Karnataka Times
Trending Stories, Viral News, Gossips & Everything in Kannada

Property: ಎಷ್ಟೇ ಕೋರ್ಟ್ ಗೆ ಅಲೆದಾಡಿದರೂ ಹೆಣ್ಣುಮಕ್ಕಳಿಗೆ ಇಂತಹ ಆಸ್ತಿಯಲ್ಲಿ ಪಾಲು ಸಿಗಲ್ಲ! ಹೊಸ ಆದೇಶ

advertisement

ಆಸ್ತಿಗಳಿಗೆ ಇಂದು ಎಷ್ಟು ಮೌಲ್ಯ ಇದೆ ji ಎಂಬುದು ನಿಮ್ಮೆಲ್ಲರಿಗೂ ತಿಳಿದೆ ಇದೆ. ಮನೆ, ಆಸ್ತಿ ಎಂದು ಬಂದರೆ ಅದಕ್ಕೆ ಸಂಬಂಧಿಸಿದಂತೆ ಸಮಾನವಾಗಿ ಪಾಲು ಪಡೆಯುವುದು ಕೂಡ ಸಾಮಾನ್ಯವಾಗಿ ಆಗೇ ಆಗುತ್ತದೆ. ಮನೆ ಆಸ್ತಿಯಲ್ಲಿ ಎಲ್ಲರಿಗೂ ಪಾಲು ಸಿಗಬೇಕೆಂದಿದ್ದರೂ ಕೆಲವೊಂದು ವಿಶೇಷ ಸಂದರ್ಭದಲ್ಲಿ ಅಧಿಕಾರ ಇಲ್ಲದೆ ಇರುವ ಸಾಧ್ಯತೆ ಸಹ ಇರುತ್ತದೆ. ಹಾಗಾದರೆ ಗಂಡನ ಮನೆ ವಾಸ್ತವ್ಯ ಹೊಂದಿರುವ ಮಹಿಳೆಗೆ ತವರು ಮನೆ ಆಸ್ತಿ ಸಿಗುತ್ತಾ? ಸಿಕ್ಕರೂ ಯಾವೆಲ್ಲ ಆಸ್ತಿ (Property) ಗೆ ಹಕ್ಕು ಸಿಗಬಹುದು ಎಂಬ ಇತ್ಯಾದಿ ಮಾಹಿತಿ ಇಲ್ಲಿದೆ.

ಸ್ವಯಾರ್ಜಿತ ಆಸ್ತಿ ಆಗಿದ್ದರೆ:

ಯಾವುದೆ ಆಸ್ತಿ (Property) ಯಾಗಿದ್ದರೂ ನಮಗೆ ಅದರಲ್ಲಿ ಹಕ್ಕು ಇದೆ ಅಥವಾ ಇಲ್ಲ ಎಂಬ ಬಗ್ಗೆ ಖಾತರಿ ಮಾಹಿತಿ ಹೊಂದಿರಬೇಕಾಗುತ್ತದೆ. ತಂದೆಯ ಸ್ವಯಾರ್ಜಿತ ಆಸ್ತಿ (Father’s Own Property) ಆಗಿದ್ದರೆ ತಂದೆ ತನ್ನ ಸ್ವ ಪರಿಶ್ರಮದಿಂದ ಮಾಡಿದ್ದ ಆಸ್ತಿ ಆಗಿದ್ದರೆ ತಂದೆ ಬದುಕಿರುವ ವರೆಗೆ ಯಾವುದೆ ಪಾಲು ಎನ್ನುವುದು ಇರಲಾರದು. ತಂದೆಗೆ ಬಂದ ಆಸ್ತಿಯಲ್ಲಿ ವಿಲ್ ಪರಿಶೀಲನೆ ಮಾಡಬೇಕು. ಸ್ವಯಾರ್ಜಿತ ಆಸ್ತಿ ಆಗಿದ್ದರೆ ಅದನ್ನು ಪ್ರಶ್ನಿಸುವ ಅಧಿಕಾರ ಇರುವುದಿಲ್ಲ. ವಿಲ್ ಮಾಡಿಸಿಟ್ಟ ಪ್ರಕಾರವೇ ಆಸ್ತಿ ಹಂಚಿಕೆ ಮಾಡಲಾಗುತ್ತದೆ.

ವಿಲ್ ಮಾಡಿಟ್ಟಿದ್ದರೆ ಏನಾಗುತ್ತದೆ?

 

Image Source: Mint

 

advertisement

ತಂದೆಯೂ ತನ್ನ ಸ್ವಯಾರ್ಜಿತ ಆಸ್ತಿಗೆ ಸಂಬಂಧ ಪಟ್ಟಂತೆ ಮೊದಲೇ ವಿಲ್ ಮಾಡಿಸಿ ಇಟ್ಟಿದ್ದರೆ ಅದರ ಪ್ರಕಾರವೇ ಮುಂದಿನ ಅಧಿಕಾರ ಸಿಗಲಿದೆ‌. ಆಸ್ತಿಯ ವಿಲ್ (Property Will) ನಲ್ಲಿ ತನ್ನ ನಂತರದ ಅಧಿಕಾರ ಯಾರಿಗೆ ಎಂಬುದು ತಿಳಿಸಿದ್ದರೆ ಅದರ ಪ್ರಕಾರವೇ ಆಸ್ತಿ (Property) ಹಂಚಿಕೆ ಅವರ ಮಗ, ಮೊಮ್ಮಗ, ಹೆಂಡತಿ, ಮಗಳು ಎಂದು ಅಧಿಕಾರ ಸಿಗಲಿದೆ.

ದಾನವಾಗಿ ನೀಡಿದರೆ:

ಗಿಫ್ಟ್ ರೂಪದಲ್ಲಿ ತಂದೆಗೆ ಆಸ್ತಿ (Property) ಸಿಕ್ಕರೆ ಅಂತಹ ಜಾಗಕ್ಕೂ ಕೂಡ ಯಾವುದೇ ಅಧಿಕಾರ ಇರುವುದಿಲ್ಲ. ಪಿತ್ರಾರ್ಜಿತ ಅಥವಾ ಸ್ವಯಾರ್ಜಿತ ಆಸ್ತಿಯಲ್ಲಿ ಹಕ್ಕು ಬಿಡುಗಡೆ ಮಾಡಿಕೊಟ್ಟಿದ್ದರೆ ಅಂತಹ ಸಂದರ್ಭದಲ್ಲಿ ಹಕ್ಕಿನ ಅಧಿಕಾರ ಮಗಳಿಗೆ ಸಿಗಲ್ಲ. ಸ್ವಯಾರ್ಜಿತ ಆಸ್ತಿಯನ್ನು ತಂದೆ ಯಾರಿಗಾದರೂ ದಾನವಾಗಿ ನೀಡಿದರೆ ಆಗ ಅಂತಹ ಆಸ್ತಿ ಮೇಲೆ ಕೂಡ ಮಗಳಿಗೆ ಪಾಲು ಕೇಳುವ ಅಧಿಕಾರ ಇರುವುದಿಲ್ಲ.

ಈ ನಿಯಮ ಇದೆ:

ಪಿತ್ರಾರ್ಜಿತ ಆಸ್ತಿಯಾಗಿದ್ದು ಡಿಸೆಂಬರ್ 2004ಕ್ಕೆ ಮೊದಲೇ ಆಸ್ತಿ ಭಾಗವಾಗಿದ್ದು ಗಂಡು ಮಕ್ಕಳಿಗೆ ಮಾತ್ರವೆ ಆಸ್ತಿ ಹಂಚಿದ್ದರೂ ಹೆಣ್ಣು ಮಕ್ಕಳಿಗೆ ಅಧಿಕಾರ ಕೇಳುವ ಹಕ್ಕು ಇರಲಾರದು. ಪಿತ್ರಾರ್ಜಿತ ಆಸ್ತಿಯಲ್ಲಿ ಮಹಿಳೆಗೂ ಸಮಾನವಾದ ಹಕ್ಕು ನೀಡಬೇಕು ಎಂಬ ಘೋಷಣೆ ಆಗಿದ್ದು 2005 ರಿಂದ ಆಗಿದ್ದು ಅದಕ್ಕೂ ಮುನ್ನ ಆದ ಕ್ರಯ ಮಾರಾಟ, ಹಂಚಿಕೆ ಕೇಳುವ ಯಾವ ಅಧಿಕಾರವು ಮಹಿಳೆಗೆ ಸಿಗಲಾರದು.

advertisement

Leave A Reply

Your email address will not be published.