Karnataka Times
Trending Stories, Viral News, Gossips & Everything in Kannada

UPI ID: ಡಿಸೆಂಬರ್ 31ರ ಒಳಗೆ ಈ ಕೆಲಸ ಮಾಡದೆ ಇದ್ರೆ ನಿಮ್ಮ UPI ಐಡಿ ಬ್ಲಾಕ್ ಆಗುತ್ತೆ- NPCI ಆದೇಶ!

advertisement

ಎನ್ ಪಿ ಸಿ ಐ (National Payment Corporation of India) UPI ಮೂಲಕ ಪೇಮೆಂಟ್ ಮಾಡುವವರಿಗೆ ಮಹತ್ವದ ಆದೇಶ ಒಂದನ್ನು ಹೊರಡಿಸಿದೆ. ನೀವು ಕೆಲವೇ ದಿನಗಳಲ್ಲಿ ಇದೊಂದು ಕೆಲಸ ಮಾಡುವುದನ್ನು ಮಿಸ್ ಮಾಡಿದ್ರೆ ನಿಮ್ಮ ಯುಪಿಐ ಐಡಿ (UPI ID) ಕ್ಲೋಸ್ ಆಗಬಹುದು. ಇದರಿಂದಾಗಿ ನೀವು ಯುಪಿಐ (UPI) ಬಳಸಿ ಯಾವುದೇ ರೀತಿಯ ಪೇಮೆಂಟ್ ಮಾಡಲು ಕೂಡ ಸಾಧ್ಯವಿಲ್ಲ!

ಇವತ್ತಿನ ದಿನದಲ್ಲಿ ಯಾರು ಕೂಡ ಬ್ಯಾಂಕ್ ಗೆ ಹೋಗಿ ಸರತಿ ಸಾಲಿನಲ್ಲಿ ನಿಂತು ಬ್ಯಾಂಕಿಂಗ್ ವ್ಯವಹಾರವನ್ನ ಮಾಡುವುದಿಲ್ಲ. ಒಂದು ಸಣ್ಣ ಪೇಮೆಂಟ್ ಗಾಗಿಯೂ ಕೂಡ ಈಗ ಮೊದಲಿನಂತೆ ಬ್ಯಾಂಕ್ ವರೆಗೆ ಧಾವಿಸುವ ಅಗತ್ಯವಿಲ್ಲ. ಕೇವಲ ಕೈಯಲ್ಲಿ ಒಂದು ಸ್ಮಾರ್ಟ್ ಫೋನ್ ಇದ್ರೆ ಸಾಕು ಯುಪಿಐ ಪೇಮೆಂಟ್ (UPI Payment) ಮಾಡಿಕೊಳ್ಳಬಹುದು. ಯುಪಿಐ ಪೇಮೆಂಟ್ ಮಾಡಲು ಬೇರೆ ಬೇರೆ ರೀತಿಯ ಅಪ್ಲಿಕೇಶನ್ಗಳು ಕೂಡ ಲಭ್ಯವಿದ್ದು ಅದರ ಮೂಲಕ ಕ್ಷಣಮಾತ್ರದಲ್ಲಿ ಯಾವುದೇ ರೀತಿಯ ಪೇಮೆಂಟ್ ಮಾಡಬಹುದು.

ನಿಷ್ಕ್ರಿಯಗೊಳ್ಳಲಿದೆ ಯುಪಿಐ ಐಡಿ!

ಸಾಮಾನ್ಯವಾಗಿ ಯುಪಿಐ ಪೇಮೆಂಟ್ ಮಾಡಲು ಗೂಗಲ್ ಪೇ (Google Pay) or ಫೋನ್ ಪೇ (PhonePe) ಅಂತಹ ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳನ್ನು (Third Party Apps) ಬಳಸುತ್ತೇವೆ. ಆದರೆ ಈ ಅಪ್ಲಿಕೇಶನ್ ಗಳು ಈಗ ಒಂದು ವರ್ಷಕ್ಕೂ ಹೆಚ್ಚು ಕಾಲ ವಹಿವಾಟು ನಡೆಸದೇ ಇರುವಂತಹ ಯುಪಿಐಯನ್ನು ನಿಷ್ಕ್ರಿಯಗೊಳಿಸಲು ಮುಂದಾಗಿವೆ. ಎನ್ ಪಿ ಸಿ ಐ (NPCI) ಎಲ್ಲಾ ಬ್ಯಾಂಕ್ ಗಳಿಗೂ ಹಾಗೂ ಇಂತಹ ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳಿಗೂ ಸೂಚನೆ ನೀಡಿದ್ದು ಈ ವರ್ಷದ ಅಂತ್ಯದ ವೇಳೆಗೆ ಯಾವುದೇ ವಹಿವಾಟು ನಡೆಸದೆ ಇರುವ ಯುಪಿಐ ಐಡಿಯನ್ನು ಮುಚ್ಚಲು ಸೂಚಿಸಿದೆ.

advertisement

ಹೊಸ ವರ್ಷದಿಂದ ನಿಮ್ಮ ಯುಪಿಐ ಡಿ ಬ್ಲಾಕ್ ಆಗಬಹುದು!

ಎನ್ ಪಿ ಸಿ ಐ (NPCI) ಮಾರ್ಗಸೂಚಿಯ ಪ್ರಕಾರ ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಯನ್ನು ಪೇಮೆಂಟ್ ಅಪ್ಲಿಕೇಶನ್ ಅಥವಾ ಪಿ ಎಸ್ ಪಿ ಬ್ಯಾಂಕ್ (PSP Bank) ಗಳ ಜೊತೆಗೆ ಕನೆಕ್ಟ್ ಮಾಡಿಕೊಂಡಿರುತ್ತವೆ. ಇದನ್ನು ಬ್ಯಾಂಕ್ ಪರಿಶೀಲನೆ ಮಾಡುತ್ತೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಕ್ರೆಡಿಟ್ ಅಥವಾ ಡೆಬಿಟ್ ಮಾಡದೆ ಇರುವ ಯುಪಿಐ ಅಡ್ರೆಸ್ ಅನ್ನು ಕಂಡು ಹಿಡಿದು ಅಂತಹ ಐಡಿ ನಿಷ್ಕ್ರಿಯಗೊಳಿಸಲಾಗುತ್ತಿದೆ. ಹೊಸ ವರ್ಷದಿಂದ ಯುಪಿಐ ಐಡಿ (UPI ID) ಮೂಲಕ ಯಾವುದೇ ರೀತಿಯ ವಹಿವಾಟು ನಡೆಸಲು ಸಾಧ್ಯವಿಲ್ಲ ಎಂದು ಎನ್ ಪಿಸಿಐ ತಿಳಿಸಿದೆ.

ಡಿಸೆಂಬರ್ 31ರ ವರೆಗೆ ಮಾತ್ರ ಕಾಲಾವಕಾಶ!

ಒಂದು ವರ್ಷಗಳಿಂದ ಯಾರು ಯುಪಿಐ ಐಡಿ ಬಳಸಿ ಹಣಕಾಸಿನ ವಹಿವಾಟು ಮಾಡಿಲ್ಲವೋ ಅಂತವರ ಐಡಿ ನಿಷ್ಕ್ರಿಯಗೊಳಿಸಲು ಬ್ಯಾಂಕ್ ಹಾಗೂ ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳಿಗೆ ಎನ್‌ಪಿಸಿಐ ಡಿಸೆಂಬರ್ 31ರವರೆಗೆ ಸಮಯ ಅವಕಾಶ ನೀಡಿದೆ. ಅಷ್ಟರಲ್ಲಿ ಬಳಕೆಯಾಗದೆ ಇರುವ ಯುಪಿಐ ಐಡಿ ಗುರುತಿಸಿ ಅದನ್ನು ನಿಷ್ಕ್ರಿಯಗೊಳಿಸಬೇಕು. ನೀವು ಯಾವ ಬ್ಯಾಂಕ್ ನಲ್ಲಿ ಖಾತೆ ಹೊಂದಿರುತ್ತೀರೋ ಆ ಬ್ಯಾಂಕ್ ನಿಂದ ಇಮೇಲ್ ಅಥವಾ ಸಂದೇಶದ ಮೂಲಕ ನಿಮ್ಮ ಐಡಿ ಇನ್ನು ಮುಂದೆ ಕಾರ್ಯನಿರ್ವಹಿಸುವುದಿಲ್ಲ ಎಂಬುದು ತಿಳಿಯುತ್ತದೆ.

ಈ ರೀತಿ ಬಳಕೆ ಆಗದೆ ಇರುವ ಯುಪಿಐ ಐಡಿ (UPI ID) ನಿಷ್ಕ್ರಿಯಗೊಳಿಸುವುದರಿಂದ ತಪ್ಪಾಗಿ ಬೇರೆಯವರ ಖಾತೆಗೆ ಹಣ ಹೋಗುವುದನ್ನ ತಪ್ಪಿಸಬಹುದು ಎಂದು ಎನ್ ಪಿಸಿಐ (NPCI) ತಿಳಿಸಿದೆ. ಯಾಕೆಂದರೆ ಇಲ್ಲಿಯವರೆಗೆ ಇಂತಹ ಪ್ರಕರಣಗಳು ಸಾಕಷ್ಟು ಬೆಳಕಿಗೆ ಬಂದಿದ್ದು ಹಲವರು ಹಣ ಕಳೆದುಕೊಳ್ಳುವ ಪರಿಸ್ಥಿತಿ ಕೂಡ ಎದುರಾಗಿದೆ. ಹಾಗಾಗಿ NPCI ನ ಮಾರ್ಗಸೂಚಿಯಂತೆ ತಕ್ಷಣವೇ ಬಳಕೆ ಆಗದೆ ಇರುವ ಯುಪಿಐ ಐಡಿಯನ್ನು ನಿಷ್ಕ್ರಿಯಗೊಳಿಸಲಾಗುವುದು.

advertisement

Leave A Reply

Your email address will not be published.