Eye Test: ಎಳೆ ಮಗುವಿಗೆ 30 ದಿನದೊಳಗೆ ಕಣ್ಣಿನ ತಪಾಸಣೆ ಅಗತ್ಯ, ಯಾಕೆ ಗೊತ್ತಾ?

advertisement
ಈ ಜಗತ್ತು ಇಷ್ಟು ಸುಂದರವಾಗಿದೆ ಎಂದು ತಿಳಿಯುವುದೇ ನಮ್ಮ ಕಣ್ಣಿನಿಂದ. ಕಣ್ಣು ಮನುಷ್ಯದ ದೇಹದ ಸೂಕ್ಷ್ಮ ಮತ್ತು ಅತೀ ಅಗತ್ಯ ಭಾಗಗಳಲ್ಲಿ ಒಂದಾಗಿದೆ. ಆದರೆ ಇದರ ಆರೈಕೆ ನಾವು ಮಾಡುತ್ತಿದ್ದೇವೆಯಾ ಎಂಬ ಪ್ರಶ್ನೆ ಕೇಳಿ ಕೊಳ್ಳುವುದು ಸಹ ಅತ್ಯಗತ್ಯ. ಮೊಬೈಲ್, ಕಂಪ್ಯೂಟರ್, ಟ್ಯಾಬ್ ಇನ್ನಿತರ ತಂತ್ರಜ್ಞಾನ ಕಣ್ಣಿನ ಆರೋಗ್ಯ ಹಾನಿ ಮಾಡುತ್ತಿದೆ. ಕಣ್ಣಿನ ಆರೋಗ್ಯ ಉತ್ತಮವಾಗಿರಬೇಕಾದರೆ ಕೆಲ ಅಗತ್ಯ ಆಹಾರ ಕ್ರಮ ಸಹ ಅನುಸರಿಸಲೇ ಬೇಕು.
ಚಿಕ್ಕ ವಯಸ್ಸಿಗೆ ಕಣ್ಣಿನ ಸಮಸ್ಯೆ
ಇತ್ತೀಚಿನ ದಿನದಲ್ಲಿ ಕಣ್ಣಿನ ಸಮಸ್ಯೆ ಎಂಬುದು ಸಾರ್ವತ್ರಿಕ ಎಂಬಂತಾಗಿದೆ. ಕಣ್ಣಿನ ಸಮಸ್ಯೆ ಹಿಂದೆಲ್ಲ ವಯಸ್ಸಾದವರಲ್ಲಿ ಕಾಡುವ ಪ್ರಮಾಣ ಅಧಿಕ ಇತ್ತು ಆದರೆ ಈಗ ಚಿಕ್ಕ ಪುಟ್ಟ ಮಕ್ಕಳಿಗೂ ಕಣ್ಣಿನ ಸಮಸ್ಯೆ ಎದುರಾಗುತ್ತಿದೆ. ಹೀಗಾಗಿ ಚಿಕ್ಕ ವಯಸ್ಸಿಗೆಲ್ಲ ಕನ್ನಡಕ, ಲೆನ್ಸ್ ಎಂದು ಜನ ಮೊರೆ ಹೋಗುತ್ತಿದ್ದಾರೆ. ಕಣ್ಣು ಆರೋಗ್ಯ ಪೂರ್ಣ ಅಥವಾ ಇಲ್ಲ ಎಂದು ತಿಳಿಯಲು ಆಗಾಗ ದೃಷ್ಟಿ ತಪಾಸಣೆ ಮಾಡಿಸುತ್ತಿರಬೇಕು. ಇಲ್ಲವಾದರೆ ಮಕ್ಕಳಿಗೆ ದೃಷ್ಟಿ ಸಮಸ್ಯೆ ಕಾಡುವ ಪ್ರಮಾಣ ಅಧಿಕವಾಗಲಿದೆ.
ಯಾವಾಗ ಟೆಸ್ಟ್ ಮಾಡಿಸಬೇಕು
advertisement
ಚಿಕ್ಕ ಮಕ್ಕಳು ಕ್ರಿಯಾಶೀಲರಾಗಿದ್ದು ಕಾರ್ಯ ಚಟುವಟಿಕೆಯಲ್ಲಿ ತೊಡಗುವವರ ಪ್ರಮಾಣ ಕೂಡ ಗಣನೀಯವಾಗಿ ಏರುತ್ತಲೇ ಇರುವುದು. ಮಗು ಹುಟ್ಟಿದ್ದ ಒಂದು ವರ್ಷ, ಮೂರು ವರ್ಷ ಮತ್ತು ಐದು ವರ್ಷಕ್ಕೆಲ್ಲ ಕಣ್ಣಿನ ಸಾಮಾನ್ಯ ತಪಾಸಣೆ ಮಾಡಿಸುವುದು ಅತ್ಯಗತ್ಯ. ಯಾಕೆಂದರೆ ಚಿಕ್ಕ ವಯಸ್ಸಿಗೆ ಈ ಸಮಸ್ಯೆ ಬಂದರೆ ಅದಕ್ಕೆ ಅನೇಕ ಹೆರಿಡೆಟ್ರಿ ಸಮಸ್ಯೆ ಕೂಡ ಇರಬಹುದು. ಹಾಗಾಗಿ ಮಕ್ಕಳ ಕಣ್ಣಿನ ಆರೋಗ್ಯ ಸ್ಥಿತಿ ತಿಳಿಯುವುದು ಪೋಷಕರ ಕರ್ತವ್ಯ ಎಂದರೂ ತಪ್ಪಾಗದು.
ಈ ಕಾರಣಕ್ಕೆ ಚಿಕ್ಕ ಮಗುವಿಗೆ ತಪಾಸಣೆ ಆಗಲಿದೆ
ಅವಧಿಗೆ ಮುನ್ನ ಜನಿಸಿದ ಮಗು ಹಾಗೂ ಅಂಗವಿಕಲ ಮಕ್ಕಳ ಕಣ್ಣು ಸಾಮಾನ್ಯವಾಗಿ ತಪಾಸಣೆ ಮಾಡಲಾಗುತ್ತದೆ. ಮಗು ಆಟಾಡುವುದು ಹಾಗೂ ಕುತೂಹಲದಿಂದ ಎಲ್ಲದನ್ನು ನೋಡುವ ಕಾರಣ ಕಣ್ಣು ಉಜ್ಜಿಕೊಳ್ಳುವುದು ಮಗುವಿನ ಹವ್ಯಾಸಭಾಗದಲ್ಲಿ ಒಂದಾಗಿದೆ. ಕೆಲ ಮಕ್ಕಳ ಕಣ್ಣು ಹುಟ್ಟುತ್ತಲೆ ಕ್ರಾಸ್ ಆಗಿ ಇರುವುದು, ಇಂತಹ ಮಕ್ಕಳ ದೃಷ್ಟಿ ಸ್ಥಿತಿ ತಿಳಿಯುವುದು ಅತ್ಯಗತ್ಯ.
ತಿಂಗಳೊಳಗೆ ತಪಾಸಣೆ ಮಾಡಿ
ಅದೇ ರೀತಿ ನೀವು ಮಗುವನ್ನು ಆಟ ಆಡಿಸುವಾಗ ನಕ್ಕರೆ ಅದಕ್ಕೆ ಪ್ರತಿಕ್ರಿಯೆ ನೀಡುವುದು ನಿಮ್ಮ ಮುಖ ನೋಡಿ ನಗುವುದು ಇದೆಲ್ಲ ಮಗು ಮಾಡದೆ ಎಲ್ಲೊ ನೋಡುತ್ತಿದ್ದರೆ ಮಗುವಿಗೆ ನೀವು ಸರಿಯಾಗಿ ಕಾಣುತ್ತಿಲ್ಲ ಎಂದು ಅರ್ಥ. ಮೆಲ್ಲಗಣ್ಣು ಇದ್ದಂತೆ ಎನಿಸಿದಾಗಲೂ 29 ದಿನದೊಳಗೆ ಅಥವಾ ಒಂದು ತಿಂಗಳ ಒಳಗೆ ಮಗುವಿನ ಕಣ್ಣಿನ ತಪಾಸಣೆ ಮಾಡಿಸುವುದು ಅತ್ಯಗತ್ಯ. ಅದೇ ರೀತಿ ಕೆಲವೊಂದು ಬಾರಿ ಎಳೆ ಮಗುವಿನ ಕಣ್ಣು ಕೆಂಪಾಗಿರುವುದು, ಹೆಚ್ಚುಕಾಲ ಮುಚ್ಚಿರುವಂತೆ ಕಂಡುಬರುವುದು ಇತರ ಸಮಸ್ಯೆ ಇದ್ದರೆ ಅದು ಕೂಡ ಒಂದು ಸಮಸ್ಯೆ ಎಂದು ಹೇಳಬಹುದು. ಹಾಗಾಗಿ ಚಿಕ್ಕ ಮಗುವಿನಿಂದಲೇ ಕಣ್ಣಿನ ಆರೈಕೆ ಮಾಡಿದರೆ ಮುಂದಾಗುವ ಅನೇಕ ಸಮಸ್ಯೆಯನ್ನು ಪ್ರಾರಂಭಿಕ ಹಂತದಲ್ಲಿ ತಡೆದಂತಾಗುವುದು.
Advertisement