Cash Limit: ನಿಮ್ಮ ಮನೆಯಲ್ಲಿ ಹಣ ಎಷ್ಟು ಸಂಗ್ರಹ ಮಾಡಬಹುದು, ನಿಯಮ ಏನು ಹೇಳುತ್ತೆ?
Income Tax Rules On Money Savings In Home

advertisement
ಇತ್ತೀಚಿನ ದಿನದಲ್ಲಿ ಹಣ ಮನುಷ್ಯನ ಜೀವನದಲ್ಲಿ ಅತ್ಯಧಿಕ ಪ್ರಾಮುಖ್ಯತೆ ಪಡೆಯುತ್ತಿದೆ. ದುಡ್ಡೊಂದು ಇದ್ದರೆ ಜಗತ್ತನ್ನೆ ಜಯಿಸುವೇ ಎಂಬ ಪರಂಪರೆ ಉಗಮಿಸುತ್ತಿದೆ. ಹಣ ಭವಿಷ್ಯದ ದೃಷ್ಟಿಯಿಂದ ಕೂಡಿಡುವುದು ಅತೀ ಮುಖ್ಯವಾಗಿದೆ ಆದರೆ ಇತ್ತೀಚೆಗೆ ಕೂಡಿಡುವ ಪ್ರಮಾಣ ಅಧಿಕವಾಗುತ್ತಿದೆ. ಹೀಗಾಗಿ ಐಟಿ, ಇಡಿ ದಾಳಿ ಕೂಡ ಆಗುತ್ತಿದೆ. ಅಕ್ರಮ ಆಸ್ತಿ ಪಾಸ್ತಿಯ ಪಟ್ಟಿಯಲ್ಲಿ ಹಣ ಕೂಡ ಸೇರಿ ಬಿಟ್ಟಿದ್ದು, ಈ ಅಕ್ರಮ ಎನ್ನುವುದು ನಿರ್ಧಾರ ಆಗೊದು ಹೇಗೆ ಎಂಬುದೇ ಪ್ರಶ್ನಾರ್ಥಕವಾಗಿದೆ.
ಈ ಪ್ರಶ್ನೆ ನಿಮಗೂ ಕಾಡಿದೆಯಾ?
ಒಬ್ಬ ವ್ಯಕ್ತಿ ತನ್ನ ದುಡಿಮೆ ಸಾಮರ್ಥ್ಯಕ್ಕಿಂತ ಅಧಿಕ ಹಣ ಸಂಗ್ರಹ ಮಾಡುತ್ತಿದ್ದಾನೆ ಹಾಗೂ ತೆರಿಗೆ ಸಂದಾಯ ಮಾಡುತ್ತಿಲ್ಲ ಎಂಬುದು ಅಕ್ರಮ ಆಸ್ತಿ ವ್ಯವಹಾರದ ಸೂಚ್ಯಕವಾಗಿದೆ. ಹಾಗಾದರೆ ನಿಮ್ಮ ಮನೆ ವಿಚಾರಕ್ಕೆ ಬಂದರೆ ಎಷ್ಟು ಹಣ ಸಂಗ್ರಹ ಮಾಡಬಹುದು ಎಂಬ ಪ್ರಶ್ನೆ ನಿಮ್ಮಲ್ಲೂ ಕಾಡಿರಬಹುದು. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಂದು ನಾವು ತಿಳಿಸಲಿದ್ದೇವೆ.
ನಿಯಮದಲ್ಲಿ ಏನಿದೆ?
ಆದಾಯ ತೆರಿಗೆ (Income Tax) ಇಲಾಖೆಯಲ್ಲಿ ಮನೆಯಲ್ಲಿ ಎಷ್ಟು ಹಣ ಸಂಗ್ರಹ ಮಾಡಬಹುದು ಸಂಬಂಧಿಸಿದಂತೆ ನಿಯಮ ಇದೆ. ಹಣಕಾಸಿನ ಸಾಮರ್ಥ್ಯ ಎನ್ನುವ ಆಧಾರದ ಮೇಲೆ ನೀವು ಎಷ್ಟು ಹಣ ಸಂಗ್ರಹ ಮಾಡಬಹುದು ಎಂಬುದು ನಿರ್ಧರಿತವಾಗಲಿದೆ. ನೀವು ಹಣವನ್ನು ಮನೆಯಲ್ಲಿ ಸಂಗ್ರಹಿಸಬಹುದು, ಆದರೆ ಇದು ಲೆಕ್ಕಪತ್ರ ನಿರ್ವಹಣೆಯ ಜೊತೆಗೆ ಇರಬೇಕು ಎಂಬ ನಿಯಮ ಇರುವುದು ಕಾಣಬಹುದು.
advertisement
ರೈಡ್ ಸಾಧ್ಯತೆ
ಮನೆಯಲ್ಲಿ ನಗದು ಹಣ ಇಡುವ ಬಗ್ಗೆ ಸರಕಾರದಿಂದ ಯಾವುದೇ ನಿರ್ದಿಷ್ಟ ನಿಯಮ ಇಲ್ಲ ಆದರೆ ನೀವು ಇಡುವ ಹಣಕ್ಕೆ ದಾಖಲಾತಿ ಸರಿಯಾಗಿ ಇರಬೇಕು. ತನಿಖಾ ಸಂಸ್ಥೆಗಳಾದ ಇಡಿ, ಐಟಿ ದಾಳಿಯಾದಂತಹ ಸಂದರ್ಭದಲ್ಲಿ ಆಗ ಈ ಹಣ ಸಿಕ್ಕರೆ, ಆಗ ನಿಮ್ಮ ಬಳಿ ದಾಖಲಾತಿ ಇಲ್ಲದಿದ್ದರೆ ನೀವು ಸಂಕಷ್ಟಕ್ಕೆ ಸಿಲುಕುವಿರಿ. ಇಂತಹ ಸಂದರ್ಭದಲ್ಲಿ ದಾಖಲೆ ಅಥವಾ ನಗದಿನ ಮೂಲ ನೀವು ತಿಳಿಸಲು ವಿಫಲವಾದರೆ ಹಣ ರೈಡ್ ಆಗಬಹುದು. ನೀವು ಬಹಿರಂಗ ಪಡಿಸಿದ್ದ ನಗದಿನ ಮೇಲೆ 134% ವರೆಗೆ ದಂಡ ಬರಿಸಲು ತನಿಖಾಧಿಕಾರಿಗಳು ಸೂಚನೆ ಸಹ ನೀಡುವರು ತಪ್ಪಿದಲ್ಲಿ ಕಠಿಣ ಶಿಕ್ಷೆ ವಿಧಿಸಲಿದ್ದಾರೆ.
ಬ್ಯಾಂಕ್ ನಲ್ಲಿ ವಹಿವಾಟು ಹೇಗೆ?
ಒಬ್ಬ ವ್ಯಕ್ತಿ ಒಂದು ಬಾರಿಗೆ 50ಸಾವಿರ ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಬಹುದು. ಇದಕ್ಕೆ ನೀವು ಪ್ಯಾನ್ ಕಾರ್ಡ್ ಅನ್ನು ತೋರಿಸಬೇಕಾಗುವುದು. ಒಂದು ವರ್ಷದಲ್ಲಿ 1ಕೋಟಿಗಿಂತ ಅಧಿಕ ಮೊತ್ತ ಹಿಂತೆಗೆದುಕೊಂಡರೆ 2%GST ಆಗಲಿದೆ. ವರ್ಷದಲ್ಲಿ 20ಲಕ್ಷ ರೂಪಾಯಿ ವರೆಗೆ ಬ್ಯಾಂಕಿನಲ್ಲಿ ನೀವು ಠೇವಣಿ ಇರಿಸಿದರೆ ಪ್ಯಾನ್ ಹಾಗೂ ಆಧಾರ್ ಕಾರ್ಡ್ (Aadhar Card) ಎರಡನ್ನೂ ಸಹ ತೋರಿಸಬೇಕಾಗುವುದು. ಇಲ್ಲವಾದರೆ ದಂಡ ವಿಧಿಸಲಾಗುವುದು ಎಂದು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (Central Board Of Direct Taxes) ನಲ್ಲಿ ತಿಳಿಸಲಾಗಿದೆ.
ಡೆಬಿಟ್, ಕ್ರೆಡಿಟ್ ಕಾರ್ಡ್ ನಲ್ಲಿ ಒಂದು ಲಕ್ಷಕ್ಕೆ ಅಧಿಕ ಹಣ ಪ್ರತೀ ಬಾರಿ ವಹಿವಾಟು ನಡೆದರೆ ಅದು ತನಿಖೆಯ ವಿಚಾರದ ಅಡಿಯಲ್ಲಿ ಬರಲಿದೆ. 30ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಆಸ್ತಿಯನ್ನು ನೀವು ನಗದು ರೂಪದಲ್ಲಿ ಏನಾದರೂ ಖರೀದಿ ಮಾಡಿದ್ದರೆ ಅದು ತನಿಖೆಯ ವಿಷಯಕ್ಕೆ ಬರಲಿದೆ. ಅದೇ ರೀತಿ ದತ್ತಿ ಹಾಗೂ ದಾನವಾಗಿ ಹೆಚ್ಚಿನ ಮೊತ್ತ ನೀಡಿದರೆ ಟ್ಯಾಕ್ಸ್ ಆಗೊಲ್ಲ, ಆದರೆ ಆ ಮೊತ್ತ ತನಿಖಾ ವಿಚಾರ ಸಹ ಆಗಲಿದೆ.
Advertisement