Karnataka Times
Trending Stories, Viral News, Gossips & Everything in Kannada

Ration Card: ಇಂತಹ ರೇಷನ್ ಕಾರ್ಡ್ ಡಿಲೀಟ್, ಎಲೆಕ್ಷನ್ ಗೂ ಮುನ್ನವೇ ಅಘಾತ ಕಾರಣವೇನು ಗೊತ್ತೇ?

advertisement

ಇಂದು ರೇಷನ್ ಕಾರ್ಡ್ ಬಳಕೆ ಬಗ್ಗೆ ಹೆಚ್ಚಿನ ಜನರ ಬೇಡಿಕೆ ಇದೆ. ಯಾಕಂದ್ರೆ ಸರಕಾರ ದಿಂದ ಪಡೆಯುವ ಎಲ್ಲ ಸೌಲಭ್ಯ ಗಳಿಗೂ ಈ ರೇಷನ್ ಕಾರ್ಡ್ (Ration Card) ಕಡ್ಡಾಯವಾಗಿ ಬೇಕು.‌ ಈಗಾಗಲೇ ರಾಜ್ಯ ಸರಕಾರ ನೀಡುತ್ತಿರುವ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ದಂತಹ ಗ್ಯಾರಂಟಿ ಯೋಜನೆಗಳಿಗೂ ಈ ಕಾರ್ಡ್ ಇದ್ದರೆ ಮಾತ್ರ ಸೌಲಭ್ಯ ಸಿಗಲಿದೆ. ಈ ಕಾರ್ಡ್ ಅನ್ನು ಆಹಾರ ಇಲಾಖೆಯು ನೀಡುತ್ತಿದ್ದು ಬಿಪಿಎಲ್, ಎಪಿಎಲ್, ಅಂತ್ಯೋದಯ ಎಂದು ಜನರ ಆದಾಯಕ್ಕೆ ಅನುಗುಣವಾಗಿ ವಿಂಗಡಣೆ ಮಾಡಿದೆ.‌ ಆದರೆ ಹೆಚ್ಚಿನ‌ ಜನರು ಈ‌ ಕಾರ್ಡ್ ಅನ್ನು ದುರುಪಯೋಗ ಮಾಡಿರುವ ಬಗ್ಗೆ ದೂರುಗಳು ಕೇಳಿ ಬಂದಿದೆ.

ಈ ಕಾರ್ಡ್ ರದ್ದು:

 

Image Source: DNA India

 

advertisement

  • ಈಗಾಗಲೇ ಕೆಲವೊಂದು ರೇಷನ್ ಕಾರ್ಡ್ (Ration Card) ಅನ್ನು ರದ್ದು ಮಾಡುವ ಬಗ್ಗೆ ಸರಕಾರ ಸೂಚನೆ ನೀಡಿದೆ. ಹಾಗಿದ್ದರೆ ಯಾರೆಲ್ಲ ರೇಷನ್ ಕಾರ್ಡ್ ರದ್ದು ಆಗಲಿದೆ ಎನ್ನುವ ಕುತೂಹಲ ನಿಮಗೆ ಇರಬಹುದು.
  • ಹೌದು ನಿಮ್ಮ ರೇಷನ್ ಕಾರ್ಡ್ ಗೆ ಇಕೆವೈಸಿ ಆಗದೇ ಇದ್ದಲ್ಲಿ ನಿಮ್ಮ ರೇಷನ್ ಕಾರ್ಡ್ ರದ್ದು ಮಾಡಲಾಗುವುದು.
  • ಅದೇ ರೀತಿ ರೇಷನ್ ಕಾರ್ಡ್ ನಲ್ಲಿ ಹೆಸರು ಇರುವ ಪ್ರತಿಯೊಬ್ಬರ ಆಧಾರ್ ಕಾರ್ಡ್ ಅನ್ನು ರೇಷನ್ ಕಾರ್ಡ್ ಗೆ ಲಿಂಕ್ ಮಾಡಿರಬೇಕು. ಮತ್ತು ಆಧಾರ್ ಕಾರ್ಡ್ (Aadhaar Card) ಆಪ್ಡೆಟ್ ಆಗಿರಬೇಕು.
  • ಅದೇ ರೀತಿ ನೀವು ಒಂದಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಗಳನ್ನು ಬಳಸಿಕೊಂಡಲ್ಲಿ‌‌ ಅವುಗಳನ್ನು ಕ್ಯಾನ್ಸಲ್ ಮಾಡಲಾಗುತ್ತೆ.
  • ಇನ್ನೂ ಕುಟುಂಬದಲ್ಲಿ ಆದಾಯ ತೆರಿಗೆ ಪಾವತಿ ಮಾಡುವವರು ಅಥವಾ, ಸರ್ಕಾರಿ ಉದ್ಯೋಗದಲ್ಲಿ ಇರುವರು ರೇಷನ್ ಕಾರ್ಡ್ ಹೊಂದಿದ್ದರೆ ಅಂತವರ ಕಾರ್ಡ್ ರದ್ದು ಆಗಲಿದೆ
  • ಅದೇ ರೀತಿ ರೇಷನ್‌ ಕಾರ್ಡ್‌(Ration Card) ಇದ್ದರೂ 6 ತಿಂಗಳಿಂದ ರೇಷನ್‌ ಪಡೆಯದವರ ಕಾರ್ಡ್‌ ಅನ್ನು ರದ್ದುಗೊಳಿಸಲು ಕೂಡ ಸರಕಾರ ತಿರ್ಮಾನ‌ ಮಾಡಿದೆ.‌ಕೇವಲ ಸರಕಾರ ದ ಸೌಲಭ್ಯ ಪಡೆಯಲು ಮಾತ್ರ ಈ ಕಾರ್ಡ್ ಉಪಯೋಗಿಸಿಕೊಂಡಲ್ಲಿ ನಿಮ್ಮ ಕಾರ್ಡ್ ರದ್ದು ಆಗಲಿದೆ.
  • ರದ್ದು ಪಟ್ಟಿ ತಿಳಿಯಲು‌ ಆಹಾರ ಇಲಾಖೆಯ ಲಿಂಕ್ ಗೆ ತೆರಳಿ https://ahara.kar.nic.in ಇಲ್ಲಿ ಸರ್ಚ್ ಮಾಡಿ ತಿಳಿಯಬಹುದಾಗಿದೆ.

ಹೊಸ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡುತ್ತೀರಾ?

ಅದೇ ರೀತಿ ಸರ್ಕಾರ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ಕೂಡ ನೀಡಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಮಾಡಿದ್ದ ಕಾರ್ಡ್ ಗಳನ್ನು ಪರಿಶೀಲನೆ ಮಾಡಿ, ಕಾರ್ಡ್ ವಿತರಣೆ ಮಾಡಲಾಗುತ್ತದೆ. ಏಪ್ರಿಲ್ 1 ರ ಬಳಿಕ ಮತ್ತೆ ಹೊಸ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಬಹುದು.

advertisement

Leave A Reply

Your email address will not be published.