Karnataka Times
Trending Stories, Viral News, Gossips & Everything in Kannada

Avon E Lite: ಬರಿ 28000 ಕೆ ಸಿಗಲಿದೆ ಈ ಎಲೆಕ್ಟ್ರಿಕ್ ಸ್ಕೂಟರ್, 60KM ಮೈಲೇಜ್.

Avon E Lite Electric Scooter Price And Features

advertisement

ಇತ್ತೀಚಿನ ದಿನದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿ ಮಾಡುವವರ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದೆ. ಅದೇ ರೀತಿ ಪೆಟ್ರೋಲ್ ಮತ್ತು ಡಿಸೇಲ್ ದರ ಗಣನೀಯವಾಗಿ ಏರುತ್ತಿದ್ದು ಅದನ್ನು ತಡೆಗಟ್ಟುವ ನೆಲೆಯಲ್ಲಿ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಲಾಗುತ್ತಿದ್ದು ಅಂತಹ ನೆಲೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಕಾಣಬಹುದು. ಇಂದು ಸಾಮಾನ್ಯ ವಾಹನಕ್ಕಿಂತ ಎಲೆಕ್ಟ್ರಿಕ್ ವಾಹನಕ್ಕೆ ಅಧಿಕ ಬೇಡಿಕೆ ಇದ್ದು, ಬೇಡಿಕೆ ಹೆಚ್ಚಾದಂತೆ ಸ್ಕೂಟರ್ ಉತ್ಪಾದನೆ ಮಾಡುವ ಕಂಪನಿಗಳ ಪ್ರಮಾಣ ಸಹ ಹೆಚ್ಚಾಗಿದೆ.

ಇದರ ಹೆಸರೇನು?

ಪರಿಸರಕ್ಕೆ ಪೂರಕವಾಗುವ ಅನೇಕ ಉಪಯುಕ್ತ ವಿಧಾನದ ಸಾಲಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್(Electric Scooter) ಕೂಡ ಸೇರಿಕೊಂಡಿದ್ದು, ಬಜೆಟ್ ಫ್ರೆಂಡ್ಲಿ ಆಗಿರುವ ಒಂದು ಸ್ಕೂಟರ್ ಬಗ್ಗೆ ನಿಮಗೆ ತಿಳಿಸಲಿದ್ದೇವೆ. ಇದರ ಹೆಸರು Avon E Lite ಕೂಡ ಈಗ ಕಡಿಮೆ ಬಜೆಟ್ ನಲ್ಲಿ ಗ್ರಾಹಕರ ಮನ ತಲುಪಿಸುವ ನೆಲೆಯಲ್ಲಿ ಬಹಳ ಸಹಕಾರಿ ಆಗಿದೆ.

ವೈಶಿಷ್ಟ್ಯತೆ ಏನು?

advertisement

ಅತೀ ಕಡಿಮೆ ವೆಚ್ಚದಲ್ಲಿ ಇದು ಗ್ರಾಹಕರ ಮನಸ್ಸನ್ನು ಗೆಲ್ಲಲಿದೆ. 12 AH ಬ್ಯಾಟರಿ ಹೊಂದಿದೆ. ಪೂರ್ಣ ಚಾರ್ಜ್ ಮಾಡಲು 6ರಿಂದ 8 ಗಂಟೆ ತನಕ ಸಮಯಾವಕಾಶ ಅಗತ್ಯವಾಗಿದೆ. ನೀವು ಒಂದು ಬಾರಿ ಚಾರ್ಜ್ ಮಾಡಿದರೆ 50 ರಿಂದ 60 ಕಿಲೋ ಮೀಟರ್ ದೂರದ ವರೆಗೆ ಸಂಚಾರ ಮಾಡಬಹುದು. ಸ್ಕೂಟರ್ 230 W, BLDC ಮೋಟಾರ್ ಅನ್ನು ಒಳಗೊಂಡಿದೆ. 24km/h ವೇಗವನ್ನು ತಲುಪಲು ಅನುವು ಮಾಡಿಕೊಳ್ಳಲಿದೆ.

Avon E Lite ಸ್ಕೂಟರ್ ವಿಶೇಷ ಸ್ಕೂಟರ್ ಸಾಲಿನಲ್ಲಿ ಒಂದಾಗಿದ್ದು ಡ್ರಮ್ ಬ್ರೇಕ್ ಹಾಗೂ ಟ್ಯೂಬ್ ಲೆಸ್ ಟಯರ್ ಎಂಬ ವಿಶೇಷ ಫೀಚರ್ಸ್ ಹೊಂದಿರುವುದನ್ನು ಕಾಣಬಹುದು. ಇದರಲ್ಲಿ ಹೆಚ್ಚು ಸುರಕ್ಷತೆಯ ಫೀಚರ್ಸ್ ಇರಲಿದ್ದು ಬಜೆಟ್ ಫ್ರೆಂಡ್ಲಿ ಆಗಿರಲಿದೆ. ಇದರ ಬೆಲೆ ಎಷ್ಟು ಎಂಬ ಕುತೂಹಲಕ್ಕೆ ಈ ಲೇಖನದಲ್ಲಿ ಉತ್ತರ ನೀಡಲಾಗಿದೆ. ಹಾಗಾಗಿ ಕಡಿಮೆ ಹಣಕ್ಕೆ ಎಲೆಕ್ಟ್ರಿಕ್ ಸ್ಕೂಟರ್ ಆಯ್ಕೆ ಮಾಡಬೇಕು ಎಂದವರಿಗೆ Avon E Lite ಸ್ಕೂಟರ್ ಒಂದು ಅತ್ಯುತ್ತಮ ಆಯ್ಕೆ ಆಗಿರಲಿದೆ.

ಬೆಲೆ ಎಷ್ಟು?

ಅವೋನ್ ಇ ಲೈಟ್ ಇ ಸ್ಕೂಟರ್ ಬೆಲೆಯೂ 28,000 ಆಗಿದೆ. ದೆಹಲಿಯಲ್ಲಿ ಇದರ ಬೆಲೆ 32,420ರೂ. ಇರಲಿದೆ. ಅದೇ ರೀತಿ ನಗರ ಮತ್ತು ಸಾಮಾನ್ಯ ಪ್ರದೇಶಗಳಲ್ಲಿ ಬೆಲೆ ವ್ಯತ್ಯಾಸ ಆಗಲಿದ್ದು ಹೆಚ್ಚುವರಿಯಾಗಿ ಇಎಂಐ(EMI) ಆಯ್ಕೆ ಕೂಡ ನಮಗೆ ಸಿಗಲಿದೆ. ಹಾಗಾಗಿ ಕಡಿಮೆ ಖರ್ಚಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಹುಡುಕುವವರಿಗೆ ಈ ಬೆಲೆಯ ಸ್ಕೂಟರ್ ಸಾಕಷ್ಟು ಉಪಯುಕ್ತ ಆಗಿದೆ ಎಂದು ಹೇಳಬಹುದು. ಅದೇ ರೀತಿ ಇಎಂಐ ಕಟ್ಟಿಕೊಂಡು ಖರೀದಿ ಮಾಡ್ತೇವೆ ಎಂದವರಿಗೆ ಈ ಎಲೆಕ್ಟ್ರಿಕ್ ಸ್ಕೂಟರ್ ದಿ ಬೆಸ್ಟ್ ಚಾಯ್ಸ್ ಆಗಲಿದೆ‌.

advertisement

Leave A Reply

Your email address will not be published.