Karnataka Times
Trending Stories, Viral News, Gossips & Everything in Kannada

Best SUV: ಭಾರತದಲ್ಲಿ ಅತಿ ಹೆಚ್ಚು ಬೇಡಿಕೆ ಇರುವ Top 3 SUV ಕಾರುಗಳು.

advertisement

ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯು ವಿಸ್ತಾರವಾಗಿ ವೈವಿಧ್ಯಮಯವಾಗಿ ಬೆಳೆದು ನಿಂತಿದೆ. ಮೊದಲೆಲ್ಲ ಕೆಲವೇ ಕಾರ್ ಬ್ರಾಂಡ್ ಹೊಂದಿದ್ದ ಭಾರತದಲ್ಲಿ ಐಷಾರಾಮಿ ಕಾರ್ ಬ್ರಾಂಡ್‌ಗಳು ಈಗ ಸಾಮಾನ್ಯವಾಗಿ ನಮ್ಮ ಸುತ್ತಲೂ ಕಂಡುಬರುತ್ತವೆ. ಅಕ್ಟೋಬರ್ 2023 ರಲ್ಲಿ, ಮಾರುತಿ ಸುಜುಕಿ ಕಂಪನಿಯ ಎರ್ಟಿಗಾ 7 ಸೀಟರ್ ವಾಹನ ಭಾರತದಲ್ಲಿ ಹಲವರ ಮನಗೆದ್ದಿದೆ. ಈ ವಾಹನವು ಮಾರಾಟದಲ್ಲಿ ಮೊದಲ ಸ್ಥಾನದಲ್ಲಿದೆ, ಈ ವಾಹನವು ಮಹೀಂದ್ರಾ ಮತ್ತು ಟೊಯೋಟಾ ವಾಹನಗಳಿಗೆ ಕಠಿಣ ಸ್ಪರ್ಧೆಯನ್ನು ನೀಡಿದೆ

ಮಾರುತಿ ಸುಜುಕಿ ಎರ್ಟಿಗಾ (Maruti Ertiga) – 14,209 ಯುನಿಟ್‌ಗಳು ಮಾರಾಟವಾಗಿವೆ.

ಭಾರತದಲ್ಲಿನ ರೋಡ್ ಗಳಿಗೆ ಉತ್ತಮವು ಹಾಗೂ ಕಡಿಮೆ ಖರ್ಚು ಹೊಂದಿದ್ದು ಆರಾಮದಾಯಕವಾದ ಪ್ರಯಾಣ ನೀಡುವಲ್ಲಿ ಮೊದಲ ಸ್ಥಾನದಲ್ಲಿದ್ದು ಮಾರುತಿ ಸುಜುಕಿ ಕಂಪನಿಯ ಎರ್ಟಿಗಾ ವಾಹನ. ಈ 7 ಆಸನಗಳ ಫ್ಯಾಮಿಲಿ ಕಾರು ಕಳೆದ ತಿಂಗಳು ಅಕ್ಟೋಬರ್ 2023 ರಲ್ಲಿ ಉತ್ತಮವಾಗಿ ಮಾರಾಟವಾಗಿದೆ, ಏಕೆಂದರೆ ಇದರಲ್ಲಿ ಸುಧಾರಿತ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಕಳೆದ ತಿಂಗಳು ಈ ವಾಹನದ ಒಟ್ಟು 14,209 ಯುನಿಟ್‌ಗಳು ಮಾರಾಟವಾಗಿವೆ.

ಮಹೀಂದ್ರ ಸ್ಕಾರ್ಪಿಯೊ (Mahindra Scorpio) – 13,578 ಯುನಿಟ್‌ಗಳು ಮಾರಾಟವಾಗಿವೆ

advertisement

ಮಹೀಂದ್ರಾ ಕಂಪನಿಯ ಪ್ರಸಿದ್ಧ ಸ್ಕಾರ್ಪಿಯೋ ಕಾರು ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಅಕ್ಟೋಬರ್ 2023 ರಲ್ಲಿ ಒಟ್ಟು 13,578 ಯುನಿಟ್‌ಗಳು ಮಾರಾಟವಾಗಿವೆ ಮತ್ತು ನಾವು ಅದನ್ನು ಅಕ್ಟೋಬರ್ 2022 ರ ತಿಂಗಳಿಗೆ ಹೋಲಿಸಿದರೆ, ಈ ವಾಹನದ ಒಟ್ಟು 7,438 ಯುನಿಟ್‌ಗಳು ಅಕ್ಟೋಬರ್ 2022 ರಲ್ಲಿ ಮಾರಾಟವಾಗಿದೆ.ಅಂದರೆ, ವರ್ಷದಿಂದ ವರ್ಷಕ್ಕೆ ಮಾರಾಟ ಹೆಚ್ಚಳವಾಗಿದೆ. ಮುಂಬರುವ ದಿನಗಳಲ್ಲಿ ಇದು ಇನ್ನಷ್ಟು ಮಾರಾಟವಾಗುವ ಸಂಭವವಿದೆ. ಸುರಕ್ಷತೆ ಹಾಗೂ ಕ್ಷಮತೆ ವಿಚಾರದಲ್ಲಿ ಹೇಳಿ ಮಾಡಿಸಿದ ಕಾರ್ ಇದು.

ಮಹೀಂದ್ರ ಬೊಲೆರೊ (Mahindra Bolero) – 9,647 ಯುನಿಟ್‌ಗಳು ಮಾರಾಟವಾಗಿವೆ.

ಇದು ಜನರ ಮನಗೆದ್ದ ಎರಡನೇ ಮಹೀಂದ್ರಾ ಕಂಪನಿಯ ವಾಹನವಾಗಿದೆ. ಅಕ್ಟೋಬರ್ 2023 ರಲ್ಲಿ ಒಟ್ಟು 9,647 ಯುನಿಟ್ ಮಹೀಂದ್ರ ಬೊಲೆರೊಗಳು ಮಾರಾಟವಾಗಿವೆ ಮತ್ತು ಈ ವಾಹನದ ಒಟ್ಟು 8,772 ಯುನಿಟ್‌ಗಳು ಅಕ್ಟೋಬರ್ 2022 ರಲ್ಲಿ ಮಾರಾಟವಾಗಿವೆ, ಅಂದರೆ ನಾವು ಇದರ ಮಾರಾಟದಲ್ಲಿ 10% ರಷ್ಟು ಹೆಚ್ಚಳವನ್ನು ಕಂಡಿದ್ದೇವೆ ವರ್ಷದಿಂದ ವರ್ಷಕ್ಕೆ ಈ ಕಾರ್ ನ ಬೇಡಿಕೆ ಹೆಚ್ಚುತ್ತಿದೆ. ಸುರಕ್ಷತೆ ವಿಷಯದಲ್ಲಿ ಈ ಕಾರ್ ಉತ್ತಮ ರೇಟಿಂಗ್ ಪಡೆದುಕೊಂಡಿದೆ

advertisement

Leave A Reply

Your email address will not be published.