Karnataka Times
Trending Stories, Viral News, Gossips & Everything in Kannada

Raitha Siri Yojana: 1 ಎಕರೆವರೆಗೆ ಭೂಮಿ ಇರುವ ಯಾರೇ ಇದ್ದರೂ ಸಿಹಿಸುದ್ದಿ! ರಾಜ್ಯ ಸರ್ಕಾರದ ಘೋಷಣೆ

advertisement

ರೈತರು ಈ ದೇಶದ ಪ್ರಮುಖ ಅಂಗ. ಹಾಗಾಗಿ ಕೃಷಿಯಲ್ಲಿ ಅಭಿವೃದ್ಧಿಯಾದ್ರೆ ಮಾತ್ರ ದೇಶವೂ ಅಭಿವೃದ್ಧಿಯಾದಂತೆ. ಹಾಗಾಗಿ ಸರಕಾರ ಕೂಡ ರಾಜ್ಯದ ರೈತರಿಗೆ ಹೆಚ್ಚಿನ ಒತ್ತು ನೀಡುತ್ತ ಬಂದಿದೆ. ಈ ಭಾರಿ ಮಳೆಯ ಅಭಾವ ಕೂಡ ಉಂಟಾಗಿದ್ದು ನೀರಿಲ್ಲದೆ ರೈತರು ಹೆಚ್ಚಿನ ನಷ್ಟವನ್ನು ಅನುಭವಿಸಿದ್ದಾರೆ. ಇದಕ್ಕಾಗಿ ಸರಕಾರ ಕೂಡ ಬೆಳೆ ನಷ್ಟ ಪರಿಹಾರ ಕೂಡ ಒದಗಿಸುತ್ತಿದೆ. ಅದೇ ರೀತಿ ಕೃಷಿಯತ್ತ ಯುವಕರಿಗೂ ಕೂಡ ಒಲವು ತೋರಿಸಲು ಕಡಿಮೆ ಬಡ್ಡಿಯಲ್ಲಿ ಸಾಲ (Loan) ಸೌಲಭ್ಯ, ಕೃಷಿಯ ಬಗ್ಗೆ ಮಾಹಿತಿ, ಕೃಷಿ ತರಬೇತಿ, ಇತ್ಯಾದಿಗಳನ್ನು ಸರಕಾರ ಹಮ್ಮಿಕೊಳ್ಳುತ್ತಿದೆ.‌ ಹೀಗಾಗಿ ಹೆಚ್ಚಿನ ಯುವಕರು ಕೂಡ ಕೃಷಿಯತ್ತ ಒಲವು ತೋರಿಸಿದ್ದಾರೆ.

Raitha Siri Yojana:

 

Image Source: IndiaFilings

 

ರಾಜ್ಯದಲ್ಲಿ ಸಿರಿಧಾನ್ಯ ಪ್ರದೇಶ ವಿಸ್ತರಣೆ ಹಾಗೂ ಉತ್ಪಾದನೆ ಹೆಚ್ಚಳಮಾಡಲು ಈ ಯೋಜನೆ (Raitha Siri Yojana) ಯನ್ನು ಜಾರಿಗೆ ತರಲಾಗಿದೆ. ರೈತಸಿರಿ ಯೋಜನೆಯ ಮೂಲಕ ರೈತರಿಗೆ ಕೃಷಿ ಸಾಮಗ್ರಿ, ಖರೀದಿ ಮಾಡಲು ಅರ್ಥಿಕ ಬೆಂಬಲ ನೀಡುತ್ತಿದೆ.‌ ಅಂದರೆ ಕೃಷಿಗೆ ಬೇಕಾದ ಬೀಜ ಹಾಗೂ ಗೊಬ್ಬರಗಳನ್ನು ಕೊಂಡುಕೊಳ್ಳುವ ನಿಟ್ಟಿನಲ್ಲಿ ರೈತ ಸಿರಿ ಯೋಜನೆ (Raitha Siri Yojana) ಯ ಮೂಲಕ ರೈತರ ಖಾತೆಗೆ ನೇರವಾಗಿ 10,000 ಜಮಾ ಮಾಡುತ್ತದೆ. ಪ್ರತಿ ಫಲಾನುಭವಿ ರೈತರಿಗೆ ಗರಿಷ್ಠ 2 ಹೆಕ್ಟೇರ್‌ಗೆ ಮಾತ್ರ ಸೀಮಿತವಾಗುವಂತೆ ಪ್ರೋತ್ಸಾಹಧನ ವಿತರಣೆ ಮಾಡುವ ಮೂಲಕ ಆರ್ಥಿಕ ಸಹಾಯ ಮಾಡುತ್ತದೆ.

ಸಿರಿ ಧಾನ್ಯ ಗಳ ಜಾಗೃತಿ:

advertisement

ಇಂದು ಕೃಷಿ ಇಲಾಖೆಯಿಂದ ಸಿರಿಧಾನ್ಯ ಬಳಕೆಯ ಕುರಿತು ಜಾಗೃತಿ ಮೂಡಿಸಲು ಸಿರಿಧಾನ್ಯಗಳ ಜಾಗೃತಿಯ ಬಗ್ಗೆ ತರಬೇತಿ ಸಹ ನೀಡಲಾಗುತ್ತದೆ‌. ರೈತರಿಗೆ ಸಿರಿ ಧಾನ್ಯ ಗಳತ್ತ ಒಲವು ಮೂಡಿಸಲು ಅದರ ಬೆಳೆ ರಕ್ಷಣೆ ಹೇಗೆ, ಹಂತಗಳು ಯಾವುದು ಎಂಬ ಬಗ್ಗೆ ತರಬೇತಿ,ಇನ್ನೂ ಅತೀ ಕಡಿಮೆ ಮಳೆ ಇರುವ ಪ್ರದೇಶದಲ್ಲಿ, ಶುಷ್ಕ, ಒಣ ಸ್ಥಿತಿಯಲ್ಲಿ ಕಡಿಮೆ ಫಲವತ್ತತೆ ಇರುವ ಮಣ್ಣಿನಲ್ಲೂ ಸಹ ಬೆಳೆಯುವ ಬಗ್ಗೆ ಮಾಹಿತಿ ನೀಡಲಾಗುತ್ತಿದೆ‌.

ಹಣ ಜಮೆ:

ಈ ಯೋಜನೆಗೆ ರೈತರಿಗೆ ಪ್ರತಿ ಹೆಕ್ಟೇರ್‌ಗೆ ರೂ 10,000 ದಂತೆ ಪ್ರೋತ್ಸಾಹ ಧನವನ್ನು 2 ಕಂತುಗಳಲ್ಲಿ ನೇರ ನಗದು ವರ್ಗಾವಣೆ ಮೂಲಕ ನೀಡಲಾಗುತ್ತದೆ. ಅಂದರೆ ಮೊದಲ ಕಂತಿನಲ್ಲಿ ರೂ 6,000 ಮತ್ತು 2ನೇ ಕಂತಿನಲ್ಲಿ ರೂ 4,000 ಹಣ ‌ ಖಾತೆಗೆ ಜಮೆ ಮಾಡಲಿದೆ.

ಅರ್ಜಿ ಸಲ್ಲಿಕೆ ಮಾಡಲು ಈ ದಾಖಲೆ ಕಡ್ಡಾಯವಾಗಿ ಬೇಕು:

  • Aadhaar Card
  • Ration card
  • Land records
  • Vehicle letter
  • Address certificate
  •  Income certificate
  • Bank account details
  • Photo etc

advertisement

Leave A Reply

Your email address will not be published.