Karnataka Times
Trending Stories, Viral News, Gossips & Everything in Kannada

Gruha Lakshmi Scheme: ಗೃಹಲಕ್ಷ್ಮೀ ಹಣ ವಿಳಂಬದ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಂದ ಸ್ಪಷ್ಟನೆ

advertisement

ಸ್ತ್ರೀ ಶಕ್ತಿ ಸಬಲೀಕರಣಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಧಿಕ ಒತ್ತು ನೀಡುತ್ತಿದ್ದು ಚುನಾವಣೆ ಪೂರ್ವದಲ್ಲಿ ಕೊಟ್ಟ ಭರವಸೆ ಹೆಚ್ಚಿನದ್ದು ಮಹಿಳೆಯರ ಪರವಾಗೇ ಇದೆ ಎಂದರೂ ತಪ್ಪಾಗದು. ಮಹಿಳೆಯರು ಈ ದೇಶದ ಶಕ್ತಿ ಎಂಬುದನ್ನು ಅರಿತ ಸರಕಾರ ಮಹಿಳೆಯರಿಗೆ ಒತ್ತು ನೀಡುವುದನ್ನು ಸಹ ಕಾಣುತ್ತೇವೆ. ರಾಜ್ಯದಲ್ಲಿ ಗೃಹಲಕ್ಷ್ಮೀ, ಶಕ್ತಿ ಯೋಜನೆ ಎಲ್ಲ ಇದಕ್ಕೆ ಪುಷ್ಟಿ ನೀಡುವಂತೆ ಇದೆ. ಆದರೆ ಗೃಹಲಕ್ಷ್ಮೀ ಹಣ (Gruha Lakshmi Money) ಎಲ್ಲರಿಗೂ ಬರದೇ ಇದ್ದು ಅನೇಕ ನಾರಿಯರು ಸರಕಾರ ವಿರುದ್ಧ ತಮ್ಮ ಧ್ವನಿ ಎತ್ತಿದ್ದಾರೆ. ಹಾಗಾಗಿ ಜನರಲ್ಲಿ ಈ ಬಗ್ಗೆ ಉಂಟಾದ ಗೊಂದಲ ನಿವಾರಣೆ ಸರಕಾರ ಕೂಡ ಮುಂದಾಗಿದೆ.

ಹಣ ಬರದಿದ್ದಕ್ಕೆ ಟೀಕೆ

ಗೃಹಲಕ್ಷ್ಮೀ ಯೋಜನೆ (Gruha Lakshmi Scheme) ಮೂಲಕ ರಾಜ್ಯದ ಅನೇಕ ಭಾಗದ ಮಹಿಳೆಯರಿಗೆ ಸರಕಾರದಿಂದ ಉಚಿತವಾಗಿ ಎರಡು ಸಾವಿರ ರೂಪಾಯಿ ಲಭ್ಯವಾಗುತ್ತಿದ್ದು ಇದು ಮಹಿಳೆಯರ ಆರ್ಥಿಕ ಸ್ಥಿತಿ ಉತ್ತಮತೆಗೆ ಪ್ರೋತ್ಸಾಹ ದೊರಕಿಸಿದಂತಾಗಿದೆ. ವಿಧವಾ ವೇತನ, ಅಂಗವಿಕಲ ವೇತನ ಸಿಗುವ ಜೊತೆಗೆ ಇದು ಕೂಡ ಸಿಗುವ ಕಾರಣ ಮಹಿಳೆಯರಂತು ತುಂಬಾ ಖುಷಿಯಾಗಿದ್ದಾರೆ. ಆದರೆ ಮನೆ ಯಜಮಾನಿಗೆ ಎರಡು ಸಾವಿರ ಮೊತ್ತ ನೀಡ್ತೇವೆ ಎಂದ ಸರಕಾರದ ಯೋಜನೆ ಇನ್ನು ಕೂಡ ಅನೇಕ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ತಮಗೆ ಗೃಹಲಕ್ಷ್ಮೀ ಯೋಜನೆ ಹಣ ಬರದ ಕುರಿತು ಅನೇಕ ಮಹಿಳೆಯರು ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡುತ್ತಿದ್ದಾರೆ. ಹಾಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈಗ ಈ ಹಣ ಯಾಕೆ ಬರುತ್ತಿಲ್ಲ ಎಂಬ ಸತ್ಯ ಹೊರಹಾಕಿದ್ದಾರೆ.

ಸರಳ, ಸುಲಭ ವಿಧಾನ ಜಾರಿ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾದ ಲಕ್ಷ್ಮೀ ಹೆಬ್ಬಾಳ್ಕರ್  (Lakshmi Hebbalkar)ಅವರು ಇತ್ತೀಚೆಗೆ ಧಾರವಾಡದಲ್ಲಿ ನಡೆದ ಕಾರ್ಯಕ್ರಮ ಒಂದನ್ನು ಉದ್ದೇಶಿಸಿ ಮಾತನಾಡುವಾಗ ಈ ಬಗ್ಗೆ ಅವರು ತಿಳಿಸಿದ್ದಾರೆ. ಗೃಹಲಕ್ಷ್ಮೀ ಯೋಜನೆ  (Gruha Lakshmi Scheme) ಅಡಿಯಲ್ಲಿ ಹಣ ಕೆಲವರಿಗೆ ಇಂದಿಗೂ ಬಂದಿಲ್ಲ. ಈ ಬಗ್ಗೆ ಅನೇಕ ಮಹಿಳೆಯರಿಗೆ ಗೊಂದಲವಾಗಿದ್ದು ಗೃಹಲಕ್ಷ್ಮೀ ಯೋಜನೆಯನ್ನು ಸುಲಭ ಮತ್ತು ಸರಳವಾಗಿ ಜಾರಿಗೆ ತರಲಾಗುವುದು.

advertisement

ಈ ಕಾರಣಕ್ಕೆ ವಿಳಂಬ

ಗೃಹಲಕ್ಷ್ಮೀ ಯೋಜನೆ ( Gruha lakshmi Scheme)  ಮೂಲಕ 1.9. ಕೋಟಿ ಮಹಿಳೆಯರಿಗೆ ಹಣ ತಲುಪಿದೆ. ಈಗಾಗಲೇ ಎರಡು ಕಂತಿನ ಹಣ ಕೂಡ ಲಭ್ಯ ಆಗಿದೆ ಆದರೆ 6ಲಕ್ಷ ದಷ್ಟು ಮಹಿಳೆಯರಿಗೆ ಇನ್ನು ಕೂಡ ಹಣ ಬಂದಿಲ್ಲ.ವಿಳಂಬ ಕಾರಣಗಳನ್ನು ಮನಗಂಡು ಅದನ್ನು ಪರಿಹರಿಸಿ ಅರ್ಹರಿಗೆ ಗೃಹಲಕ್ಷ್ಮೀ ನೀಡೆ ನೀಡ್ತೇವೆ. ಕೆಲವರು ಯೋಜನೆಗೆ ಅನುದಾನ ಖಾಲಿ ಆಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಅನುದಾನ ಇದೆ ಕೆಲವೆಡೆ ಬ್ಯಾಂಕ್ ಲಿಂಕ್ , ದಾಖಲೆ ಮತ್ತು ತಾಂತ್ರಿಕ ದೋಷಗಳು ಕಂಡು ಬಂದಿದೆ‌. ಈ ಕಾರಣದಿಂದಾಗಿ ಹಣ ಬರುವುದು ವಿಳಂಬವಾಗಿದೆ ಎಂದು ಅವರು ಹೇಳಿದ್ದಾರೆ.

ಖಡಕ್ ಎಚ್ಚರಿಕೆ

ಸರಕಾರದಲ್ಲಿ ಅನುದಾನ ಇಲ್ಲ ಹಾಗಾಗಿ ಹಣ ಹಾಕುತ್ತಿಲ್ಲ ಎಂದು ಕೆಲ ವಿಪಕ್ಷಗಳು ಮತ್ತು ಕಾಂಗ್ರೆಸ್ ಪಕ್ಷ ವಿರೋಧಿಗಳು ಬೇಕಾ ಬಿಟ್ಟಿ ಹೇಳಿಕೆ ನೀಡುತ್ತಿದ್ದಾರೆ. ಅನುದಾನ ಇದಕ್ಕಾಗಿಯೇ ಮೀಸಲಿಟ್ಟಿದ್ದೇವೆ ಈ ಬಗ್ಗೆ ಜನಸಾಮಾನ್ಯರು ಚಿಂತಿಸುವ ಅಗತ್ಯ ಇಲ್ಲ. ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಬೆನ್ನ ಹಿಂದೆ ದೂರುವುದಲ್ಲ ನಮ್ಮ ಕಾರ್ಯ ಸಾಧನೆ ಮೂಲಕ ತೋರಿಸಬೇಕು ಹಿಂದಿನ ಪಕ್ಷ ಅನೇಕ ಅಭಿವೃದ್ಧಿ ಯೋಜನೆ ಮಾಡ್ತೇವೆ ಎಂದು ಘೋಷಿಸಿ ಟೆಂಡರ್ ಕರೆದಿದ್ದಷ್ಟೇ ಮುಂದಿನ ಕಾರ್ಯ ಮಾಡಲೇ ಇಲ್ಲ ಹೀಗಿರುವಾಗ ನಮ್ಮ ಕಾರ್ಯ ಚಟುವಟಿಕೆಗೆ ಕೊಂಕು ನುಡಿಯುವುದು ಅಷ್ಟು ಸಮಂಜಸವಲ್ಲ ಎಂದು ಖಡಕ್ ಎಚ್ಚರಿಕೆಯನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ನೀಡಿದ್ದಾರೆ‌. ನಮ್ಮ ಸರಕಾರ ನುಡಿದಂತೆ ನಡೆಯುತ್ತಿದೆ ಈ ಬಗ್ಗೆ ಜನರು ಗೊಂದಲಗೊಳ್ಳುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.

advertisement

Leave A Reply

Your email address will not be published.