Karnataka Times
Trending Stories, Viral News, Gossips & Everything in Kannada

Post Office: ಕೇವಲ 1500 ರೂ ಹೂಡಿಕೆ ಮೂಲಕ 35 ಲಕ್ಷ ರೂ ಗಳಿಸುವ ಪೋಸ್ಟ್ ಆಫೀಸಿನ ಹೊಸ ಸ್ಕೀಮ್!

advertisement

ಇಂದು ಪ್ರತಿಯೊಬ್ಬರಿಗೂ ಭವಿಷ್ಯದ ಬಗ್ಗೆ ಚಿಂತೆ ಇದ್ದೇ ಇರುತ್ತದೆ. ಕಷ್ಟಕಾಲದ ಸಮಯಕ್ಕೆ ಹಣ ಹೂಡಿಕೆ ಮಾಡಬೇಕು ಎಂದು ಖರ್ಚು ವೆಚ್ಚ ಕಡಿಮೆ ಮಾಡಿ, ದುಡಿಯುವ ಮೊತ್ತದಲ್ಲಿ ಒಂದಷ್ಟನ್ನು ಉಳಿಸುವುದು ಕೂಡ ಹೆಚ್ಚಿನ ಜನರ ಪ್ಲಾನಿಂಗ್ ಆಗಿರುತ್ತದೆ. ಇಂದು ಹೂಡಿಕೆ ಅಂತ ಬಂದಾಗ ಹೆಚ್ಚಿನ ಜನರು ಬ್ಯಾಂಕ್ (Bank), ಎಲ್ ಐ ಸಿ (LIC), ಪೊಸ್ಟ್‌ ಆಫೀಸ್‌ (Post Office) ಇತ್ಯಾದಿ ಗಳಲ್ಲಿ ಹೂಡಿಕೆ ಮಾಡುತ್ತಾರೆ. ‌ಅಂದ್ರೆ ಸುರಕ್ಷತೆ ಅಂತ ಬಂದಾಗ ಹೂಡಿಕೆಗೆ ಹೆಚ್ಚಿನ ಆದ್ಯತೆ ತೋರುವುದು ಪೋಸ್ಟ್ ಆಫೀಸ್ ಹೂಡಿಕೆಗೆ. ಇಂದು‌ ಇಲ್ಲಿ ಹೂಡಿಕೆ ಮಾಡಲು ನಾನಾ ರೀತಿಯ ಅವಕಾಶ ಇರಲಿದ್ದು ಮಧ್ಯಮ ವರ್ಗದವರು ಕೂಡ ಇಲ್ಲಿ ಹೂಡಿಕೆ ಮಾಡಲು ಅವಕಾಶ ಇದೆ.

ಗ್ರಾಮ‌ ಸುರಕ್ಷ ಯೋಜನೆ

ಗ್ರಾಮೀಣ ಜನರನ್ನು ಅಭಿವೃದ್ಧಿ ಪಡಿಸಲು, ಅವರ ಹೂಡಿಕೆಗೂ ಆಧ್ಯತೆಯನ್ನು ನೀಡಲು ಪೊಸ್ಟ್ ಆಫೀಸ್ (Post Office) ಹಲವು ರೀತಿಯ ಯೋಜನೆಯನ್ನು ರೂಪಿಸಿದೆ. ಈಗ ತನ್ನ ಗ್ರಾಮೀಣ ಕಾರ್ಯಕ್ರಮದ ಮೂಲಕ ಗ್ರಾಮ ಸುರಕ್ಷಾ ಯೋಜನೆಯನ್ನು ಪ್ರಾರಂಭ ಮಾಡಿದೆ. ಈ ಯೋಜನೆಯಲ್ಲಿ ಕಡಿಮೆ ಹೂಡಿಕೆ ಮಾಡಿ‌ ಹೆಚ್ಚಿನ‌ ಲಾಭವನ್ನು ಗಳಿಸಬಹುದಾಗಿದೆ

Image Source: Jagran English

advertisement

ಇಷ್ಟು ಹೂಡಿಕೆ ಮಾಡಿ

ಈ ಯೋಜನೆಯ ಮೂಲಕ ತಿಂಗಳಿಗೆ ರೂ.1,500 ಠೇವಣಿ ಮಾಡಿದ್ರೆ ಸಾಕು, ಹೂಡಿಕೆದಾರರು ಹೆಚ್ಚಿನ ಮೊತ್ತದ ಲಾಭವನ್ನು ಪಡೆಯಬಹುದು. ಕೇವಲ 1,500 ಹೂಡಿಕೆ ಮಾಡಿದ್ರೆ ರೂ. 35 ಲಕ್ಷ ರೂ.ವರೆಗೆ ರಿಟರ್ನ್ ಪಡೆಯಬಹುದು. ಹೌದು 19 ನೇ ವಯಸ್ಸಿನಲ್ಲಿ ಗ್ರಾಮ ಸುರಕ್ಷಾ ಪಾಲಿಸಿಯಲ್ಲಿ 10 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ಮಾಸಿಕ ಪ್ರೀಮಿಯಂ 55 ವರ್ಷಕ್ಕೆ 1,515 ರೂ. ಆಗಲಿದ್ದು, 58 ವರ್ಷಕ್ಕೆ 1,463 ರೂ ಮತ್ತು 55 ವರ್ಷಗಳ ವಿಮೆಗೆ ಮೆಚ್ಯೂರಿಟಿ ಲಾಭ ರೂ. 31.60 ಲಕ್ಷ ಆಗಿರಲಿದ್ದು, 58 ವರ್ಷಗಳ ಪಾಲಿಸಿಗೆ ರೂ. 33.40 ಲಕ್ಷ ಆಗಲಿದೆ.‌ 60 ವರ್ಷಗಳಲ್ಲಿ ನಿಮಗೆ ಮೆಚುರಿಟಿ ಲಾಭ ರೂ.34.6 ಸಿಗಲಿದ್ದು ವೃದ್ಧಾಪ್ಯದಲ್ಲಿ ಈ ಹಣ ಹೆಚ್ಚಿನ ಜನರ ಬಳಕೆಗೆ ಬರಬಹುದು.

ಈ ನಿಯಮ ಇದೆ

ಈ ಯೋಜನೆಯ ಸೌಲಭ್ಯ ಪಡೆಯಬೇಕಿದ್ರೆ ಕನಿಷ್ಠ ವಯಸ್ಸು 19 ವರ್ಷ ಹಾಗೂ ಗರಿಷ್ಠ ವಯೋಮಿತಿ 55 ವರ್ಷ ಆಗಿರಬೇಕು.‌ ಆದರೆ ನೀವು ಪ್ರತಿ ತಿಂಗಳು 1500ರೂ. ಕಟ್ಟುವುದು ಕಡ್ಡಾಯ ವಾಗಿ ಇರುತ್ತದೆ. ನೀವು ಎಂಡೋಮೆಂಟ್ ಪಾಲಿಸಿಗೆ ಪ್ರೀಮಿಯಂ ಅನ್ನು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕವಾಗಿ ಪಾವತಿ ಮಾಡಲು ಅವಕಾಶ ಇದೆ.

advertisement

Leave A Reply

Your email address will not be published.