಸಿ ಕೊಂಡಿದ್ದಾರೆ. ಯಾವುದು ಕೆಲಸ ಅಸಾಧ್ಯ ಅಲ್ಲ ಎಂಬುದನ್ನು ಮಹಿಳೆ ತೋರಿಸಿಕೊಟ್ಟಿದ್ದಾಳೆ. ಅದೇ ರೀತಿ ಸರಕಾರವೂ ಅಷ್ಟೇ ರೀತಿಯಲ್ಲಿ ಮಹಿಳೆಯರಿಗೆ ಬೆಂಬಲ ನೀಡುತ್ತಿದೆ. ಆರ್ಥಿಕವಾಗಿಯು ಸಹಾಯ ಹಸ್ತವನ್ನು ನೀಡುತ್ತಿದೆ.

ರಾಜ್ಯ ಸರಕಾರದ ಗೃಹಲಕ್ಷ್ಮಿ ಯೋಜನೆ:

 

Image Source: The South First

 

ಈ‌ ಭಾರಿ ರಾಜ್ಯ ಸರಕಾರವು ಮಹಿಳೆಯರಿಗಾಗಿ ಆರ್ಥಿಕ ಬೆಂಬಲ ನೀಡುವ ಸಲುವಾಗಿ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯನ್ನು ಜಾರಿಗೆ ತಂದಿದ್ದು ತಿಂಗಳಿಗೆ ಎರಡು ಸಾವಿರ ರೂಪಾಯಿ ಯನ್ನು ಮನೆಯ ಹಿರಿಯ ಮಹಿಳೆಯ ಖಾತೆಗೆ ಹಣ (Gruha Lakshmi Money) ಜಮೆ ಮಾಡುತ್ತಿದೆ. ಈಗಾಗಲೇ ಮಹಿಳೆಯರಿಗೆ ಆರು ಕಂತಿನ ವರೆಗೆ ಗೃಹಲಕ್ಷ್ಮಿ ಹಣವು ಜಮವಾಗಿದ್ದು, ಏಳನೇ ಮತ್ತು ಏಂಟನೇ ಕಂತಿನ ಹಣಕ್ಕಾಗಿ ಮಹಿಳೆಯರು ಕಾಯುತ್ತಿದ್ದಾರೆ.

advertisement

ಹಣ ಬಂದಿಲ್ಲವೇ? ಈ ಕೆಲಸ ಮಾಡಿ:

 

Image Source: News9Live

 

ಒಂದು ವೇಳೆ ನಿಮಗೆ ಹಣ ಬಾರದೇ ಇದ್ದಲ್ಲಿ ಎಲ್ಲ ಕಂತಿನ ಹಣ ಒಟ್ಟಿಗೆ ಜಮೆಯಾಗಲಿದ್ದು , ಹಣ ಬಂದಿಲ್ಲ ಎಂದಾದರೇ ನಿಮ್ಮ ಅರ್ಜಿ ಸ್ವೀಕೃತಿ ಬಗ್ಗೆ ಪರಿಶೀಲನೆ ಮಾಡಿಕೊಂಡು ಹಣ ಜಮೆಯಾಗದಿರಲು ಕಾರಣವೇನು ಎಂಬುದನ್ನು ತಿಳಿದುಕೊಳ್ಳಿ. ಒಂದು ವೇಳೆ ನಿಮ್ಮ ಆಧಾರ್ ಸಮಸ್ಯೆ ,ರೇಷನ್ ಕಾರ್ಡ್ (Ration Card) ಸಮಸ್ಯೆ ಆದಲ್ಲಿ ಇದನ್ನು ಆಪ್ಡೆಟ್ ಮಾಡಿ ಹೊಸದಾಗಿ ಅರ್ಜಿ ಸಲ್ಲಿಕೆ ಮಾಡಬಹುದು.ಇನ್ನು ಬ್ಯಾಂಕ್ ಖಾತೆ ಸಮಸ್ಯೆ ಇದ್ದಲ್ಲಿ ಹೊಸದಾಗಿ ಪೋಸ್ಟ್ ಆಫೀಸ್ (Post Office) ಮೂಲಕ ಖಾತೆ ತೆರೆದು ಮತ್ತೆ ಆಪ್ಲೈ ಮಾಡಬಹುದಾಗಿದೆ.

ಚೆಕ್ ಮಾಡುವ ವಿಧಾನ:

ಮೊದಲಿಗೆ‌ ನೀವು https://mahitikanaja.karnataka.gov.in/Gruhalakshmi ಈ ಲಿಂಕ್ ಗೆ ಭೇಟಿ ನೀಡಿ, ನಂತರ ನಿಮ್ಮ ರೇಷನ್ ಕಾರ್ಡ್ ನಂಬರನ್ನು ಹಾಕುವ ಮೂಲಕ ಸಬ್ ಮಿಟ್ ಕೊಟ್ಟು Detail’s ಮೇಲೆ ಕ್ಲಿಕ್ ಮಾಡಿ, ಇಲ್ಲಿ ಯಾವ ತಿಂಗಳಿನ ಹಣ ಜಮೆ ಯಾಗಿದೆ ಎಂಬುದರ ಬಗ್ಗೆ ಮಾಹಿತಿ ಸಿಗಲಿದೆ.ಇಲ್ಲದಿದ್ದಲ್ಲಿ ಡಿಬಿಟಿ ಕರ್ನಾಟಕ ಎಂಬ ಆ್ಯಪ್ ಡೌನ್ ಲೋಡ್ ಮಾಡುವ ಮೂಲಕ ಮುಖ್ಯಸ್ಥೆಯ ಆಧಾರ್ ಸಂಖ್ಯೆಯನ್ನು ಭರ್ತಿ ಮಾಡಬೇಕು. ನಂತರ ಮೊಬೈಲ್ ನಂಬರ್ ಗೆ ಒಂದು ಒಟಿಪಿ ಬರಲಿದ್ದು, ಆ ಒಟಿಪಿಯನ್ನು ನಮೂದು ಮಾಡುವ ಮೂಲಕ ಹಣ ಜಮೆ ಯಾಗಿರುವ ಬಗ್ಗೆ ಮಾಹಿತಿ ಪಡೆಯಬಹುದು.

advertisement

Leave A Reply

Your email address will not be published.