Karnataka Times
Trending Stories, Viral News, Gossips & Everything in Kannada

Brahmanda Guruji: ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟ ಬ್ರಹ್ಮಾಂಡ ಗುರೂಜಿ, ಸ್ಪರ್ಧಿಗಳ ರಿಯಾಕ್ಷನ್ ಹೇಗಿತ್ತು?

Brahmanda Guruji In Bigg Boss 10 Kannada

advertisement

ಮುಂಡಾ ಮೋಚ್ತು, ಪುಟಗೋಸಿ, ಪಿಂಡ ಎನ್ನುತ್ತಲೇ ಬಿಗ್ಬಾಸ್ ಮನೆಗೆ 7 ನೆ ವಾರದ ಮೊದಲ ದಿನವೇ ಎಂಟ್ರಿ ಕೊಟ್ಟಿದ್ದಾರೆ ಬ್ರಹ್ಮಾಂಡ ಗುರೂಜಿ ಅವರು. ಹೌದು! ಬ್ರಹ್ಮಾಂಡ ಗುರೂಜಿ ಬಿಗ್ ಬಾಸ್ ಕನ್ನಡ ಸೀಸನ್ 1 ರಲ್ಲೇ ಸ್ಪರ್ಧಿಯಾಗಿ ಭಾಗವಹಿಸಿ ಮನೆಗೆ ಎಂಟ್ರಿ ಪಡೆದಿದ್ದರು. ಈಗ ಮತ್ತೆ ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮಾ ದೊಡ್ಮನೆಗೆ ಕಾಲಿಟ್ಟಿದ್ದಾರೆ.

ಹಲೋ ಬಂದಿದಿನಿ ಶುರು ಹಚ್ಕೋಳಿ.. ಎಂಬ ಡೈಲಾಗ್ ಮೂಲಕ ಕನ್ಫೆಷನ್ ರೂಮ್ನಲ್ಲೂ ಬ್ರಹ್ಮಾಂಡ ಗುರೂಜಿ (Brahmanda Guruji) ಕಾಣಿಸಿಕೊಂಡಿದ್ದಾರೆ. ಇತ್ತ ಅವ್ರು ಬಯ್ಯೋಕೆ ಶುರು ಮಾಡಿದ್ರೆ ಅದರ ಮಜಾನೇ ಬೇರೆ ಎಂದು ವಿನಯ್ ಗೌಡ ಅವರ ಹಾಸ್ಯದ ಬಗ್ಗೆ ಮಾತನಾಡಿದ್ದಾರೆ. ಮುಂಡಾ ಮುಚ್ತು, ಹಾಳಾಗೋಗ್ಲಿ, ಪುಟಗೋಸಿ, ಪಿಂಡ ಎಂಬೆಲ್ಲ ಮಾತುಗಳು ಗುರೂಜಿ ಬಾಯಿಂದ ಹೊರಬಂದಿವೆ. ಮನೆ ಮಂದಿಯೂ ನಗೆಗಡಲಲ್ಲಿ ತೇಲಿದ್ದಾರೆ.

ನರೇಂದ್ರ ಬಾಬು ಶರ್ಮಾ ಬಿಗ್ಬಾಸ್ ಮನೆಯೊಳಗೆ ಆಗಮಿಸುವ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಪ್ರಸಾರ ಮಾಡಿದೆ. ಅವರು ಮನೆಯೊಳಗೆ ಆಗಮಿಸಿದ್ದು ಎಲ್ಲರಿಗೂ ಅಚ್ಚರಿ ತಂದಿದೆ. ಗುರೂಜಿ ಮನೆಯೊಳಗೆಲ್ಲ ಓಡಾಡುತ್ತಿರುವುದು ಪ್ರೋಮೋದಲ್ಲಿ ಕಂಡುಬಂದಿದೆ. ಅವರು ಸ್ಪರ್ಧಿಗಳ ಜತೆ ಲವಲವಿಕೆಯಿಂದ ಮಾತುಕತೆಯನ್ನೂ ನಡೆಸಿದ್ದಾರೆ. ಅವರು ಮನೆಯಲ್ಲಿ ಎಲ್ಲರನ್ನು ಹುಡುಕುತ್ತಾ ಓಡಾಡುತ್ತಿದ್ದಾರೆ. ಎಲ್ರೋ ಇದ್ದೀರಾ? ಬಿಗ್ ಬಾಸ್ ಇವರನ್ನೆಲ್ಲಾ ಒಂದೆಡೆ ಸ್ಟ್ಯಾಚು ಮಾಡಿ ಬಿಡಿ. ನನ್ನ ಕೈಯಲ್ಲಿ ಓಡಾಡಲು ಆಗಲ್ಲ. ಮನೆಯಿಂದ ಹೊರಗೆ ಹೋಗ್ತಿನಿ ಎಂದು ಎಂದಿನ ತಮ್ಮ ಶೈಲಿಯಲ್ಲಿ ಡೈಲಾಗ್ ಹೊಡೆದಿದ್ದಾರೆ.

 

advertisement

ಒಂದೇ ವಾರ ಇಬ್ಬರು ಎಲಿಮಿನೇಟ್

ಕಳೆದ ವಾರದ ಅಂತ್ಯದಲ್ಲಿ ಬಿಗ್ ಬಾಸ್ ಸ್ಪರ್ಧಿಗಳಿಗೆ ಡಬಲ್ ಶಾಕ್ ನೀಡಿತ್ತು. ಅಂದರೆ ಎರಡೆರಡು ಎಲಿಮಿನೇಷನ್ (Double Elimination) ನಡೆಸಲಾಗಿತ್ತು.. ಶನಿವಾರದ ಸಂಚಿಕೆಯಲ್ಲಿ ಇಶಾನಿ ಮನೆಯಿಂದ ಹೊರ ನಡೆದಿದ್ದರೆ, ಭಾನುವಾರದ ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ ಸಂಚಿಕೆಯಲ್ಲಿ ಭಾಗ್ಯಶ್ರೀ ಔಟ್ ಆಗಿದ್ದರು. ಈ ಹಿಂದೆ ಎರಡೆರೆಡು ಬಾರಿ ಎಲಿಮಿನೇಷನ್ ಪ್ರಕ್ರಿಯೆ ನಡೆದಿರಲಿಲ್ಲ. ದಸರಾ ಹಬ್ಬ ಮತ್ತು ವರ್ತೂರ್ ಸಂತೋಷ್ ಅವರ ಕಾರಣದಿಂದ ಎಲಿಮಿನೇಷನ್ ನಡೆಯದೆ ಸ್ಪರ್ಧಿಗಳು ಬಚಾವಾಗಿದ್ದರು. ಆದರೆ ಈ ಬಾರಿ ಹಾಗಾಗಲಿಲ್ಲ. ಬಿಗ್ ಬಾಸ್ ಮನೆಯಿಂದ ಇದುವರೆಗೆ 5 ಮಂದಿ ಹೊರ ಹೋಗಿದ್ದಾರೆ. ಸ್ನೇಕ್ ಶ್ಯಾಮ್, ಗೌರೀಶ್ ಅಕ್ಕಿ, ರಕ್ಷಕ್ ನಂತರ ಇದೀಗ ಇಶಾನಿ ಮತ್ತು ಭಾಗ್ಯಶ್ರೀ ತಮ್ಮ ಸ್ಪರ್ಧೆಯನ್ನು ಕೊನೆಗೊಳಿಸಿದ್ದಾರೆ.

ಇನ್ನು ಬಿಗ್ಬಾಸ್ ಮನೆಗೆ ಇಲ್ಲಿಯವರೆಗೆ ಶಾಸಕ ಪ್ರದೀಪ್ ಈಶ್ವರ್ ಹಾಗೂ ಬಿಗ್ಬಾಸ್ 4 ವಿಜೇತ ನಟ ಪ್ರಥಮ್, ನಟಿ ತಾರಾ ಅನುರಾಧಾ ಹಾಗೂ ಭಾಗ್ಯಲಕ್ಷ್ಮಿ ಧಾರವಾಹಿ ಖ್ಯಾತಿಯ ಸುಷ್ಮಾ ಕೆ ರಾವ್ ಅಥಿತಿಗಳಾಗಿ ಆಗಮಿಸಿದ್ದಾರೆ. ಇವರೆಲ್ಲ ಸ್ಪರ್ಧಿಗಳಿಗೆ ಟಾಸ್ಕ್ ನೀಡಲು ಹಾಗೂ ಪ್ರೋತ್ಸಾಹ ತುಂಬಲು ಬಂದಿದ್ದರು.
ಇದೀಗ ಬಿಗ್ಬಾಸ್ ಮನೆಗೆ ಕಾಲಿಟ್ಟ ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮಾ ಯಾಕೆ ಬಂದಿದ್ದಾರೆ? ಸ್ಪರ್ಧಿಯಾಗಿರಲು ಬಂದಿದ್ದ ಇಲ್ಲ ಸ್ಪೆಷಲ್ ಗೆಸ್ಟ್? ಇವರು ಯಾವ ರೀತಿಯ ಟ್ವಿಸ್ಟ್‌ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

advertisement

Leave A Reply

Your email address will not be published.