Virat Kohli: ಕೊಹ್ಲಿಯ ಫಿಟ್ನೆಸ್ ಬ್ಯಾಂಡ್ ಮುಂದೆ ಆಪಲ್ ವಾಚ್ ಕೂಡ ಫೇಲ್, ಬೆಲೆ ಎಷ್ಟು?
Virat Kohli Spotted Wearing Whoop Fitness Band

advertisement
ಸದಾ ಫಿಟ್ ಆಗಿರುವ ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (Virat Kohli), ಡಯಟ್ ವಿಚಾರದಲ್ಲಿ ತುಂಬ ಕಟ್ಟುನಿಟ್ಟು. ಏನೇ ಸೇವಿಸಬೇಕೆಂದರೂ ಅಳೆದು ತೂಗಿಯೇ ಹೊಟ್ಟೆಗಿಳಿಸುತ್ತಾರೆ. ಹಾಗಾಗಿಯೇ ಇಂದಿಗೂ ಅಷ್ಟೇ ಲವಲವಿಕೆಯಿಂದ ಫಿಟ್ ಆಗಿದ್ದಾರೆ ಕೊಹ್ಲಿ. ನಿನ್ನೆ ವಿಶ್ವಕಪ್ ಕ್ರಿಕೆಟ್‌ನ ಫೈನಲ್‌ನಲ್ಲಿ ಭಾರತವು ಆಸ್ಟ್ರೇಲಿಯಾದಿಂದ ಹೀನಾಯ ಸೋಲನ್ನು ಅನುಭವಿಸಿತು ಆದರೆ ವಿರಾಟ್ ಕೊಹ್ಲಿ ಅವರು ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರೆಂಬ ಕೀರ್ತಿ ಪಡೆದಿದ್ದಾರೆ. ಅವರ ಫಿಟ್ನೆಸ್ನ ರಹಸ್ಯವೆಂದರೆ ಡಯಟ್ ಆಹಾರ, ವರ್ಕೌಟ್ ಹಾಗೆಯೇ ಕೊಹ್ಲಿ ಧರಿಸುವ ವಿಶೇಷ ಫಿಟ್ನೆಸ್ ಬ್ಯಾಂಡ್.
ವೂಪ್ ಫಿಟ್ನೆಸ್ ಬ್ಯಾಂಡ್(Whoop Fittness Band)
ಕೇಳಲು ವಿಚಿತ್ರ ಹೆಸರು ಅನ್ನಿಸಿದರೂ ಕೂಡ ವೂಪ್ ಫಿಟ್ನೆಸ್ ಬ್ಯಾಂಡ್ ತುಂಬಾ ವಿಶೇಷವಾಗಿದೆ, ಇದು ಆಹಾರದಿಂದ ,ನಿದ್ರೆ ಮತ್ತು ರೆಸ್ಟ್ , ಹೃದಯ ಬಡಿತ ಸೇರಿದಂತೆ ಎಲ್ಲಾ ವಿವರಗಳನ್ನು ಒದಗಿಸುತ್ತದೆ. ಇದು ವಿರಾಟ್ ಕೊಹ್ಲಿ ಅವರು ಫಿಟ್ ಆಗಿರಲು ಸಹಾಯ ಮಾಡುತ್ತದೆ. ಸಾಮಾನ್ಯ ಫಿಟ್‌ನೆಸ್ ಬ್ಯಾಂಡ್‌ಗಿಂತ ವಿಭಿನ್ನವಾಗಿರುವ ಈ ಬ್ಯಾಂಡ್ ಕ್ರಿಕೆಟ್ ಪಂದ್ಯದ ಸಮಯದಲ್ಲಿ ವಿರಾಟ ಕೊಹ್ಲಿ ಕೈಗೆ ಧರಿಸಿರುವುದನ್ನು ಗಮನಿಸಿರುತ್ತೀರಿ. ಸಾಮಾನ್ಯವಾಗಿ ಎಲ್ಲಾ ಸೆಲೆಬ್ರಿಟಿಗಳು
ಅತ್ಯುತ್ತಮ ಟೆಕ್ನಾಲಜಿ ಹೊಂದಿರುವ ಆಪಲ್ ವಾಚ್ ಧರಿಸಿರುವುದನ್ನು ನೋಡಿರಬಹುದು. ಆದರೆ ವಿರಾಟ್ ಕೊಹ್ಲಿ ವೂಪ್ (Whoop) ಫಿಟ್ನೆಸ್ ಬ್ಯಾಂಡ್ ಅನ್ನು ಬಳಸುತ್ತಾರೆ.
ವೂಪ್ ಬ್ಯಾಂಡ್ ವಿಶೇಷವೇನು?
ಎಲ್ಲ ಫಿಟ್ನೆಸ್ ಬ್ಯಾಂಡ್ಗಳಿಗಿಂತ ವಿಭಿನ್ನವಾಗಿರುವ ಈ ಬ್ಯಾಂಡ್‌ನಲ್ಲಿ ಯಾವುದೇ ಸ್ಕ್ರೀನ್ ಅಥವಾ ಡಿಸ್‌ಪ್ಲೇ ಇರೋದೆ ಇಲ್ಲ.ಇದು ಸ್ಮಾರ್ಟ್ ವಾಚ್ ಅಥವಾ ಫಿಟ್‌ನೆಸ್ ಬ್ಯಾಂಡ್‌ನಂತೆ ಕಾಣೋದು ಇಲ್ಲ. ಈ ಬ್ಯಾಂಡ್ ಅಮೇರಿಕನ್ ಕಂಪನಿ WHOOP ತಯಾರಿಸುತ್ತದೆ. ಇದು ನೋಡೋಕೆ ಸಾಮಾನ್ಯ ಬ್ಯಾಂಡ್ ತರಹವೆ ಕಾಣುತ್ತದೆ. ಆದರೆ ಇದರಲ್ಲಿ 5 ಸೆನ್ಸರ್‌ಗಳನ್ನು ಇದ್ದು ಇದು ಬ್ಯಾಟರಿ ಚಾಲಿತವಾಗಿದೆ. ಇದನ್ನು ಒಮ್ಮೆ ಚಾರ್ಜ್ ಮಾಡಿದರೆ 5 ದಿನಗಳ ಕಾಲ ಆರಾಮವಾಗಿ ಬಳಸಬಹುದಾಗಿದೆ. ಇದನ್ನು ಎಲ್ಲ ಫಿಟ್ನೆಸ್ ಬ್ಯಾಂಡ್ ಹಾಗೆಯೇ ಮೊಬೈಲ್ ಅಪ್ಲಿಕೇಶನ್‌ನೊಂದಿಗೆ ಜೋಡಿಸಬೇಕು. ಇದರ ನಂತರ, ನಮ್ಮ ದೈಹಿಕ ಆರೋಗ್ಯದ ವಿವರಗಳನ್ನು ಪಡೆಯಬಹುದು.
ಅಷ್ಟೇ ಅಲ್ಲ ಒಂದು ವೇಳೆ ನಮಗೆ ಹುಷಾರಿಲ್ಲ ಎಂದರೂ ಈ ಫಿಟ್ನೆಸ್ ಬ್ಯಾಂಡ್ ನಮಗೆ ಚೇತರಿಸಿಕೊಳ್ಳಲು ಎಷ್ಟು ದಿನ ಬೇಕು ಎಂಬ ಮಾಹಿತಿಯನ್ನು ಕೂಡ ನೀಡುತ್ತದೆ. ಇದರೊಂದಿಗೆ, ನಿದ್ರೆಯ ಕುರಿತಾಗಿ ಬಳಕೆದಾರರ ಹೃದಯ ಬಡಿತ, ತಾಪಮಾನ ಚಲನೆ, ಚರ್ಮದ ಉಷ್ಣಾಂಶದ ಕುರಿತಾಗಿಯೂ ಮಾಹಿತಿ ಪಡೆಯಬಹುದಾಗಿದೆ.
advertisement
ಈ ಬ್ಯಾಂಡ್ ಗಳು 5 ಎಲ್ಇ ಡಿ ಗಳು ಮತ್ತು 4 ಫೋಟೋ ಡಯೋಡ್ (Photodiode) ಹೊಂದಿದೆ. ಹಾಗಾಗಿ ಇದು ನಿಖರವಾದ ಡೇಟಾವನ್ನು ಒದಗಿಸುತ್ತದೆ. ಈ ಫಿಟ್ನೆಸ್ ಬ್ಯಾಂಡ್ ಪ್ರತಿದಿನ ಸುಮಾರು 100MB ಡೇಟಾವನ್ನು ಸಂಗ್ರಹಿಸುತ್ತದೆ. ಅಲ್ಲದೆ ಇದು ಸಂಪೂರ್ಣವಾಗಿ ವಾಟರ್ ಪ್ರೂಫ್ ಆಗಿದ್ದು ನೀರಲ್ಲಿ ಬಿದ್ದರು ಏನೂ ಆಗದು.
ಇದರ ಬೆಲೆ ಏಷ್ಟು ಗೊತ್ತಾ? ಚಂದಾದಾರಿಕೆ ಪಡೆಯೋದು ಹೇಗೆ?
WHOOP ಫಿಟ್‌ನೆಸ್ ಬ್ಯಾಂಡ್ ನ ಬೆಲೆ 300 ಡಾಲರ್ ಅಂದರೆ ಸುಮಾರು 25 ಸಾವಿರ ರೂಪಾಯಿ ಅಂದರೆ 19,895 ರೂಪಾಯಿಗಳ ವಾರ್ಷಿಕ ಚಂದಾದಾರಿಕೆಯೊಂದಿಗೆ ಇದನ್ನು ಪ್ರಾರಂಭಿಸಲಾಗಿದೆ. ಸದ್ಯ 239 ಡಾಲರ್ ಅಂದರೆ 19 ಸಾವಿರ ರೂಪಾಯಿಗೆ ಖರೀದಿಸಬಹುದು. ಇದರ 2 ವರ್ಷದ ಚಂದಾದಾರಿಕೆ ಬೆಲೆ 480 ಡಾಲರ್ ಅಂದರೆ 40 ಸಾವಿರ ರೂಪಾಯಿ, ಮಾಸಿಕ ಚಂದಾದಾರಿಕೆ 30 ಡಾಲರ್ ಅಂದರೆ 25000 ರೂಪಾಯಿ.
ಇನ್ನು ಇದು 28 ಬಣ್ಣಗಳಲ್ಲಿ ಲಭ್ಯವಿದ್ದು ಬೇಕಾದ ಬಣ್ಣವನ್ನು ಆಯ್ಕೆ ಮಾಡಿ ಕೊಳ್ಳಬಹುದಾಗಿದೆ. ಈಗಾಗಲೇ WHOOP ಫಿಟ್ನೆಸ್ ಬ್ಯಾಂಡ್ 40 ದೇಶಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. ಆದರೆ ಭಾರತದಲ್ಲಿ ಇನ್ನೂ ಸಾಮಾನ್ಯ ಜನರು ಖರೀದಿಸಲು ಲಭ್ಯವಿಲ್ಲ.
ಯಾರ್ಯಾರ ಕೈಯಲ್ಲಿದೆ ಈ ಫಿಟ್ನೆಸ್ ಬ್ಯಾಂಡ್?
ವಿರಾಟ್ ಕೊಹ್ಲಿಯನ್ನು ಹೊರತುಪಡಿಸಿ ಈ ಫಿಟ್ನೆಸ್ ಬ್ಯಾಂಡ್ ಅನ್ನು ಬಾಸ್ಕೆಟ್‌ಬಾಲ್ ತಾರೆ ಲೆಬ್ರಾನ್ ಜೇಮ್ಸ್ (LeBron James), ಒಲಿಂಪಿಕ್ ಈಜು ತಾರೆ ಮೈಕೆಲ್ ಫೆಲ್ಪ್ಸ್ (Michael Phelps) ಮತ್ತು ಗಾಲ್ಫ್ ಆಟಗಾರರಾದ ರೋರಿ ಮೆಕ್‌ಲ್ರಾಯ್ (Rory McIlroy) ಮತ್ತು ಟೈಗರ್ ವುಡ್ಸ್ (Tiger Woods) ಕೂಡ ಧರಿಸುತ್ತಾರೆ.
Advertisement