RBi: 500 ರೂಪಾಯಿ ನೋಟುಗಳ ಬಳಕೆಯ ಮೇಲೆ ಹೊಸ ಮಾರ್ಗಸೂಚಿ ಹೊರಡಿಸಿದ ರಿಸರ್ವ್ ಬ್ಯಾಂಕ್

advertisement
ನೀವು ಕೂಡ ಪ್ರತಿನಿತ್ಯ ಹಣಕಾಸಿನ ವ್ಯವಹಾರಕ್ಕೆ 500 ರೂಪಾಯಿಗಳ ನೋಟುಗಳನ್ನು ಬಳಸುತ್ತೀರಾ ಹಾಗಾದ್ರೆ ಆರ್‌ಬಿಐನ ಈ ಹೊಸ ಅಪ್ಡೇಟ್ ಬಗ್ಗೆ ತಿಳಿದುಕೊಳ್ಳಲೇಬೇಕು. ದೇಶದಲ್ಲಿ ನೋಟುಗಳ ಅಮಾನೀಕರಣ ಎರಡು ಬಾರಿ ನಡೆದಿದೆ ಈ ಹಿನ್ನೆಲೆಯಲ್ಲಿ ಈಗ ಬಳಕೆಯಲ್ಲಿರುವ 500 ರೂಪಾಯಿಗಳ ನೋಟುಗಳ ಬಗ್ಗೆ ಸಾಕಷ್ಟು ಚರ್ಚೆಗಳು ಕೂಡ ನಡೆಯುತ್ತಿದೆ.
ಮಾರುಕಟ್ಟೆಯಲ್ಲಿ ಲಭ್ಯವಿದೆ ಎರಡು ಬಗೆಯ 500 ರೂಪಾಯಿ ನೋಟುಗಳು!
ಕಪ್ಪು ಹಣ ತಡೆಯುವುದಕ್ಕಾಗಿ ಕೇಂದ್ರ ಸರ್ಕಾರ ಈಗಾಗಲೇ ಎರಡು ಬಾರಿ ನೋಟುಗಳ ಅಮಾನ್ಯೀಕರಣ ಮಾಡಿದೆ. ಹಾಗಾಗಿ ಈಗ ಬಳಕೆಯಲ್ಲಿರುವ ನೋಟುಗಳ ಬಗ್ಗೆ ಸಾಕಷ್ಟು ಊಹಾಪೋಹಗಳು ಕೂಡ ಹಬ್ಬಿಕೊಂಡಿದೆ. ಇದೀಗ ಮಾರುಕಟ್ಟೆಯಲ್ಲಿ ಎರಡು ಬಗೆಯ 500 ರೂಪಾಯಿಗಳ ನೋಟುಗಳು ಲಭ್ಯವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಎರಡು ಬಗೆಯ ನೋಟುಗಳ ವಿಡಿಯೋ ಒಂದು ವೈರಲ್ ಆಗಿದೆ. ಇದರಲ್ಲಿ ಒಂದು ಫೇಕ್ ನೋಟ್ ಹಾಗೂ ಒಂದು ಆರ್ ಬಿ ಐ ಯಿಂದ ನೀಡಲಾಗಿರುವ ರಿಯಲ್ ನೋಟು. ಹಾಗಾಗಿ ನೀವು ಮೋಸಕ್ಕೆ ಒಳಗಾಗದೆ ನಿಜವಾದ 500 ರೂಪಾಯಿಯ ನೋಟು ಯಾವುದು ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ.
advertisement
500 ರೂಪಾಯಿಯ ನೋಟುಗಳು ನಿಜವಾಗಿದ್ದರೆ ಹೇಗಿರುತ್ತದೆ.
500 ರೂಪಾಯಿ ನೋಟುಗಳ ಹಸಿರು ಪಟ್ಟಿಯು ಆರ್‌ಬಿಐ ಗವರ್ನರ್ ಸಹಿಯ ಮೂಲಕ ಹಾದು ಹೋಗುತ್ತದೆ ಹಾಗೂ ಗಾಂಧೀಜಿಯವರ ಚಿತ್ರಕ್ಕೆ ಇದು ತುಂಬಾ ಹತ್ತಿರದಲ್ಲಿರುತ್ತದೆ. ಇದೀಗ ಬಂದಿರುವ ಮಾಹಿತಿಯ ಪ್ರಕಾರ ಮಾರುಕಟ್ಟೆಯಲ್ಲಿ 500 ರೂಪಾಯಿಗಳ ನೋಟು ಎಲ್ಲವೂ ಅಸಲಿ ಆಗಿದ್ದು ಯಾವುದೇ ರೀತಿಯ ನಕಲಿ ನೋಟುಗಳು ಸರ್ಕಾರದ ಗಮನಕ್ಕೆ ಬಂದಿಲ್ಲ. ಆದ್ದರಿಂದ ಸೋಶಿಯಲ್ ಮೀಡಿಯಾದಲ್ಲಿ ಹಬ್ಬುತ್ತಿರುವ ವಿಷಯದ ಬಗ್ಗೆ ಜನರು ತಲೆ ಕೆಡಿಸಿಕೊಳ್ಳಬಾರದು ಯಾವುದೇ ರೀತಿಯ ಫೇಕ್ ನೋಟುಗಳು ಕೂಡ ಮಾರುಕಟ್ಟೆಯಲ್ಲಿ ಲಭ್ಯ ಇಲ್ಲ ಎಂದು ಆರ್‌ಬಿಐ ಅಧಿಕೃತವಾಗಿ ತಿಳಿಸಿದೆ.
ನಕಲಿ ಸಂದೇಶದ ಬಗ್ಗೆ ಎಚ್ಚರ!
ಇಂದು ಯೂಟ್ಯೂಬ್ ಹಾಗೂ ಇತರ ಸೋಶಿಯಲ್ ಮೀಡಿಯಾ ಗಳಲ್ಲಿ ನಕಲಿ ನೋಟುಗಳ ಬಗ್ಗೆ ಸಾಕಷ್ಟು ಹಾಗಾಗಿ ನಿಮಗೆ ಬಂದಿರುವ ಸಂದೇಶ ನಕಲಿವು ಅಥವಾ ಅಸಲಿಯು ಎಂಬುದನ್ನು ತಿಳಿದುಕೊಳ್ಳಲು ಅಧಿಕೃತ ಲಿಂಕ್ ಆಗಿರುವ https://factcheck.pib.gov.in/ ಮೇಲೆ ಕ್ಲಿಕ್ ಮಾಡಿ ಇದರಲ್ಲಿ ಅಸಲಿ ಆಗಿರುವ ವಿಷಯ ಯಾವುದು ಹಾಗೂ ನಕಲಿ ವಿಷಯ ಯಾವುದು ಎಂಬುದನ್ನು ತಿಳಿದುಕೊಳ್ಳಬಹುದು. ಅಥವಾ ಈ +918799711259 ವಾಟ್ಸಪ್ ಸಂಖ್ಯೆಗೆ ಮೆಸೇಜ್ ಮಾಡಿ. ಜೊತೆಗೆ [email protected] ಮೇಲ್ ಕಳುಹಿಸುವುದರ ಮೂಲಕವೂ ನಿಮಗೆ ಬಂದಿರುವ ಸುದ್ದಿ ಸತ್ಯವೂ ಸುಳ್ಳು ಎಂಬುದನ್ನು ಪರಿಶೀಲನೆ ಮಾಡಿಕೊಳ್ಳಬಹುದು. ಇನ್ನು ವಿನಾಕಾರಣ ಯಾವುದೇ ರೀತಿಯ ಸರ್ಕಾರದ ಯೋಜನೆಗಳ ಬಗ್ಗೆ ಅಥವಾ ಆರ್ ಬಿ ಐ ನಿಯಮಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡಿದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎನ್ನುವ ಮಾಹಿತಿ ಇದೆ.
Advertisement