Karnataka Times
Trending Stories, Viral News, Gossips & Everything in Kannada

Fixed Deposit: ಇಲ್ಲಿ ಸಿಗುತ್ತಿದೆ 1 ಲಕ್ಷ FD ಗೆ ಸಿಗಲಿದೆ 26 ಸಾವಿರ ರೂ ಬಡ್ಡಿ, ಮುಗಿಬಿದ್ದ ಜನರು

advertisement

ಜೀವನದಲ್ಲಿ ಮುಂದಿನ ಭವಿಷ್ಯ ಹೇಗಿರಬಹುದು ಎಂಬ ಚಿಂತೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಅದಕ್ಕಾಗಿ ಅನೇಕ ಯೋಜನೆಗಳಿಗೆ ಹಣಕಾಸಿನ ಹೂಡಿಕೆ ಮಾಡಿ ಭವಿಷ್ಯವನ್ನು ಭದ್ರವಾಗಿಸಲು ಮುಂದಾಗುತ್ತೇವೆ. ಈಗಂತೂ ಹಣಕಾಸಿನ ಹೂಡಿಕೆಯಲ್ಲಿ ಬ್ಯಾಂಕ್, ಪೋಸ್ಟ್ ಆಫೀಸ್ (Post Office) , ಸಂಘ ಸಂಸ್ಥೆ, ಸಹಕಾರಿ ಸಂಘ ಎಂಬ ಅನೇಕ ಆಯ್ಕೆ ಇದ್ದು ಯಾವುದರಲ್ಲಿ ಹೂಡಿಕೆ ಮಾಡುವುದು ಎಂಬುದೇ ಅನುಮಾನ ಮೂಡುವಂತಾಗುವುದು. ಹಾಗಾಗಿ ಬ್ಯಾಂಕ್ ಹೂಡಿಕೆ ಮಾಡುವಾಗಲೂ ಕೆಲವು ಅಗತ್ಯ ವಿಚಾರದ ಬಗ್ಗೆ ತಿಳಿಯುವುದು ಸಹ ಅವಶ್ಯಕವಾಗಿದೆ.

ಭವಿಷ್ಯದಲ್ಲಿ ಆರ್ಥಿಕ ಸಮಸ್ಯೆ ಕಾಡಬಾರದು ಎಂಬ ಉದ್ದೇಶಕ್ಕೆ ಅಧಿಕ ಲಾಭದ ನಿರೀಕ್ಷೆಯಲ್ಲಿ ನಂಬಿಕೆಗೆ ಅನರ್ಹವಾದ ಅನಾಮದೇಯ ವ್ಯವಸ್ಥೆಗೆ ಹೂಡಿಕೆ ಮಾಡುವುದು ತುಂಬಾ ಅಪಾಯಕಾರಿ ಆಗಿದೆ. ಹಾಗಾಗಿ ಬ್ಯಾಂಕ್ ಹಾಗೂ ಅಂಚೆ ಕಚೇರಿ ವ್ಯವಸ್ಥೆ ಹೂಡಿಕೆ ವಿಚಾರದಲ್ಲಿ ದಿ ಬೆಸ್ಟ್ ಎನಿಸುತ್ತದೆ. ಬ್ಯಾಂಕ್ ನಲ್ಲಿ ಉತ್ತಮ ಯೋಜನೆಗೆ ಹೂಡಿಕೆ ಮಾಡುವುದು ಉತ್ತಮವಾಗಿದ್ದು ಅನಗತ್ಯ ಖರ್ಚುಗಳಿಗೆ ಇದು ಕಡಿವಾಣ ಹಾಕಲಿದೆ. ಅದರಲ್ಲೂ ಸಾಮಾನ್ಯ ನಾಗರಿಕರಿಗಿಂತಲೂ ಹಿರಿಯ ನಾಗರಿಕರಿಗೆ ಸಿಗುವ ಸೇವಾ ಸೌಲಭ್ಯ ಉತ್ತಮವಾಗಿದ್ದು ಬಡ್ಡಿದರ ಕೂಡ ಅಧಿಕ ಸಿಗಲಿದೆ.

ಯಾವುದು ಉತ್ತಮ:

 

advertisement

 

  • ಹಿರಿಯ ನಾಗರಿಕರು ಹೂಡಿಕೆ ಮಾಡಲು ಬ್ಯಾಂಕಿನ ಬಡ್ಡಿದರ ಒಂದೊಂದು ಬ್ಯಾಂಕ್ ನಲ್ಲಿ ಒಂದೊಂದು ವಿಧವಾಗಿ ಇರಲಿದೆ.
  • ಆ್ಯಕ್ಸಿಸ್ ಬ್ಯಾಂಕ್ (Axis Bank) ನಲ್ಲಿ ಹಿರಿಯ ನಾಗರಿಕರು ಮೂರುವರ್ಷದ ಅವಧಿಗೆ ಠೇವಣಿ ಮಾಡಿದರೆ 7.60% ಬಡ್ಡಿದರ ನೀಡಲಾಗುವುದು. 1 ಲಕ್ಷ ಹಣವನ್ನು Fixed Deposit ಮಾಡಿ ಮೂರು ವರ್ಷ ಇಟ್ಟರೆ 1.25ಲಕ್ಷ ರೂಪಾಯಿ ಪಡೆಯಬಹುದು.ಅಂದರೆ ಹೆಚ್ಚುವರಿಯಾಗಿ ಮೂರು ವರ್ಷದ ಅವಧಿಗೆ 25ಸಾವಿರ ರೂಪಾಯಿ ಬಡ್ಡಿದರ ಸಿಗಲಿದೆ.
  • ಇಂಡಿಯನ್ ಬ್ಯಾಂಕ್ (Indian Bank) ನಲ್ಲಿ ಹಿರಿಯ ನಾಗರಿಕರು ಮೂರುವರ್ಷದ ಅವಧಿಗೆ ಠೇವಣಿ ಮಾಡಿದರೆ 6.8% ಬಡ್ಡಿದರ ನೀಡಲಾಗುವುದು. 1 ಲಕ್ಷ ಹಣವನ್ನು FD ಮಾಡಿ ಮೂರು ವರ್ಷ ಇಟ್ಟರೆ 1.22ಲಕ್ಷ ರೂಪಾಯಿ ಪಡೆಯಬಹುದು.ಅಂದರೆ ಹೆಚ್ಚುವರಿಯಾಗಿ ಮೂರು ವರ್ಷದ ಅವಧಿಗೆ 22 ಸಾವಿರ ರೂಪಾಯಿ ಬಡ್ಡಿದರ ಸಿಗಲಿದೆ.
  • ಬ್ಯಾಂಕ್ ಆಫ್ ಬರೋಡಾ (Bank of Baroda) ದಲ್ಲಿ ಹಿರಿಯ ನಾಗರಿಕರು ಮೂರುವರ್ಷದ ಅವಧಿಗೆ ಠೇವಣಿ ಮಾಡಿದರೆ 7.75% ಬಡ್ಡಿದರ ನೀಡಲಾಗುವುದು. 1 ಲಕ್ಷ ಹಣವನ್ನು FD ಮಾಡಿ ಮೂರು ವರ್ಷ ಇಟ್ಟರೆ 1.26ಲಕ್ಷ ರೂಪಾಯಿ ಪಡೆಯಬಹುದು.ಅಂದರೆ ಹೆಚ್ಚುವರಿಯಾಗಿ ಮೂರು ವರ್ಷದ ಅವಧಿಗೆ 26ಸಾವಿರ ರೂಪಾಯಿ ಬಡ್ಡಿದರ ಸಿಗಲಿದೆ.
  • ಬ್ಯಾಂಕ್ ಆಫ್ ಇಂಡಿಯಾ (Bank of India) ದಲ್ಲಿ ಹಿರಿಯ ನಾಗರಿಕರು ಮೂರುವರ್ಷದ ಅವಧಿಗೆ ಠೇವಣಿ ಮಾಡಿದರೆ 7% ಬಡ್ಡಿದರ ನೀಡಲಾಗುವುದು. 1 ಲಕ್ಷ ಹಣವನ್ನು FD ಮಾಡಿ ಮೂರು ವರ್ಷ ಇಟ್ಟರೆ 1.23ಲಕ್ಷ ರೂಪಾಯಿ ಪಡೆಯಬಹುದು. ಅಂದರೆ ಹೆಚ್ಚುವರಿಯಾಗಿ ಮೂರು ವರ್ಷದ ಅವಧಿಗೆ 23ಸಾವಿರ ರೂಪಾಯಿ ಬಡ್ಡಿದರ ಸಿಗಲಿದೆ.

ಒಟ್ಟಾರೆಯಾಗಿ ಬಡ್ಡಿದರವು ಬ್ಯಾಂಕ್ ನಿಂದ ಬ್ಯಾಂಕ್ ಗೆ ವ್ಯತ್ಯಾಸಾತ್ಮಕವಾಗಿದ್ದು ನಿಮ್ಮ ಹೂಡಿಕೆಯ ಮಿತಿ ಹಾಗೂ ಎಷ್ಟು ವರ್ಷದ ಅವಧಿ ಎಂಬ ಮೇಲೆ ನಿಮ್ಮ ಬಡ್ಡಿ ನಿಮಗೆ ಅಧಿಕಾ ಅಥವಾ ಕಡಿಮೆ ಎಂಬುದು ನಿರ್ಧಾರ ವಾಗಲಿದೆ. ಹಾಗಿದ್ದರೂ ಮೇಲೆ ತಿಳಿಸಿದ್ದ ಬ್ಯಾಂಕ್ ಸಾಲಿನಲ್ಲಿ ಬ್ಯಾಂಕ್ ಆಫ್ ಬರೋಡಾ ಹಿರಿಯ ನಾಗರಿಕರ ಉಳಿತಾಯ ಯೋಜನೆಗೆ ಅತ್ಯಧಿಕ ಬಡ್ಡಿ ದರ ನೀಡುವ ಬ್ಯಾಂಕ್ ಆಗಿದೆ ಎಂದು ಈ ಮೂಲಕ ಹೇಳ ಬಹುದು.

advertisement

Leave A Reply

Your email address will not be published.