Karnataka Times
Trending Stories, Viral News, Gossips & Everything in Kannada

Income Tax: ತೆರಿಗೆ ಪಾವತಿಸುವವರಿಗೆ ಗುಡ್ ನ್ಯೂಸ್ ಈ 5 ಆದಾಯದ ಮೇಲೆ ತೆರಿಗೆ ಅನ್ವಯವಾಗುವುದಿಲ್ಲ!

advertisement

ನಮ್ಮ ದೇಶದಲ್ಲಿ ಆದಾಯ ತೆರಿಗೆ (Income Tax) ಎನ್ನುವುದು ಬಹಳ ಕಟ್ಟುನಿಟ್ಟಿನ ವಿಚಾರವಾಗಿದೆ ಯಾವುದೇ ವ್ಯಕ್ತಿ ಗಳಿಸುವ ಆದಾಯಕ್ಕೆ ತಕ್ಕಂತೆ ಆದಾಯ ತೆರಿಗೆಯನ್ನು ಪಾವತಿ ಮಾಡಬೇಕು ಇಲ್ಲದೆ ಇದ್ದಲ್ಲಿ ಭಾರಿ ಪ್ರಮಾಣದ ದಂಡ ಪಾವತಿಸಬೇಕಾಗುತ್ತದೆ . ಇಲಾಖೆ ಹೊಸದೊಂದು ಶರತ್ತು ಹಾಗೂ ಮಿತಿಯನ್ನು ತಿಳಿಸಿದ್ದು ಆದಾಯ ತೆರಿಗೆ ರಿಟರ್ನ್ (Income Tax Return) ಸಲ್ಲಿಸುವವರು ಮೊದಲು ಈ ವಿಚಾರಗಳನ್ನು ತಿಳಿದುಕೊಳ್ಳಬೇಕು

ಈ ಆದಾಯಗಳು ತೆರಿಗೆಗೆ ಒಳಪಡುವುದಿಲ್ಲ!

ನೀವು ಎಷ್ಟು ಆದಾಯ ಗಳಿಸುತ್ತೀರೋ ತೆರಿಗೆ ಕಟ್ಟುವ ಪ್ರಮಾಣವೂ ಕೂಡ ಅಷ್ಟೇ ಜಾಸ್ತಿಯಾಗುತ್ತದೆ, ಹಾಗಾಗಿ ಸಾಕಷ್ಟು ತೆರಿಗೆ ಪಾವತಿ ಮಾಡುವವರು ಆದಾಯ ತೆರಿಗೆಯನ್ನು ಉಳಿಸಿಕೊಳ್ಳಲು ಬೇರೆ ಬೇರೆ ಮಾರ್ಗಗಳನ್ನು ಹುಡುಕುತ್ತಾರೆ ಎಷ್ಟೋ ಜನ ಕೆಲವು ಕಡೆ ಹೂಡಿಕೆ ಕೂಡ ಮಾಡುತ್ತಾರೆ ಆದರೆ ನಿಮಗೆ ಗೊತ್ತಾ ಈ ಆರು ಆದಾಯಗಳ ಮೇಲೆ ಯಾವುದೇ ರೀತಿಯ ತೆರಿಗೆ ಅನ್ವಯವಾಗುವುದಿಲ್ಲ ಇನ್ನೇನು ಕೆಲವು ದಿನಗಳಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಬೇಕು. ಅದಕ್ಕಿಂತ ಮುಂಚೆ ಈ ವಿಚಾರವನ್ನು ತಿಳಿದುಕೊಂಡರೆ ಒಳ್ಳೆಯದು. ಉದ್ಯೋಗ (Employment) ಅಥವಾ ವ್ಯಾಪಾರ (Business) ದಿಂದ ವಾರ್ಷಿಕವಾಗಿ ಎಷ್ಟು ಆದಾಯ ಗಳಿಸುತ್ತಿರೋ ತೆರಿಗೆ ಸ್ಲ್ಯಾಬ್ ಪ್ರಕಾರ ಐಟಿಆರ್ (ITR File) ಸಲ್ಲಿಸಬೇಕಾಗುತ್ತದೆ. ತೆರಿಗೆ ಒಳಪಡದ ಆದಾಯವನ್ನು ನೀವು ಗಳಿಸುತ್ತಿದ್ದರೆ ಇದರಿಂದ ನಿಮಗೆ ಯಾವುದೇ ರೀತಿಯ ತೆರಿಗೆ ಪಾವತಿ ಮಾಡುವ ಅಗತ್ಯ ಇರುವುದಿಲ್ಲ.

ಕೃಷಿಯಿಂದ ಬರುವ ಆದಾಯಕ್ಕೆ ಇಲ್ಲ ತೆರಿಗೆ!

ಆದಾಯ ತೆರಿಗೆ ಕಾಯ್ದೆ 1961ರ ಅಡಿಯಲ್ಲಿ, ಕೃಷಿಯಿಂದ ನೀವು ಆದಾಯ ಗಳಿಸುತ್ತಿದ್ದರೆ ಅದಕ್ಕೆ ಯಾವುದೇ ರೀತಿಯ ಆದಾಯ ತೆರಿಗೆ (Income Tax) ಪಾವತಿ ಮಾಡುವ ಅಗತ್ಯವಿಲ್ಲ. ಅದೇ ರೀತಿ ಹಿಂದೂ ಒಟ್ಟು ಕುಟುಂಬದ ಅಥವಾ ಅವಿಭಜಿತ ಕುಟುಂಬದ ಆದಾಯ ಸ್ಥಿರ ಆಸ್ತಿಯಿಂದ ಬರುವ ಆದಾಯ (Income From Immovable Property) ಹಾಗೂ ಪೂರ್ವಜರ ಆಸ್ತಿಯಿಂದ ಬರುವ ಆದಾಯಕ್ಕೆ ತೆರಿಗೆ ಪಾವತಿಸುವ ಅಗತ್ಯವಿಲ್ಲ.

ಉಡುಗೊರೆಯಾಗಿ ಸಿಕ್ಕ ಆಸ್ತಿಗೆ ಆದಾಯ ತೆರಿಗೆ ಇಲ್ಲ!

advertisement

ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 56 (ii) ಅಡಿಯಲ್ಲಿ ಯಾರಾದರೂ ನಿಮಗೆ ಉಡುಗೊರೆಯಾಗಿ ಆಸ್ತಿ ಹಣ ಆಭರಣ ಅಥವಾ ವಾಹನವನ್ನು ನೀಡಿದರೆ ಅದಕ್ಕೆ ಯಾವುದೇ ರೀತಿಯ ತೆರಿಗೆ ಪಾವತಿಸುವ ಅಗತ್ಯವಿಲ್ಲ. ಸಂಬಂಧದ ಹೊರತಾಗಿ ಬೇರೆಯವರು ನೀಡಿರುವ ಉಡುಗೊರೆಗೆ 50,000ಗಳಿಗಿಂತ ಹೆಚ್ಚಿನ ಮೊತ್ತದ್ದಾದರೆ ತೆರಿಗೆ ಪಾವತಿಸಬೇಕು.

ಗ್ರಾಚ್ಯುಟಿ ತೆರಿಗೆ ಮುಕ್ತವಾಗಿದೆ!

ಸರ್ಕಾರಿ ನೌಕರರು (Government Employees) ಮರಣದ ನಂತರ ಅಥವಾ ನಿವೃತ್ತಿಯ ನಂತರ ಗ್ರಾಚ್ಯುಟಿ ಹಣವನ್ನು ಪಡೆದುಕೊಳ್ಳುತ್ತಿದ್ದರೆ ಆ ಹಣಕ್ಕೆ ಯಾವುದೇ ರೀತಿಯ ತೆರಿಗೆ ಪಾವತಿ ಮಾಡುವ ಅಗತ್ಯವಿಲ್ಲ. ಇನ್ನು ಖಾಸಗಿ ವಲಯದ ಉದ್ಯೋಗಿಗಳು ನಿವೃತ್ತಿ ಪಡೆದುಕೊಂಡರೆ ಅಥವಾ ತಮ್ಮ ಕೆಲಸದ ಅವಧಿ ಮುಗಿದ ನಂತರ 10 ಲಕ್ಷ ರೂಪಾಯಿಗಳ ಗ್ರಾಚ್ಯುಟಿ ಪಡೆದುಕೊಂಡರೆ ಅದಕ್ಕೆ ತೆರಿಗೆ ವಿನಾಯಿತಿ ಕೊಡಲಾಗುತ್ತದೆ. ಆದರೆ ಇದು ತನ್ನದೇ ಆಗಿರುವ ಮಿತಿಯನ್ನು ಹೊಂದಿದ್ದು ಆ ಮಿತಿಗಿಂತ ಹೆಚ್ಚಿನ ಮೊತ್ತದ ಗ್ರಾಚ್ಯುಟಿ ಹಣಕ್ಕೂ ಕೂಡ ತೆರಿಗೆ ಪಾವತಿಸಬೇಕು.

ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕೆ ಇಲ್ಲ ಆದಾಯ ತೆರಿಗೆ!

ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕಾಗಿ ಬೇರೆ ಬೇರೆ ಕಂಪನಿಗಳು ನೀಡುವ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಬಹುದು ಇದಕ್ಕೆ ತೆರಿಗೆ ಕಾಯ್ದೆಯ ಅಡಿಯಲ್ಲಿ ತೆರಿಗೆ ವಿನಾಯಿತಿ ಇರುತ್ತದೆ. ಅಷ್ಟೇ ಅಲ್ಲದೆ ಮಹಾವೀರ ಚಕ್ರ, ವೀರ ಚಕ್ರ, ಪರಮ ವೀರ ಚಕ್ರ ಹೀಗೆ ಮೊದಲಾದ ಪ್ರಶಸ್ತಿಗಳನ್ನು ಪಡೆದುಕೊಳ್ಳುವವರಿಗೆ ಹಾಗೂ ಇಂಥವರಿಗೆ ನೀಡಲಾಗುವ ಪಿಂಚಣಿಗಳಿಗೆ ತೆರಿಗೆ ವಿನಾಯಿತಿ ಇರುತ್ತದೆ.

ಸರ್ಕಾರಿ ಕೆಲವು ಯೋಜನೆಗಳ ಲಾಭಕ್ಕೆ ಇಲ್ಲ ತೆರಿಗೆ!

ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 10 (15) ಹೇಳುವಂತೆ ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana) ಯಡಿ ಪಡೆದುಕೊಂಡ ಹಣ ಚಿನ್ನದ ಠೇವಣಿ ಬಾಂಡ್ ಗಳ ಮೇಲಿನ ಬಡ್ಡಿ ಹಾಗೂ ಸ್ಥಳೀಯ ಪ್ರಾಧಿಕಾರ ಮತ್ತು ಮೂಲಸೌಕರ್ಯಗಳ ಬಾಂಡ್ ಗಳ ಮೇಲೆ ಯಾವುದೇ ರೀತಿಯ ತೆರಿಗೆ ವಿಧಿಸಲಾಗುವುದಿಲ್ಲ. ಒಟ್ಟಿನಲ್ಲಿ ನೀವು ತೆರಿಗೆ ಪಾವತಿ ಮಾಡುವುದಕ್ಕಿಂತ ಮೊದಲು ಈ ಎಲ್ಲಾ ವಿಷಯಗಳನ್ನು ತಿಳಿದುಕೊಂಡು ತೆರಿಗೆ ವಿನಾಯಿತಿ ಬಗ್ಗೆ ಮಾಹಿತಿ ಪಡೆದುಕೊಳ್ಳಿ.

advertisement

Leave A Reply

Your email address will not be published.