Bigg Boss 10 Kannada: ಈ ವಾರದ ಬಿಗ್ ಬಾಸ್ ನಲ್ಲಿ ಡಬಲ್ ಎಲಿಮಿನೇಷನ್ ಟ್ವಿಸ್ಟ್ ಕೊಟ್ಟ ಕಿಚ್ಚ ಸುದೀಪ್.
Bigg Boss 10 Kannada This Week Elimination

advertisement
ಬಿಗ್ಬಾಸ್ ಕನ್ನಡ ಸೀಸನ್ ಶುರುವಾಗಿ ಈಗಾಗಲೇ ಆರು ವಾರಗಳನ್ನು ಮುಗಿಸಿದೆ. ಇನ್ನು ಮೂವರು ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಈಗಾಗಲೇ ಆಚೆ ಬಂದಿದ್ದಾರೆ. ಕೆಲ ಕಾರಣಗಳಿಂದ ಎರಡು ವಾರಗಳಲ್ಲಿ ಎಲಿಮಿನೇಷನ್ ನಡೆದಿರಲಿಲ್ಲ. ಇದೇ ಕಾರಣಕ್ಕೆ ಈ ಬಾರಿ ಇಬ್ಬರು ಮನೆ ಬಿಟ್ಟು ಹೋಗಲಿದ್ದಾರೆ. ಹೌದು ಈ ವಾರ ಡಬಲ್ ಎಲಿಮಿನೇಷನ್ ಇರಲಿದೆ.
ವರ್ತೂರು ಸಂತೋಷ್ ಜರ್ನಿ ಮುಗಿಯುವುದೇ?
ಹುಲಿ ಉಗುರಿನ ನಂತರ ಒಂದಲ್ಲ ಒಂದು ವಿಷಯದಿಂದ ಸುದ್ದಿಯಲ್ಲಿರುವ ವರ್ತೂರ್ ಸಂತೋಷ್ ಅವರೊಂದಿಗೆ ಸುದೀಪ್ ಅವರು ಮಾತಾಡುವಾಗ ಬೇಸರಗೊಂಡಿದ್ದಾರೆ. ಹಾಗಾಗಿ ವರ್ತೂರು ಸಂತೋಷ್ ನಡೆ ಸುದೀಪ್ ಗೆ ಬೇಸರ ತಂದಿದೆಯಾ? ಇಲ್ಲ ಅವರ ಬಗ್ಗೆ ಹರಡಿರುವ ಗಾಸಿಪ್ ಇಂದ ಕೋಪಾಗೊಂಡಿದ್ದಾರಾ? ಎಕೆಂದರೆ ‘ನನಗೆ ಆಸಕ್ತಿ ಇಲ್ಲ’ ಎಂದು ಕಿಚ್ಚ ಸುದೀಪ್ (Kichcha Sudeep) ವರ್ತೂರ್ ವಿರುದ್ಧ ವಾಗ್ದಾಳಿ ನಡೆಸಿದ್ದಲ್ಲದೆ, ಎಲಿಮಿನೇಷನ್ ಅಲ್ಲಿ ದೊಡ್ಡ ಟ್ವಿಸ್ಟ್ ನೀಡುವ ಮಾತಾಡಿದ್ದಾರೆ.
advertisement
ಬಿಗ್ ಬಾಸ್ ಕನ್ನಡ 10 ಎಲಿಮಿನೇಷನ್ ಟ್ವಿಸ್ಟ್
ಈ ಸಲ ಬಿಗ್ಬಾಸ್ ಶೋನಲ್ಲಿ ಎಂಟು ಸ್ಪರ್ಧಿಗಳು ಎಲಿಮಿನೇಷನ್‌ಗೆ ನಾಮಿನೇಟ್ ಆಗಿದ್ದಾರೆ. ವಿನಯ್, ಕಾರ್ತಿಕ್, ನಮ್ರತಾ, ತುಕಾಲಿ ಸಂತೋಷ್, ತನಿಶಾ, ಇಶಾನಿ, ಭಾಗ್ಯಶ್ರೀ, ನೀತು ಹೆಸರು ಕೇಳಿಬಂದರೂ ಸಹ ಇದರಲ್ಲಿ ಅತಿಹೆಚ್ಚು ಜನ ವೋಟ್ ಪಡೆದು ಹೊಂದಿರುವ ಕಾರ್ತಿಕ್, ವಿನಯ್. ನಮ್ರತಾ ಗೌಡ ಸೇಫ್ ಆಗಿದ್ದಾರೆ.ಇನ್ನು ಕೊನೆಯಲ್ಲಿ ಉಳಿದಿರುವುದು ಇಶಾನಿ ಹಾಗೂ ನೀತು. ಹೌದು ಬಿಗ್ ಬಾಸ್ 10 ಕನ್ನಡ (Bigg Boss 10 Kannada) ಮತದಾನದ ಫಲಿತಾಂಶಗಳ ಪ್ರಕಾರ ಅತಿ ಕಡಿಮೆ ವೋಟ್ ಪಡೆದಿರುವ ಈಶಾನಿ ಮತ್ತು ನೀತು ಅವರನ್ನು ಶೋನಿಂದ ಹೊರ ಹೋಗುವ ಹೆಚ್ಚಿನ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
Advertisement