Karnataka Times
Trending Stories, Viral News, Gossips & Everything in Kannada

Axis Bank: ಆಕ್ಸಿಸ್ ಬ್ಯಾಂಕ್ ಗೆ 90 ಲಕ್ಷ ದಂಡ ವಿಧಿಸಿದ RBI! ನೆಕ್ಸ್ಟ್ ಯಾವ ಬ್ಯಾಂಕ್ ಗೊತ್ತಾ?

advertisement

ನೀವು ಕೂಡ ಆಕ್ಸಿಸ್ ಬ್ಯಾಂಕ್ (Axis Bank) ನಲ್ಲಿ ಖಾತೆ ಹೊಂದಿದ್ದೀರಾ ಹಾಗಾದ್ರೆ ಈ ಮಾಹಿತಿಯನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ ಎಷ್ಟೋ ಬಾರಿ ನಾವು ಬ್ಯಾಂಕುಗಳಲ್ಲಿ ವ್ಯವಹಾರ ಮಾಡುತ್ತೇವೆ ಆದರೆ ಬ್ಯಾಂಕ್ ಕೂಡ ಕೇಂದ್ರ ಬ್ಯಾಂಕ್ ನ ಕೆಲವು ನಿಯಮಗಳನ್ನು ಮೀರಿ ವಹಿವಾಟು ಮಾಡುತ್ತದೆ ಇಂತಹ ಸಂದರ್ಭದಲ್ಲಿ ಆರ್ ಬಿ ಐ (RBI) ಅಂತಹ ಬ್ಯಾಂಕ್ ಗಳಿಗೆ ಭಾರಿ ಪ್ರಮಾಣದ ದಂಡ ವಿಧಿಸುತ್ತದೆ ಅಷ್ಟೇ ಅಲ್ಲದೆ ಎಷ್ಟೋ ಬ್ಯಾಂಕ್ ಗಳು ತಮ್ಮ ಹಣಕಾಸು ವಹಿವಾಟಿನ ಪರವಾನಿಗೆ ಕಳೆದುಕೊಳ್ಳುವ ಪರಿಸ್ಥಿತಿ ಕೂಡ ಎದುರಾಗಬಹುದು.

ಆಕ್ಸಿಸ್ ಬ್ಯಾಂಕ್ ಗೆ ಭಾರಿ ಪ್ರಮಾಣದ ದಂಡ ವಿಧಿಸಿದ ಆರ್ ಬಿ ಐ!

ಭಾರತೀಯ ರಿಸರ್ವ್ ಬ್ಯಾಂಕ್ (RBI), ದೇಶದ ಅತಿ ದೊಡ್ಡ ಖಾಸಗಿ ವಲಯದ ಬ್ಯಾಂಕ್ ಆಗಿರುವ ಆಕ್ಸಿಸ್ ಬ್ಯಾಂಕ್ (Axis Bank) ಮೇಲೆ ಕಠಿಣ ಕ್ರಮ ಕೈಗೊಂಡಿದೆ. ಈಗಾಗಲೇ 90.92 ಲಕ್ಷ ರೂಪಾಯಿಗಳನ್ನು ಆಕ್ಸಿಸ್ ಬ್ಯಾಂಕ್ ದಂಡವಾಗಿ ಆರ್ ಬಿ ಐ ಗೆ ಪಾವತಿ ಮಾಡಬೇಕು ಎಂದು ತಿಳಿಸಲಾಗಿದೆ.

ಆಕ್ಸಿಸ್ ಬ್ಯಾಂಕ್ ಗೆ ದಂಡ ವಿಧಿಸಲು ಕಾರಣ!

advertisement

ರಿಸರ್ವ್ ಬ್ಯಾಂಕ್ (RBI) ಈಗಾಗಲೇ ನೀಡಿರುವ ಮಾಹಿತಿಯ ಪ್ರಕಾರ ಗ್ರಾಹಕರು ಕೆ ವೈ ಸಿ (KYC) ಮಾಡಿಸಿಕೊಳ್ಳಬೇಕು ಎನ್ನುವ ನಿಯಮದ ಬಗ್ಗೆ ಆಕ್ಸಿಸ್ ಬ್ಯಾಂಕ್ ಹೆಚ್ಚು ಜಾಗೃತಿಯನ್ನು ವಹಿಸಿಲ್ಲ. ಅದೆಷ್ಟೋ ಗ್ರಾಹಕರ ಬ್ಯಾಂಕ್ ಖಾತೆಗೆ ಕೆವೈಸಿ ಆಗಿಲ್ಲ. ಗ್ರಾಹಕರ ಗುರುತು ವಿಳಾಸ ಮೊದಲಾದ ದಾಖಲೆಗಳನ್ನು ನಿರ್ವಹಿಸುವಲ್ಲಿ ಆಕ್ಸಿಸ್ ಬ್ಯಾಂಕ್ (Axis Bank) ವಿಫಲವಾಗಿದೆ. ಅಷ್ಟೇ ಅಲ್ಲದೆ ಸಂಬಂಧಪಟ್ಟ 2016ರ ಮಾರ್ಗಸೂಚಿಗಳನ್ನು ಕೂಡ ಈ ಬ್ಯಾಂಕ್ ಅನುಸರಿಸಿದೆ ಇರುವ ಕಾರಣದಿಂದ 90.92 ಲಕ್ಷ ರೂಪಾಯಿ ದಂಡ ತೆರಬೇಕಾಗಿದೆ.

ರಿಕವರಿ ಏಜೆಂಟ್ ಗಳ ಸಮಸ್ಯೆ!

ಸಾಮಾನ್ಯವಾಗಿ ಬ್ಯಾಂಕುಗಳು ಸಾಲಗಾರರಿಂದ ಸಾಲ ವಸೂಲಾತಿಗಾಗಿ ತಾವೇ ಸ್ವತಹ ಹೋಗದೆ ರಿಕವರಿ ಏಜೆಂಟ್ ಗಳನ್ನು ನೇಮಿಸಿಕೊಳ್ಳುತ್ತಾರೆ ಇದಕ್ಕಾಗಿ ಕೆಲವು ಏಜೆನ್ಸಿ ಗಳು ಕೂಡ ಕಾರ್ಯ ನಿರ್ವಹಿಸುತ್ತವೆ. ಆದರೆ ಆಕ್ಸಿಸ್ ಬ್ಯಾಂಕ್ (Axis Bank) ನಲ್ಲಿ ರಿಕವರಿ ಏಜೆಂಟ್ ಗಳು (Recovery Agents) ಸಾಲ ಮರುಪಾವತಿ ಮಾಡಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಗ್ರಾಹಕರಿಂದ ಸಾಲ (Loan) ಹಿಂಪಡಿದುಕೊಳ್ಳುವ ವಿಚಾರದಲ್ಲಿ ಸರಿಯಾಗಿ ವರ್ತಿಸದೆ ಇರುವುದನ್ನು ಆರ್ ಬಿಐ ಪರಿಗಣಿಸಿದ್ದು ಈ ಕಾರಣಕ್ಕೂ ಕೂಡ ಆಕ್ಸಿಸ್ ಬ್ಯಾಂಕ್ ಮೇಲೆ ದಂಡ ವಿಧಿಸಲಾಗಿದೆ. ಆಕ್ಸಿಸ್ ಬ್ಯಾಂಕ್ ತನ್ನ ಈ ಎಲ್ಲಾ ತಪ್ಪುಗಳಿಗೂ ಕೂಡ ಸಬೂತು ನೀಡಲು ಪ್ರಯತ್ನಿಸಿತು ಆದರೆ ಇದು ಯಾವುದರಿಂದಲೂ ಆರ್‌ಬಿಐ ಸಮಾಧಾನಗೊಂಡಿಲ್ಲ ಆರ್ ಬಿ ಐ ಆಕ್ಸಿಸ್ ಬ್ಯಾಂಕ್ ಗೆ ದೊಡ್ಡ ಮೊತ್ತ ದಂಡವನ್ನು ವಿಧಿಸಿದೆ.

ಮಣಪ್ಪುರಂ ಫೈನಾನ್ಸ್ ಗೆ (Manappuram Finance) ದಂಡ

ಕೇವಲ ಆಕ್ಸಿಸ್ ಬ್ಯಾಂಕ್ ಮಾತ್ರವಲ್ಲ ಮಣಪ್ಪುರಂ ಫೈನಾನ್ಸ್ ಮೇಲು ಕೂಡ ಆರ್ ಬಿ ಐ ಕೊಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ಬ್ಯಾಂಕಿಂಗ್ ವಲಯಕ್ಕೆ ಸೇರದ ಹಣಕಾಸು ಕಂಪನಿ, ನಾನ್ ಡೆಪಾಸಿಟ್ ಟೇಕಿಂಗ್ ಕಂಪನಿ, ಠೇವಣಿ ತೆಗೆದುಕೊಳ್ಳುವ ಕಂಪನಿ ಮೊದಲ ಆರ್ ಬಿ ಐ ನ 2016ರ ನಿಯಮಗಳ ಉಲ್ಲಂಘನೆಯನ್ನು ಮಾಡಿರುವುದರಿಂದ ಅಂತಹ ಫೈನಾನ್ಸ್ ಬ್ಯಾಂಕ್ ಗಳಿಗೂ ಕೂಡ ದಂಡ ವಿಧಿಸಲಾಗಿದೆ. ಮಣಪ್ಪುರಂ ಫೈನಾನ್ಸ್ 42.78 ಲಕ್ಷ ರೂಪಾಯಿಗಳನ್ನು ಆರ್ ಬಿ ಐ ಗೆ ದುಂಡವಾಗಿ ಪಾವತಿ ಮಾಡಬೇಕು. ಇನ್ನು ಸದ್ಯದಲ್ಲಿಯೇ ಕೇಂದ್ರ ಬ್ಯಾಂಕ್ ನಿಯಮ ಉಲ್ಲಂಘನೆ ಮಾಡಿರುವ ಹಾಗೂ ನಿಯಮ ಪಾಲನೆ ಮಾಡದೆ ಇರುವ ಜೊತೆಗೆ ಗ್ರಾಹಕರಿಗೂ ಕೂಡ ಅನುಕೂಲಕರವಾಗಿ ಇಲ್ಲದೆ ಇರುವ ದೊಡ್ಡ ದೊಡ್ಡ ಬ್ಯಾಂಕುಗಳಿಗೂ ಕೂಡ ಆರ್‌ಬಿಐ ದೊಡ್ಡ ಮೊತ್ತದ ದಂಡ ವಿಧಿಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

advertisement

Leave A Reply

Your email address will not be published.