Karnataka Times
Trending Stories, Viral News, Gossips & Everything in Kannada

Ration Card: ರೇಶನ್ ಕಾರ್ಡ್ ಅಕ್ರಮಕ್ಕೆ ಸರಕಾರದ ಕಠಿಣ ಕ್ರಮ ಶೀಘ್ರ ಜಾರಿ

advertisement

ರೇಶನ್ ಕಾರ್ಡ್ ಇಂದು ನಮ್ಮ ವಾಸ್ತವ್ಯದ ಅಗತ್ಯ ದಾಖಲೆಗಳಲ್ಲಿ ಒಂದಾಗಿದೆ. ರೇಶನ್ ಕಾರ್ಡ್ ಮೂಲಕ ಆಹಾರ, ಆರೋಗ್ಯ ಮತ್ತು ಶೈಕ್ಷಣಿಕ ಅಗತ್ಯಗಳಿಗೆ ಈ ದಾಖಲೆ ಪರಿಗಣಿಸಲಾಗುತ್ತಿದ್ದು ಇಂದು ರೇಶನ್ ಕಾರ್ಡ್ (Ration Card) ಸೃಷ್ಟಿಯಾದ ಮೂಲ ಉದ್ದೇಶ ಮರೆಯಲಾಗುತ್ತಿದೆ. ರೇಶನ್ ಕಾರ್ಡ್ ಬಡವರ್ಗದವರಿಗೆ ಸರಕಾರದಿಂದ ಕೊಡ ಮಾಡುವ ಪಡಿತರ ವಿತರಣೆಗೆ ಸೃಷ್ಟಿ ಆಗಿದ್ದು ಇಂದು ಬಹುತೇಕರು ತಮಗೆ ಸೇರಬೇಕಾದ ಪಡಿತರ ಪಡೆಯದೇ ರೇಶನ್ ಕಾರ್ಡ್ ಮಾತ್ರವೇ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಅಕ್ರಮ ವ್ಯವಹಾರ

ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 10kg ಅಕ್ಕಿ ನೀಡುವುದಾಗಿ ತಿಳಿಸಿತ್ತು. ಆದರೆ ಅಕ್ಕಿ ಪೂರೈಕೆ ಸಮಸ್ಯೆ ಮತ್ತು ಕೇಂದ್ರ ಸರಕಾರದ ಪ್ರೋತ್ಸಾಹ ಸರಿಯಾಗಿ ಸಿಗದ ಕಾರಣ 5kg ಅಕ್ಕಿ ಮತ್ತು 5kg ಅಕ್ಕಿಗೆ ಬದಲು ಹಣ ನೀಡಲು ಚಿಂತಿಸಲಾಯಿತು. ಹಾಗಾಗಿ ರೇಶನ್ ಕಾರ್ಡ್ ನಲ್ಲಿ ಅಕ್ರಮ ವ್ಯವಹಾರ ಹೆಚ್ಚಳವಾಗಿದೆ. ಅಕ್ರಮ ತಡೆಗಟ್ಟಲು ರಾಜ್ಯದ ಅನೇಕ ಭಾಗದಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ.

ಅಕ್ರಮ ಮಾಡಿದವರಿಗೆ ಕಾದಿದೆ ಸಂಕಷ್ಟ

advertisement

ಅನ್ನಭಾಗ್ಯ ಯೋಜನೆ ಸರಕಾರದ ಮುಖ್ಯ ಯೋಜನೆಯಾಗಿದ್ದು ಅದರಲ್ಲಿ ಅಕ್ರಮ ಮಾಡಿದರೆ ಶಿಕ್ಷೆ ವಿಧಿಸಲಾಗುವುದು. ಅನ್ನಭಾಗ್ಯ ಯೋಜನೆ ಅಡಿ ಅಕ್ಕಿ ಪಡೆದು ಅದನ್ನು ಕಡಿಮೆ ದರಕ್ಕೆ ಮಾರಿಕೊಂಡವರ ಪ್ರಮಾಣ ಅಧಿಕವಾಗುತ್ತಿದೆ. ಹಾಗಾಗಿ ಅಂತವರ ವಿರುದ್ಧ ಕ್ರಮ ಕೈಗೊಳ್ಳಲು ಅಗತ್ಯ ವಸ್ತು ಕಾಯ್ದೆ 1955ರ ಅಡಿಯಲ್ಲಿ ಪ್ರಕರಣ ದಾಖಲಿಸಲು ಸರ್ಕಾರ  ಮುಂದಾಗಿದ್ದು ಇನ್ನು ಅಕ್ರಮವಾಗಿ ಅಕ್ಕಿ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಸರಕಾರ ಮುಂದಾಗಿದೆ.

ಇಕೆವೈಸಿ ಕಡ್ಡಾಯ

ರೇಶನ್ ಕಾರ್ಡ್ ದಾಖಲೆಯ ಸಾಲಿನಲ್ಲಿ ಅಗ್ರಗಣ್ಯದಲ್ಲಿ ಸರಕಾರದ ಬಹುತೇಕ ಯೋಜನೆಗೆ ಇಂದು ರೇಶನ್ ಕಾರ್ಡ್ ಅನ್ನು ಪುರಾವೆಯಾಗಿ ಕೇಳಲಾಗುತ್ತಿದೆ‌. ಪಡೆದ ಅಕ್ಕಿಯನ್ನು ದುರುಪಯೋಗ ಮಾಡುವವರು ಒಂದುಕಡೆಯಾದರೆ ಸರಕಾರಿ ಸೌಲಭ್ಯ ಪಡೆಯಬೇಕು ಎಂಬ ಕಾರಣಕ್ಕೆ ನಕಲಿ ರೇಶನ್ ಕಾರ್ಡ್ ಮಾಡುವವರು ಹೆಚ್ಚಾಗಿದ್ದಾರೆ ಈ ಹಿಂದೆ ನಕಲಿ ರೇಶನ್ ಕಾರ್ಡ್ ತಪ್ಪಿಸಲು ಇಕೆವೈಸಿ ಕಡ್ಡಾಯ ಮಾಡಲಾಗಿದ್ದು ಡಿಸೆಂಬರ್ 30ರ ವರೆಗೆ ಇದಕ್ಕಾಗಿ ಸಮಯ ನೀಡಿದೆ.

ಈ ಬಗ್ಗೆ ಗಮನಿಸಿ

ರೇಶನ್ ಕಾರ್ಡ್ ಇಕೆವೈಸಿ ಮಾಡಿಸದೇ ಇದ್ದವರಿಗೆ ಪಡಿತರ ಕಾರ್ಡ್ ರದ್ದಾಗುವ ಸಾಧ್ಯತೆ ಇದೆ‌. ಹಾಗಾಗಿ ರೇಶನ್ ಕಾರ್ಡ್ ವಿಚಾರದಲ್ಲಿ ನಿಮ್ಮಿಂದ ಗೊತ್ತು ಅಥವಾ ಗೊತ್ತಿಲ್ಲದೇ ಅಕ್ರಮ ಆದರೆ ಅದನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳುವುದು ಅತೀ ಮುಖ್ಯ. ಇಲ್ಲವಾದರೆ ನಿಮ್ಮ ಪಡಿತರ ಕಾರ್ಡ್ ಶೀಘ್ರವೇ ರದ್ದಾಗುವ ಸಾಧ್ಯತೆ ಇರುತ್ತದೆ. ಇಕೆವೈಸಿ ಮಾಡಿಸುವುದು ಇತ್ತೀಚೆಗೆ ಅಗತ್ಯವಾಗುತ್ತಿದ್ದು ನೀವು ಮಾಡಿಸದೇ ಇದ್ದಲ್ಲಿ ಈ ಬಗ್ಗೆ ಅಗತ್ಯ ಗಮನ ಹರಿಸಲೇ ಬೇಕು.

advertisement

Leave A Reply

Your email address will not be published.